ಮಾರ್ಕೆಟ್‌ನಲ್ಲಿ ಮಹಾ ರಕ್ತಪಾತ: ದಲಾಲ್ ಸ್ಟ್ರೀಟ್‌ನಲ್ಲಿ ಹರಿದುಹೋದ 17 ಲಕ್ಷ ಕೋಟಿ ರೂಪಾಯಿ!
Market crash: ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944 ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056 ಕ್ಕೆ ತಲುಪಿದೆ. ಒಟ್ಟಾರೆ ಸೋಮವಾರ ಈವರೆಗೂ ಗರಿಷ್ಠ 17 ಲಕ್ಷ ಕೋಟಿ ರೂಪಾಯಿ ಕೊಚ್ಚಿಹೋಗಿದೆ.
ಮುಂಬೈ (ಆ.5): ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ 2ನೇ ದಿನವೂ ಕುಸಿದಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿರುವ ಕಾರಣ ಜಾಗತಿಕ ಮಾರುಕಟ್ಟೆಗಳು ದೊಡ್ಡಮಟ್ಟದಲ್ಲಿ ಕುಸಿದಿವೆ. ಸೋಮವಾರ 1 ಗಂಟೆಯ ವೇಳೆಗೆ ಹೂಡಿಕೆದಾರರ 17.03 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದ ಶುಕ್ರವಾರ ದೇಶದ ಮಾರುಕಟ್ಟೆಯ ಮೌಲ್ಯ 457.16 ಲಕ್ಷ ಕೋಟಿ ರೂಪಾಯಿ ಆಗಿದ್ದರೆ, ಸೋಮವಾರ ಇದು 440.13 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಸೆನ್ಸೆಕ್ಸ್ 2,037 ಅಂಕಗಳನ್ನು ಕಳೆದುಕೊಂಡು 78,944 ಕ್ಕೆ ಮತ್ತು ನಿಫ್ಟಿ 661 ಅಂಕಗಳನ್ನು ಕಳೆದುಕೊಂಡು 24,056 ಕ್ಕೆ ತಲುಪಿದೆ. ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಎಂ & ಎಂ, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೈಟಾನ್‌ನಂತಹ ಷೇರುಗಳು ಸೆನ್ಸೆಕ್ಸ್ 5.04% ವರೆಗೆ ಕುಸಿದವು. ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ 28 ಷೇರುಗಳು ರೆಡ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಸಂಖ್ಯೆಗಳಲ್ಲಿ ಇಂದಿನ ಮಾರುಕಟ್ಟೆ ಕುಸಿತದ ನೋಟ
ರೆಡ್ ಜೋನ್‌ನಲ್ಲಿ ನಿಫ್ಟಿ ಷೇರುಗಳು: ನಿಫ್ಟಿಯ 50 ಷೇರುಗಳ ಪೈಕಿ 46 ನಿಫ್ಟಿ ಶೇರುಗಳು ರೆಡ್‌ನಲ್ಲಿ ವಹಿವಾಟಾಗುತ್ತಿವೆ. ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಒಎನ್‌ಜಿಸಿ, ಶ್ರೀರಾಮ್ ಫೈನಾನ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಆರಂಭಿಕ ವ್ಯವಹಾರಗಳಲ್ಲಿ 4.37% ವರೆಗೆ ಕುಸಿದಿದೆ.
ಬಿಎಸ್‌ಇಯಲ್ಲಿ 88 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ತಲುಪಿವೆ: ಇಂದು 88 ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಮತ್ತೊಂದೆಡೆ, ಸೋಮವಾರದ ಆರಂಭಿಕ ವ್ಯವಹಾರಗಳಲ್ಲಿ 42 ಷೇರುಗಳು ಬಿಎಸ್‌ಇಯಲ್ಲಿ ತಮ್ಮ 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು.
ಮಾರ್ಕೆಟ್ ಫುಲ್ ರೆಡ್: 3,421 ಷೇರುಗಳ ಪೈಕಿ 394 ಷೇರುಗಳು ಗ್ರೀನ್ ಜೋನ್‌ನಲ್ಲಿ ವಹಿವಾಟು ನಡೆಸಿದರೆ. ಸುಮಾರು 2891 ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. 136 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಅಪ್ಪರ್ ಸರ್ಕ್ಯೂಟ್‌ಗಿಂತ ಲೋವರ್ ಸರ್ಕ್ಯೂಟ್ ಹೆಚ್ಚು: ಸ್ಟಾಕ್ ಮಾರುಕಟ್ಟೆಯು ಮುಂಜಾನೆ ಸೆಷನ್‌ನಲ್ಲಿ ಕುಸಿದಿದ್ದರಿಂದ ಸುಮಾರು 103 ಷೇರುಗಳು ತಮ್ಮ ಅಪ್ಪರ್ ಸರ್ಕ್ಯೂಟ್ ರೀಟ್ ಆದವು. ಮತ್ತೊಂದೆಡೆ, 197 ಷೇರುಗಳು ತಮ್ಮ ಲೋವರ್ ಸರ್ಕ್ಯೂಟ್ ರೀಚ್ ಆಗಿವೆ. ಇದು ಮಾರುಕಟ್ಟೆ ದುರ್ಬಲವಾಗಿದೆ ಅನ್ನೋದನ್ನು ಸೂಚಿಸಿದೆ.
ಎಫ್‌ಐಐ ಹೆಚ್ಚಿನ ಸೆಲ್ಲರ್‌ಗಳು: ತಾತ್ಕಾಲಿಕ ಎನ್‌ಎಸ್‌ಇ ಡೇಟಾ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಆಧಾರದ ಮೇಲೆ ರೂ 3,310 ಕೋಟಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ, ಆದರೆ ದೇಶೀಯ ಹೂಡಿಕೆದಾರರು ರೂ 2,965.94 ಕೋಟಿ ಷೇರುಗಳನ್ನು ಖರೀದಿಸಿದ್ದಾರೆ.
ಹಿಂದಿನ ದಿನದ ವಹಿವಾಟು: ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ 293 ಅಂಕಗಳ ಕುಸಿತದೊಂದಿಗೆ 24,717ಕ್ಕೆ ಮತ್ತು ಸೆನ್ಸೆಕ್ಸ್ 886 ಅಂಕಗಳನ್ನು ಕಳೆದುಕೊಂಡು 80,982ಕ್ಕೆ ಕೊನೆಗೊಂಡಿತ್ತು.
US ಮಾರುಕಟ್ಟೆ: ಯುಎಸ್ ಆರ್ಥಿಕತೆಯು ಆರ್ಥಿಕ ಹಿಂಜರಿತದ ಕಡೆಗೆ ಹೋಗಬಹುದು ಎನ್ನುವ ಮಾಹಿತಿ ಬರುತ್ತಿದೆ. ಕಳೆದ ವಾರ ಬಿಡುಗಡೆಯಾದ ದುರ್ಬಲ US ಉದ್ಯೋಗಗಳ ಮಾಹಿತಿಯು ಶುಕ್ರವಾರ US ಮಾರುಕಟ್ಟೆಗಳಲ್ಲಿ ಕುಸಿತಕ್ಕೆ ಕಾರಣವಾಗಿದೆ. NASDAQ ಸಂಯೋಜಿತ ಸೂಚ್ಯಂಕವು 417 ಅಂಕಗಳು ಅಥವಾ 2.43% ರಷ್ಟು ಕುಸಿದು 16,776 ಕ್ಕೆ ತಲುಪಿದರೆ, S&P 500 ಸೂಚ್ಯಂಕ 1.84% ಅಥವಾ 100 ಪಾಯಿಂಟ್‌ಗಳು ಕಡಿಮೆಯಾಗಿ 5,346 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 1.51% ಅಥವಾ 610 ಪಾಯಿಂಟ್‌ಗಳು ಶುಕ್ರವಾರ 39,737 ಕ್ಕೆ ಕುಸಿದವು. ಲೇಬರ್ ಮಾರ್ಕೆಟ್‌ನಲ್ಲಿ US ನಲ್ಲಿನ ಹೊಸ ಮಾಹಿತಿಯು 236,000 ಅಂದಾಜುಗಳಿಗಿಂತ 249,000 ನಿರುದ್ಯೋಗ ಕ್ಲೇಮ್ ಆಗಬಹುದು ಎಂದಿದೆ.
ಅಲ್ಲದೆ, US ನಲ್ಲಿ ಜುಲೈನಲ್ಲಿ ISM ಉತ್ಪಾದನೆಯು ಕುಸಿದಿದೆ ಎಂದು ಡೇಟಾ ತೋರಿಸಿದೆ. ISM ಉತ್ಪಾದನಾ ಸೂಚ್ಯಂಕವು ಜೂನ್‌ನಲ್ಲಿ 48.5% ರಿಂದ ಜುಲೈನಲ್ಲಿ 46.8% ಕ್ಕೆ ಕುಸಿಯಿತು. ಇದು ಎಂಟು ತಿಂಗಳ ಕನಿಷ್ಠ ಎನ್ನಲಾಗಿದೆ. ಅಮೆರಿಕದಲ್ಲಿ ಕಾರ್ಖಾನೆಗಳು ಇನ್ನೂ ಕುಸಿತದಲ್ಲಿದೆ ಎಂದು ಸೂಚಿಸುತ್ತದೆ. ಯುಎಸ್ ಮಾರುಕಟ್ಟೆಯಲ್ಲಿನ ದುರ್ಬಲ ಭಾವನೆಯು ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದೆ.ಭಾರತೀಯ ಷೇರು ಮಾರುಕಟ್ಟೆಗೆ ತಟ್ಟಿದ ಅಮೆರಿಕಾದ ಆರ್ಥಿಕ ಹಿಂಜರಿತ ಭೀತಿ : ದಿನದ ಆರಂಭದಲ್ಲೇ ಭಾರಿ ಕುಸಿತ
ಭಾರತೀಯ ಷೇರು ಮಾರುಕಟ್ಟೆಗೆ ತಟ್ಟಿದ ಅಮೆರಿಕಾದ ಆರ್ಥಿಕ ಹಿಂಜರಿತ ಭೀತಿ : ದಿನದ ಆರಂಭದಲ್ಲೇ ಭಾರಿ ಕುಸಿತ
ಏಷ್ಯನ್ ಮಾರ್ಕೆಟ್: ಜಪಾನ್‌ನ ನಿಕ್ಕಿ ಇಂದು 2747 ಅಂಕಗಳಿಂದ 33,162 ಅಂಕಗಳಿಗೆ ಕುಸಿದಿದೆ ಮತ್ತು ಹ್ಯಾಂಗ್ ಸೆಂಗ್ 36 ಅಂಕಗಳಿಂದ 16,908ಕ್ಕೆ ಕುಸಿದಿದೆ. ತೈವಾನ್ ಸೂಚ್ಯಂಕವು 1584 ಅಂಕಗಳನ್ನು ಕಳೆದುಕೊಂಡು 20,044 ಕ್ಕೆ ತಲುಪಿದೆ. ಕೊಸ್ಪಿ ಸೋಮವಾರ 182 ಅಂಕಗಳ ಕುಸಿತ ಕಂಡು 2,494 ಅಂಕಗಳಿಗೆ ತಲುಪಿತ್ತು.
Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!
ಯುರೋಪಿಯನ್ ಮಾರ್ಕೆಟ್: FTSE ಶುಕ್ರವಾರ 108 ಅಂಕಗಳ ಕುಸಿತ ಕಂಡು 8174 ಕ್ಕೆ ತಲುಪಿದೆ. ಫ್ರಾನ್ಸ್‌ನ CAC 119 ಅಂಕಗಳನ್ನು ಕಳೆದುಕೊಂಡು 7251 ಕ್ಕೆ ತಲುಪಿತು ಮತ್ತು DAX 421 ಅಂಕಗಳು ಕಡಿಮೆಯಾಗಿ 17,661 ಕ್ಕೆ ಕೊನೆಗೊಂಡಿತು.