Startups ಸಂಖ್ಯೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ನಾಲ್ಕನೇ ಸ್ಥಾನ; ನವೋದ್ಯಮದಲ್ಲಿ 50 ಮಿಲಿಯನ್ ಡಾಲರ್ ಹೂಡಿಕೆ
ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನ ಗಳಿಸಿದೆ. ಸ್ಟಾರ್ಟ್ಅಪ್ ಜಿನೋಮಿ ಸ್ಕೇಲ್ ಅಪ್ ವರದಿಯ ಮೊದಲ ಆವೃತ್ತಿಯಲ್ಲಿ ವಿಶ್ವದಲ್ಲಿ ಅತೀಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಭಾರತ 4ನೇ ಸ್ಥಾನದಲ್ಲಿದೆ.
ಬೆಂಗಳೂರು (ಸೆ.25): ಭಾರತ ನವೋದ್ಯಮಗಳ ( ಸ್ಟಾರ್ಟ್ ಅಪ್) ಮೂಲಕ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಈ ನಡುವೆ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಸ್ಟಾರ್ಟ್ಅಪ್ ಜಿನೋಮಿ ಸ್ಕೇಲ್ ಅಪ್ ವರದಿಯ ಮೊದಲ ಆವೃತ್ತಿಯಲ್ಲಿ ವಿಶ್ವದಲ್ಲಿ ಅತೀಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಭಾರತದ ಸ್ಟಾರ್ಟ್ ಅಪ್ ಗಳು 50 ಮಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆ ಪಡೆದಿವೆ ಎಂದು ವರದಿ ತಿಳಿಸಿದೆ. ಅಮೆರಿಕ, ಚೀನಾ ಹಾಗೂ ಇಂಗ್ಲೆಂಡ್ ಈ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿವೆ. ಆದರೆ, ಒಟ್ಟು ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಭಾರತ ಇಂಗ್ಲೆಂಡ್ ಗಿಂತ ಮುಂದಿದೆ. ಹಾಗೆಯೇ ಒಟ್ಟು ಟೆಕ್ ವ್ಯಾಲ್ಯೂ ಹೂಡಿಕೆಯಲ್ಲಿ ಕೂಡ ಇದು ಮುಂದಿದೆ. ಭಾರತದ 429 ಸ್ಟಾರ್ಟ್ ಅಪ್ ಗಳು 127 ಬಿಲಿಯನ್ ಡಾಲರ್ ವಿಸಿ ಹೂಡಿಕೆ ಜೊತೆಗೆ ಒಟ್ಟು 446 ಬಿಲಿಯನ್ ಡಾಲರ್ ಮೌಲ್ಯದ ಟೆಕ್ ಹೂಡಿಕೆಯನ್ನು ಕೂಡ ಪಡೆದಿವೆ.
ಈ ವರದಿಯು ಸ್ಟಾರ್ಟ್ ಅಪ್ ಗಳ ಯಶಸ್ವಿನ ವಿಚಾರವಾಗಿ ನಡೆದ ವರದಿಯನ್ನು ಒಳಗೊಂಡಿದೆ. ಯಾವ ವರ್ತನೆಗಳು, ಸಂಪನ್ಮೂಲಗಳು ಹಾಗೂ ಗುಣಲಕ್ಷಣಗಳು ಸ್ಟಾರ್ಟ್ ಅಪ್ ಗಳನ್ನು ವಿಭಿನ್ನವಾಗಿರಿಸಿವೆ ಎಂಬುದರ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ವರದಿ ಭಾರತದ ಶೇ.50 ಅಥವಾ ಅದಕ್ಕಿಂತ ಹೆಚ್ಚಿನ ಸ್ಟಾರ್ಟ್ ಅಪ್ ಗಳು ದೇಶದ ಹೊರಗಿನ ಗ್ರಾಹಕರನ್ನು ಹೊಂದಿವೆ ಎಂದು ಈ ವರದಿ ತಿಳಿಸಿದೆ. ಈ ಮೂಲಕ ಭಾರತದ ಸ್ಟಾರ್ಟ್ ಅಪ್ ಗಳು ತಮ್ಮ ಗ್ರಾಹಕರ ಪ್ರಮಾಣವನ್ನು ಹೆಚ್ಚಿಸಿಕೊಂಡಿವೆ.
ಆಗ ಇನ್ಫೋಸಿಸ್‌ನ ಆಫೀಸ್ ಬಾಯ್, ಈಗ ಎರಡು ಸ್ಟಾರ್ಟಪ್ ಮಾಲೀಕ!
ಅಮೆರಿಕ ಹೊರತುಪಡಿಸಿ ಇತರ ಬೃಹತ್ ರಾಷ್ಟ್ರಗಳಲ್ಲಿನ ಸ್ಟಾರ್ಟ್ ಅಪ್ ಗಳು ದೇಶೀಯ ಮಾರುಕಟ್ಟೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತವೆ. ಹೀಗಾಗಿ ದೇಶೀಯ ಮಾರುಕಟ್ಟೆ ಗಾತ್ರ ದೊಡ್ಡದಿರುವ ಸಮಯದಲ್ಲಿ ಜಾಗತಿಕ ಮಾರುಕಟ್ಟೆಗೆ ವಿಸ್ತರಿಸಲು ವಿಳಂಬ ಮಾಡೋದು ಉತ್ತಮವೇ ಆಗಿದೆ. ಭಾರತದ ವಿಷಯದಲ್ಲಿ ಕೂಡ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಭಾರತದಲ್ಲಿ ಬಿ2ಸಿ ಸ್ಟಾರ್ಟ್ ಅಪ್ ಗಳು ದೇಶದ ಹೊರಗಿನ ಮಾರುಕಟ್ಟೆಗೆ ಹೋಗದೆ ಯುನಿಕಾರ್ನ್ ಸ್ಟೇಟಸ್ ಪಡೆಯಬಹುದು ಹಾಗೂ ಬಿಲಿಯನ್ ಡಾಲರ್ ವ್ಯವಹಾರ ನಡೆಸಬಹುದು. 6 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಳೀಯ ಸಂಪರ್ಕ ಸೂಚ್ಯಂಕ ಹೊಂದಿರುವ ಸ್ಟಾರ್ಟ್ ಅಪ್ ಗಳು ಸ್ಕೇಲ್ ಅಪ್ ಸ್ಥಾನಕ್ಕೆ ಬಡ್ತಿ ಹೊಂದಬಹುದಾಗಿದೆ.
ಸ್ಕೇಲ್ ಅಪ್ ಎಂದರೇನು?
ಸ್ಕೇಲ್ ಅಪ್ ಎಂದರೆ ಸ್ಟಾರ್ಟ್ ಅಪ್ ಗಿಂತ ಮೇಲಿನ ಸ್ಥಾನ. ಸಾಮಾನ್ಯವಾಗಿ ಯಾವುದೇ ಹೊಸ ಸ್ಟಾರ್ಟ್ ಅಪ್ ಪ್ರಾರಂಭವಾದಾಗ ಮುಂದಿನ ಮೂರು ವರ್ಷಗಳಲ್ಲಿ ಅದು ಉದ್ಯೋಗಿಗಳ ಸಂಖ್ಯೆ ಅಥವಾ ವಾರ್ಷಿಕ ವಹಿವಾಟಿನಲ್ಲಿ ಶೇ.20ಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದರೆ ಅದನ್ನು ಸ್ಕೇಲ್ ಅಪ್ ಎಂದು ಪರಿಗಣಿಸಲಾಗುತ್ತದೆ. ಜಾಗತಿಕ ಸಂಪರ್ಕದ ಆಧಾರದಲ್ಲಿ ಸ್ಕೇಲ್ ಅಪ್ ಯಶಸ್ಸಿನ ದರ ಏರಿಕೆಯಾಗುತ್ತದೆ. ಇನ್ನು ಅಧಿಕ ಮಟ್ಟದ ಜಾಗತಿಕ ಸಂಪರ್ಕ ಹೊಂದಿರುವ ಸ್ಟಾರ್ಟ್ ಅಪ್ ಗಳು ಕಡಿಮೆ ಮಟ್ಟದ ಸಂಪರ್ಕ ಹೊಂದಿರುವ ಸ್ಟಾರ್ಟ್ ಅಪ್ ಗಳಿಗಿಂತ 3.2 ಹೆಚ್ಚು ಬಾರಿ ಸ್ಕೇಲಿಂಗ್ ಆಗುವ ಸಾಧ್ಯತೆ ಹೊಂದಿರುತ್ತವೆ.
ಕಾಲೇಜು ಶುಲ್ಕ ಪಾವತಿಸಲು ತಾಯಿ ಬ್ರಾಸ್ಲೆಟ್ ಮಾರಿದ ಮಗ ಇಂದು 110 ಕೋಟಿ ರೂ. ವಹಿವಾಟು ನಡೆಸೋ ಕಂಪನಿ ಒಡೆಯ
ಇನ್ನು ಸ್ಟಾರ್ಟ್ ಅಪ್ ಗಳ ಸಂಸ್ಥಾಪಕರು ಸ್ಕೇಲಿಂಗ್ ಸಾಧ್ಯತೆಗಳನ್ನು ಹೆಚ್ಚಿಸಲು ಎಲ್ಲ ಉದ್ಯೋಗಿಗಳಿಗೂ ಷೇರು ಖರೀದಿ ಆಯ್ಕೆ ನೀಡಬೇಕು. ಹಾಗೆಯೇ ಉನ್ನತ ವ್ಯವಸ್ಥೆಗಳ ಜೊತೆಗೆ 5ಕ್ಕಿಂತ ಹೆಚ್ಚಿನ ಜಾಗತಿಕ ಸಂಪರ್ಕ ಹೊಂದಿರಬೇಕು. ಹಾಗೆಯೇ ತಮ್ಮ ಸ್ಟಾರ್ಟ್ ಅಪ್ ಗೆ ಕನಿಷ್ಠ ಮೂರು ಸಲಹೆಗಾರರನ್ನು ಹೊಂದಿರಬೇಕು.