Asianet Suvarna News Asianet Suvarna News

ಮದುವೆ ಪ್ರಪೋಸ್ ಮಾಡಿದ ಹುಡುಗನ ಪ್ರೀತಿಗೆ ಕರಗಿದ ನಟಿ ಸಮಂತಾ

ನಟ ನಾಗ ಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲಿಯೇ ನಟಿ ಸಮಂತಾ ಕೂಡ ಮಧ್ಯಮ ವರ್ಗದ ಹುಡುಗನನ್ನು 2ನೇ ಮದುವೆಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

Actress Samantha agreed to second marry middle class boy after Naga Chaitanya engagement sat
Author
First Published Aug 11, 2024, 6:00 PM IST | Last Updated Aug 12, 2024, 2:01 PM IST

ಹೈದರಾಬಾದ್ (ಆ.11): ನಟಿ ಸಮಂತಾ ರುಥ್‌ಪ್ರಭು ಅವರ ಮಾಜಿ ಗಂಡ ನಾಗ ಚೈತನ್ಯ ಅವರು ಎರಡನೇ ಮದುವೆಯಾಗಲು ಶೋಭಿತಾ ಧೂಲಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಪೋಸ್ ಮಾಡಿದ ಸಾಮಾನ್ಯ ಮಧ್ಯಮ ವರ್ಗದ ಹುಡುಗನನ್ನು ಮದುವೆ ಮಾಡಿಕೊಳ್ಳಲು ನಟಿ ಸಮಂತಾ ಒಪ್ಪಿಗೆ ಸೂಚಿಸಿದ್ದಾಳೆ.

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರ ಮದುವೆ ಡಿವೋರ್ಸ್ ಆಗಿ ಇಲ್ಲಿದೆ ಮೂರು ವರ್ಷಗಳು ಕಳೆದಿವೆ. ಇದೀಗ ಪುನಃ ನಾಗಚೈತನ್ಯ ಅವರು ನಟಿ ಶೋಭಿತಾ ಧೂಲಿಪಾಲ ಅವರೊಂದಿಗೆ ಆ.8ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಕೌಂಟರ್ ಕೊಡಲು ಮುಂದಾದ ನಟಿ ಸಮಂತಾ ಕೂಡ ಮಧ್ಯಮ ವರ್ಗದ ಯುವಕನನ್ನು ಮುದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇವಲ ಜಿಮ್ ಅನ್ನು ತೋರಿಸಿ ಮದುವೆಯ ಪ್ರಸ್ತಾಪ ಮಾಡಿಕೊಂಡವನಿಗೆ ನಾನು ನಿನ್ನ ಮದುವೆ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾಳೆ.

ಬೆಳ್ಳಂಬೆಳಗ್ಗೆ ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥ ಮುಗಿಸಿ ಫೋಟೋ ಹಂಚಿಕೊಂಡ ನಟ ನಾಗಾರ್ಜುನ!

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಮುಖೇಶ್ ಚಿಂತಾಲ ಎನ್ನುವ ವ್ಯಕ್ತಿ ಮೂಕೇಶ್ ಎಂಬ ಖಾತೆಯ ಮೂಲಕ ವಿಡಿಯೋ ಕ್ರಿಯೇಟರ್ ಆಗಿದ್ದಾರೆ. ಈತನೊಬ್ಬ ಮಧ್ಯಮ ವರ್ಗದ ಹುಡುಗನಾಗಿದ್ದು, ಹಲವು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಆದರೆ, ಕಳೆದ ಮೂರು ದಿನಗಳ ಹಿಂದೆ ನಾಗ ಚೈತನ್ಯ ಅವರು ಇನ್ನೊಂದು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಂತೆ ಸಮಂತಾಗೆ ಪ್ರಪೋಸ್ ಮಾಡಲು ವಿಡಿಯೋ ಮಾಡಿ ಟ್ಯಾಗ್ ಮಾಡಿದ್ದಾನೆ. ನೀವು ನನ್ನನ್ನು ದಯವಿಟ್ಟು ಮದುವೆ ಮಾಡಿಕೊಳ್ಳಿ ಎಂದು ಬೇಡಿಕೊಂಡಿದ್ದಾನೆ.

ಇನ್ನು ವಿಡಿಯೋದಲ್ಲಿ ನಾನು ಸಮಂತಾಳ ಬಳಿಗೆ ಹೋಗುತ್ತಿರುವಾಗ ಅವರು ನನ್ನ ಚಿಂತಿಸುವ ಅಗತ್ಯವಿಲ್ಲ. ನಾನು ಯಾವಾಗಲೂ ಅವರೊಂದಿಗೆ ಇರುತ್ತೇನೆ. ನಾನು ಮತ್ತು ನೀವು ದೇವರು ಸೃಷ್ಟಿಸಿದ ಉತ್ತಮ ಜೋಡಿಗಳು. ನಾನು ನಿಮ್ಮನ್ನು ಮದುವೆಯಾಗಲು ಮುಕ್ತ ಮನಸ್ಸಿನಿಂದ ಸಿದ್ಧವಾಗಿದ್ದೇನೆ. ನನಗೆ ಕೇವಲ 2 ವರ್ಷ ಕೊಡಿ ಆರ್ಥಿಕವಾಗಿ ತುಂಬಾ ಸಬಲನಾಗಿ ನಿಮ್ಮ ಮುಂದೆ ಬಂದು ಮದುವೆ ಮಾಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಈ ನನ್ನ ಹೃದಯವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಪ್ಲೀಸ್.. ಪ್ಲೀಸ್.. ಪ್ಲೀಸ್.. ನನ್ನನ್ನು ಮದುವೆ ಮಾಡಿಕೊಳ್ಳಿ Please Marry me, pls Marry me Samantha ಎಂದು ಮಂಡಿಯೂರಿ, ಕೈಮುಗಿದು ಬೇಡಿಕೊಂಡಿದ್ದಾನೆ. 

 
 
 
 
 
 
 
 
 
 
 
 
 
 
 

A post shared by Mukesh Chintha (@mooookesh)

ಮುಖೇಶ್ ಚಿಂತಾಲನ ವಿಡಿಯೋ ನೋಡಿದ ಸಮಂತಾ ಸ್ವತಃ ಯುವಕನ ಮದುವೆ ಪ್ರಸ್ತಾಪದ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಪ್ರಸ್ತಾಪದ ವೇಳೆ ಅವನ ಹಿಂದಿರುವ ಜಿಮ್ ಅನ್ನು ನೋಡಿ ನನ್ನನ್ನು ಒಪ್ಪಿಸಿದ್ದಾನೆ (The gym in the background almost convinced me ♥️) ಎಂದು ಹಾರ್ಟ್ ಇಮೋಜಿ ಕಳಿಸುವ ಮೂಲಕ ಮದುವೆಗೆ ಒಪ್ಪಿಕೊಂಡಿರುವ ರೀತಿಯಲ್ಲಿ ರಿಪ್ಲೈ ಮಾಡಿದ್ದಾರೆ. ಅವರ ಪ್ರತಿಕ್ರಿಯೆಗೆ ನೂರಾರು ಜನರು ಕಾಮೆಂಟ್ ಮಾಡಿದ್ದು, ನೀವು ಲಕ್ಕಿ ಗರ್ಲ್‌ ಎಂದಿದ್ದಾನೆ. ಇನ್ನು ಮುಖೇಶ್‌ಗೆ ನೀನು ಜೀವನದಲ್ಲಿ ಗೆದ್ದೆ, ಲಕ್ಕಿ ಬಾಯ್, ಕಂಗ್ರಾಟ್ಸ್‌ ಎಂದು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಇನ್ನು ಮದುವೆ ಯಾವಾಗ ಎಂದು ಕೇಳಿದರೆ ಸಮಂತಾರನ್ನು ಭೇಟಿ ಮಾಡಿ ಮುಂದಿನ ಮಾಹಿತಿ ತಿಳಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!

ನಟಿ ಸಮಂತಾ ರುಥ್‌ಪ್ರಭು ಜೊತೆ ವಿಚ್ಛೇದನ (divorce) ಪಡೆದು ಮೂರು ವರ್ಷಗಳ ನಂತರ ನಟ ನಾಗಚೈತನ್ಯ ( Actor Naga Chaitanya ) ಮತ್ತೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ನಟಿ ಸಮಂತಾಳಿಂದ ದೂರವಾದ ಮೇಲೆ ನಾಗ ಚೈತನ್ಯ ಹಾಗೂ ನಟಿ ಶೋಭಿತಾ (Shobhita) ಧೂಲಿಪಾಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಾ ರಿಲೇಷನ್‌ಶಿಪ್‌ನಲ್ಲಿದ್ದರು. ದೇಶ, ವಿದೇಶಗಳಿಗೆ ಭೇಟಿ ನೀಡುತ್ತಾ ಗಲ್ಲಿಗಳಲ್ಲಿ ಕೈ-ಕೈ ಹಿಡಿದು ಸುತ್ತಾಡಿದ್ದರು. ಇದೀಗ ಆ.8ರಂದು ನಾಗ ಚೈತನ್ಯ (Nagachaitanya) ಹಾಗೂ ನಟಿ ಶೋಭಿತಾ ಧೂಲಿಪಾಲ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ನಂತರ ನಟ ಅಕ್ಕಿನೇನಿ ನಾಗಾರ್ಜುನ ಅವರೇ ಸ್ವತಃ ತಮ್ಮ ಪುತ್ರ ಹಾಗೂ ಭಾವಿ ಸೊಸೆಯ ನಿಶ್ಚಿತಾರ್ಥ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

Latest Videos
Follow Us:
Download App:
  • android
  • ios