ಭಾರತದಲ್ಲಿ ಡಿಜಿಟಲ್ ರೂಪಾಯಿ ಪೇಪರ್ ಕರೆನ್ಸಿ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ: ಎಸ್ ಬಿಐ ಮುಖ್ಯಸ್ಥ ಖಾರ

ದೇಶದಲ್ಲಿ ಸೆಂಟ್ರಲ್  ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಪರಿಚಯಿಸಲಾಗಿದೆ. ಆದರೆ, ಇದು ಸಂಪೂರ್ಣವಾಗಿ ಭೌತಿಕ ಕರೆನ್ಸಿ ಸ್ಥಾನವನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ಎಸ್ ಬಿಐ ಮುಖ್ಯಸ್ಥ ದಿನೇಶ್ ಖಾರ ಅಭಿಪ್ರಾಯಪಟ್ಟಿದ್ದಾರೆ. 

Digital rupee has wider scope but it cant replace physical currency SBI chief anu

ನವದೆಹಲಿ (ಜು.20): ದೇಶದಲ್ಲಿ ಸೆಂಟ್ರಲ್  ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಹೊರತಂದಿರುವ ಸಮಯದಿಂದ ಡಿಜಿಟಲ್ ರೂಪಾಯಿಯ ಪ್ರಾಮುಖ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ದಿನೇಶ್ ಖಾರ ತಿಳಿಸಿದ್ದಾರೆ. ಅಲ್ಲದೆ, ಡಿಜಿಟಲ್ ರೂಪಾಯಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದರೂ ಕೂಡ ಅದು ಕಾಗದ ಅಥವಾ ಭೌತಿಕ ಕರೆನ್ಸಿ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮ್ಯೂಚುವಲ್ ಫಂಡ್ಸ್ ಅಥವಾ ವಿಮಾ ಸೇವೆಗಳು ಸೇರಿದಂತೆ ಹಣಕಾಸು ಸಂಸ್ಥೆಗಳನ್ನು ಸೇರಿಸಿಕೊಳ್ಳುವ ಮೂಲಕ ಡಿಜಿಟಲ್ ಕರೆನ್ಸಿಯ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಈ ಸಂಸ್ಥೆಗಳು ಸರ್ಕಾರ ಸೆಕ್ಯುರಿಟಿಗಳ (ಜಿ-ಸೆಕ್ಯುರಿಟಿ) ಅಥವಾ ರಾಜ್ಯ ಅಭಿವೃದ್ಧಿ ಸಾಲಗಳ ಸೆಟ್ಲಮೆಂಟ್ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಡಿಜಿಟಲ್ ಕರೆನ್ಸಿ ಪ್ರಾಮುಖ್ಯತೆ ಹೆಚ್ಚಲಿದೆ ಎಂಬ ಅಭಿಪ್ರಾಯವನ್ನು ಖಾರ ವ್ಯಕ್ತಪಡಿಸಿದ್ದಾರೆ. ಬುಧವಾರ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ ಹಣಕಾಸಿನ ಒಳಗೊಳ್ಳುವಿಕೆ ಹಾಗೂ ಫಿನ್ ಟೆಕ್ ಸಮಿತಿಯಲ್ಲಿ ಪಾಲ್ಗೊಂಡು ಮಾತನಾಡಿದ ಖಾರ, ಡಿಜಿಟಲ್ ಕರೆನ್ಸಿ ಬಗ್ಗೆ ಪ್ರಸ್ತಾಪಿಸಿದ್ದರು.

ಸಿಬಿಡಿಸಿ ದೇಶದಲ್ಲಿ ಚಲಾವಣೆಯಲ್ಲಿರುವ ಭೌತಿಕ ಕರೆನ್ಸಿಯ ಒಂದಿಷ್ಟು ಭಾಗವನ್ನು ಹಿಂಪಡೆಯಲಿದೆ. ಹಾಗೆಯೇ ಹಣಕಾಸಿನ ವ್ಯವಹಾರಗಳಲ್ಲಿ ದಕ್ಷತೆಯನ್ನು ತರಲಿದೆ ಎಂದು ಖಾರ ತಿಳಿಸಿದರು. ಇತ್ತೀಚಿಗೆ ಡಿಜಿಟಲ್ ಕರೆನ್ಸಿ ಅಥವಾ ಡಿಜಿಟಲ್ ರುಪಿ ಚಲಾವಣೆಗೆ ಸಂಬಂಧಿಸಿದ ಚಿಲ್ಲರೆ ಪೈಲಟ್ ಯೋಜನೆಗೆ ಚಾಲನೆ ನೀಡಿದ ಬಳಿಕ ದೇಶಾದ್ಯಂತ ನಗದು ನೆಟ್ ವರ್ಕ್ ಸೃಷ್ಟಿಯಾಗಿದೆ. ಇನ್ನು ಚಿಲ್ಲರೆ ವಹಿವಾಟುಗಳಲ್ಲಿ ಕೂಡ ಇದರ ಬಳಕೆ ಉತ್ತಮವಾಗಿದೆ. ಕರೆನ್ಸಿ ನಿರ್ವಹಣೆಯ ವೆಚ್ಚ ಕಡಿತ ಹಾಗೂ ದೇಶದ ಆರ್ಥಿಕತೆಯನ್ನು ವ್ಯವಸ್ಥಿತಗೊಳಿಸುವ ವಿಚಾರಗಳನ್ನು ಪರಿಗಣಿಸಿದರೆ, ಡಿಜಿಟಲ್ ಕರೆನ್ಸಿ ಸುದೀರ್ಘ ಹಾದಿಯನ್ನು ಹೊಂದಿದೆ ಎಂದು ಎಸ್ ಬಿಐ ಮುಖ್ಯಸ್ಥರು ತಿಳಿಸಿದರು.

ಬ್ಯಾಂಕ್ ನಲ್ಲಿ ಡಿಜಿಟಲ್ ರೂಪಾಯಿ ಎಫ್ ಡಿ ಖಾತೆ ತೆರೆಯಲು ಅವಕಾಶವಿದೆಯಾ? ಕೇಂದ್ರ ಸರ್ಕಾರ ಏನ್ ಹೇಳಿದೆ?

ಡಿಜಿಟಲ್ ಕರೆನ್ಸಿ ಮಾತ್ರ ಭೌತಿಕ ಕರೆನ್ಸಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ದೇಶದ ಗಾತ್ರವನ್ನು ನೋಡಿದರೆ ಸಿಬಿಡಿಸಿ ಭೌತಿಕ ಕರೆನ್ಸಿ ಸ್ಥಾನವನ್ನು ಆಕ್ರಮಿಸಲು ಸಾಧ್ಯವಿಲ್ಲ. ಭೌತಿಕ ಕರೆನ್ಸಿ ಹಾಗೂ ಡಿಜಿಟಲ್ ಕರೆನ್ಸಿ ಎರಡೂ ಕೂಡ ಪರಸ್ಪರ ಸಮಾನಂತರವಾಗಿ ಇರಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ತಿಳಿಸಿದರು. ಇನ್ನು ಸಿಬಿಡಿಸಿಯನ್ನು ಪರಿಚಯಿಸಿರೋದು ದೇಶದ ಜಿಡಿಪಿ ಹೆಚ್ಚಳಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿರೀಕ್ಷೆಯೂ ಇದೆ ಎಂದು ಖಾರ ಅಭಿಪ್ರಾಯ ವ್ಯಕ್ತಪಡಿಸಿದರು. 

2022ರ ನವೆಂಬರ್ 1ರಂದು ಭಾರತದ ಮೊದಲ ಡಿಟಿಟಲ್‌ ರುಪಿಗೆ (Digital Rupee) ಚಾಲನೆ ನೀಡಲಾಗಿತ್ತು. ಕ್ರಿಪ್ಟೋ ಕರೆನ್ಸಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಆರ್ ಬಿಐ, ಈ ಹಿಂದೆ ತನ್ನದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡೋದಾಗಿ ತಿಳಿಸಿತ್ತು. ಆ ಬಳಿಕ ಡಿಜಿಟಲ್ ಕರೆನ್ಸಿ ಅಥವಾ ಇ-ರುಪಿಯನ್ನು ಪರಿಚಯಿಸಿದೆ. 

ರಿಟೇಲ್ ಮಾರುಕಟ್ಟೆ ಪ್ರವೇಶಿಸಿದ ಡಿಜಿಟಲ್ ರೂಪಾಯಿ; ಈಗಲೇ ಬಳಕೆಗೆ ಲಭ್ಯವಾ?

ಇ-ರುಪಿ ಅಥವಾ ಡಿಜಿಟಲ್ ರುಪಿ ಅಂದ್ರೇನು?
ಇದು ಖಾಸಗಿ ವಲಯದ ಬಿಟ್‌ಕಾಯಿನ್‌ ರೀತಿಯಲ್ಲೇ, ಆರ್‌ಬಿಐ ಬಿಡುಗಡೆ ಮಾಡಿರುವ ಡಿಜಿಟಲ್‌ ಕರೆನ್ಸಿ. ಡಿಜಿಟಲ್‌ ಕರೆನ್ಸಿ ಕೂಡಾ ನೋಟು ಮತ್ತು ನಾಣ್ಯಗಳ ರೀತಿಯಲ್ಲೇ ಮೌಲ್ಯ ಮತ್ತು ಕಾನೂನಿನ ಎಲ್ಲಾ ಬೆಂಬಲ ಹೊಂದಿರುತ್ತದೆ. ಇದನ್ನು ಯಾವುದೇ ವಸ್ತು ಖರೀದಿಗೆ, ಯಾರಿಗಾದರೂ ಹಣ ಪಾವತಿಗೆ ಬಳಸಬಹುದು. ನೋಟಿನಷ್ಟೇ ವಿಶ್ವಾಸ, ಸುರಕ್ಷತೆ ಇದಕ್ಕೂ ಇದೆ. ಇ-ರುಪಿ ವೋಚರ್ ಅನ್ನು ಕ್ಯೂಆರ್ ಕೋಡ್ ಅಥವಾ ಎಸ್ ಎಂಎಸ್ ರೂಪದಲ್ಲಿ ಮೊಬೈಲ್ ಗೆ ಕಳುಹಿಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲು ಇ-ರುಪಿ ವೋಚರ್ ನೆರವು ನೀಡಲಿದೆ. 

Latest Videos
Follow Us:
Download App:
  • android
  • ios