ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಮೈನಸ್ ಶೇ.0.26;ಸತತ 6 ತಿಂಗಳಿಂದ ಶೂನ್ಯಕ್ಕಿಂತ ಕೆಳಮಟ್ಟದಲ್ಲಿ WPI ದರ

ಸೆಪ್ಟೆಂಬರ್ ತಿಂಗಳಲ್ಲಿ ಕೂಡ ಸಗಟು ಹಣದುಬ್ಬರ ಶೂನ್ಯಕ್ಕಿಂತ ಕೆಳ ಮಟ್ಟದಲ್ಲಿದೆ. ಈ ಮೂಲಕ ಸತತ ಆರು ತಿಂಗಳಿಂದ ಸಗಟು ಹಣದುಬ್ಬರ ಮೈನಸ್ ನಲ್ಲಿದೆ. 
 

Wholesale Inflation Contracts 026percent In September In Negative Zone For 6th Month In A Row anu

ನವದೆಹಲಿ (ಅ.16):  ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಮೈನಸ್ ಶೇ.0.26ಕ್ಕೆ ಕುಸಿದಿದೆ. ಈ ಮೂಲಕ ಸತತ ಆರು ತಿಂಗಳಿಂದ ಸಗಟು ಹಣದುಬ್ಬರ  ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಆಗಸ್ಟ್ ತಿಂಗಳಲ್ಲಿ ಸಗಟು ಹಣದುಬ್ಬರ 5 ತಿಂಗಳ ಗರಿಷ್ಠ ಮಟ್ಟ ಶೇ.-0.52ಕ್ಕೆ ಏರಿಕೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಬೆಲೆಗಳು ಶೇ.0.59ಕ್ಕೆ ಇಳಿಕೆಯಾಗಿದ್ದವು. ಆಗಸ್ಟ್ ನಲ್ಲಿ ಸಗಟು ಬೆಲೆಗಳು ಶೇ.0.20 ರಷ್ಟು ಏರಿಕೆ ಕಂಡಿದ್ದವು. ಕೆಮಿಕಲ್ ಹಾಗೂ ಕೆಮಿಕಲ್ ಉತ್ಪನ್ನಗಳು, ಮಿನರಲ್ ಆಯಿಲ್, ಜವಳಿಗಳು, ಮೂಲ ಧಾತುಗಳು ಹಾಗೂ ಆಹಾರ ಉತ್ಪನ್ನಗಳ ಬೆಲೆಗಳಲ್ಲಿ ಇಳಿಕೆಯಾಗಿರೋದ್ರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಸಗಟು ಬೆಲೆಗಳು ಇಳಿಕೆ ಕಂಡಿವೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆಹಾರ ಸೂಚ್ಯಂಕ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ.1.54ಕ್ಕೆ ಏರಿಕೆಯಾಗಿತ್ತು. ಇನ್ನು ಆಗಸ್ಟ್ ಆರ್ಟಿಕಲ್ ಹಣದುಬ್ಬರ ಶೇ.. 6.34ರಷ್ಟಿದ್ದು, ಸೆಪ್ಟೆಂಬರ್ ನಲ್ಲಿ ಶೇ.3.70ಕ್ಕೆ ಇಳಿಕೆ ಕಂಡಿದೆ. ಅದೇ ರೀತಿ ಇಂಧನ ಹಾಗೂ ವಿದ್ಯುತ್ ಬೆಲೆಗಳು ಶೇ.6.03ರಷ್ಟಿದಿದ್ದು, ಶೇ. 3.35ಕ್ಕೆ ಇಳಿಕೆ ಕಂಡಿದೆ.

ಇನ್ನು ಉತ್ಪಾದಿತ ವಸ್ತುಗಳ ಬೆಲೆಗಳು ಸೆಪ್ಟೆಂಬರ್ ತಿಂಗಳಲ್ಲಿ ಶೇ.1.34ಕ್ಕೆ ಇಳಿಕೆಯಾಗಿವೆ. ಜುಲೈ ಮತ್ತು ಆಗಸ್ಟ್ ನಲ್ಲಿ ಉತ್ಪಾದಿತ ವಸ್ತುಗಳ ಬೆಲೆಗಳು ಕ್ರಮವಾಗಿ ಶೇ. 2.58 ಹಾಗೂ ಶೇ.2.37ಕ್ಕೆ ಇಳಿಕೆಯಾಗಿವೆ. ಈರುಳ್ಳಿ ಸೇರಿದಂತೆ ತರಕಾರಿ ಬೆಲೆಗಳಲ್ಲಿ ಕೂಡ ಇಳಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇ.48.39ರಷ್ಟು ಏರಿಕೆ ಕಂಡಿದ್ದ ತರಕಾರಿ ಬೆಲೆಗಳು ಸೆಪ್ಟೆಂಬರ್ ನಲ್ಲಿ ಮೈನಸ್ ಶೇ.15ಕ್ಕೆ ಕುಸಿತ ಕಂಡಿವೆ. 

ಇಸ್ರೇಲ್‌ನಲ್ಲಿ ಕರೆನ್ಸಿ ಕುಸಿತ, ಭಾರತೀಯ ರೂಪಾಯಿ ಮೌಲ್ಯವೂ ಕುಸಿತ!

ಸಗಟು ಹಣದುಬ್ಬರ
ಸಗಟು ಬೆಲೆ ಆಧಾರಿತ ಹಣದುಬ್ಬರ ಅಥವಾ ಡಬ್ಲ್ಯುಪಿಐ ಹಣದುಬ್ಬರ ಎಂದರೆ ಉತ್ಪಾದಕರಿಂದ ವರ್ತಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಬೆಲೆಯನ್ನು ಆಧರಿಸಿ ಅಳೆಯುವ ಹಣದುಬ್ಬರವಾಗಿದೆ. ದೇಶದಲ್ಲಿನ ಹಣದುಬ್ಬರವನ್ನು ಪರಿಗಣಿಸುವಾಗ ಚಿಲ್ಲರೆ ಹಣದುಬ್ಬರವನ್ನು ಮುಖ್ಯವಾಗಿ ಪರಿಗಣಿಸುತ್ತಾರೆ. ಆದರೆ, ಸಗಟು ಹಣದುಬ್ಬರ ಚಿಲ್ಲರೆ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ.  ಹೀಗಾಗಿ ಸಗಟು ಹಣದುಬ್ಬರದಲ್ಲಿ ಹೆಚ್ಚಳವಾದ್ರೆ ಚಿಲ್ಲರೆ ಹಣದುಬ್ಬರದಲ್ಲಿ ಕೂಡ ಏರಿಕೆ ಕಂಡುಬರುತ್ತದೆ. 

ರೆಪೋದರ ಏರಿಸದ ಆರ್ ಬಿಐ
ಇನ್ನೊಂದೆಡೆ ಈ ತಿಂಗಳ ಪ್ರಾರಂಭದಲ್ಲಿ ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿರಿಸುವ ತೀರ್ಮಾನ ಕೈಗೊಳ್ಳಲಾಗಿದೆ. . ಹೀಗಾಗಿ ರೆಪೋ ದರ ಈ ಹಿಂದಿನಂತೆ  6.5% ರಷ್ಟೇ ಇದೆ. ಇನ್ನು, ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು 5.4% ಇರಲಿದೆ ಮತ್ತು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಪ್ರಮಾಣವು 5.2% ಕ್ಕೆ ಇಳಿಯಬಹುದು ಎಂದೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರೀಕ್ಷಿಸಿದೆ. ತರಕಾರಿ ಬೆಲೆ ಇಳಿಕೆ ಮತ್ತು ಅಡುಗೆ ಅನಿಲ ಸಿಲಿಂಡರ್ ದರ ಕಡಿತದಿಂದ ಹಣದುಬ್ಬರ ತಗ್ಗಿಸಲಿದೆ ಎಂದೂ ಆರ್‌ಬಿಐ ಗವರ್ನರ್ ಹೇಳಿದ್ದಾರೆ. 

ಎನ್‌ಪಿಎಸ್‌, ಪಿಪಿಎಫ್‌ ಅಥವಾ ವಿಪಿಎಫ್‌? ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡ್ಬೇಕು ನೋಡಿ..

ಹಣದುಬ್ಬರ ಏರಿಕೆ ತಡೆಯಲು ಬಾಂಡ್
ಕೋವಿಡ್ -19 ಬಳಿಕ ದೇಶದಲ್ಲಿ ಹಣದುಬ್ಬರ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಅನೇಕ ಕ್ರಮಗಳನ್ನು ಕೂಡ ಕೈಗೊಂಡಿದೆ. ಈ ತಿಂಗಳು ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಹಣದುಬ್ಬರ  ಹತ್ತಿಕ್ಕಲು ಬಾಂಡ್‌ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ. ಈವರೆಗೆ ಹಣದುಬ್ಬರವನ್ನು ಬಡ್ಡಿ ದರ ಏರಿಕೆಯ ಮೂಲಕ ನಿಗ್ರಹಿಸಲು ಆರ್‌ಬಿಐ ಯತ್ನಿಸುತ್ತಲೇ ಬಂದಿತ್ತು. ಆದರೆ ಇದೀಗ ತನ್ನ ನಿಲುವಿನಲ್ಲಿ ಅದು ಬದಲಾವಣೆ ಮಾಡಿಕೊಂಡಿದ್ದು, ಹಣದುಬ್ಬರವನ್ನು ತನ್ನ ಗುರಿಯ ಸನಿಹಕ್ಕೆ ತರಲು ಬಾಂಡ್‌ ಬಿಡುಗಡೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ.

Latest Videos
Follow Us:
Download App:
  • android
  • ios