Asianet Suvarna News Asianet Suvarna News

ಜನವರಿ 31ರ ನಂತರ ಫಾಸ್ಟ್‌ಟ್ಯಾಗ್‌ ನಿಷ್ಕ್ರಿಯ ಆದೀತು ಎಚ್ಚರ: ಇ - ಕೆವೈಸಿ ಮಾಡಿಸಿ, ಖಾತೆ ಹಣ ಉಳಿಸಿಕೊಳ್ಳಿ

ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್‌ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ.

complete kyc for fastag by january 31 or face deactivation ash
Author
First Published Jan 16, 2024, 8:36 AM IST

ನವದೆಹಲಿ (ಜನವರಿ 16, 2024): ಫಾಸ್ಟ್ಯಾಗ್‌ ಬಳಕೆದಾರರೇ ಗಮನಿಸಿ... ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್‌ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್‌ ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್‌ ಹೊಂದಿರುವ ವಾಹನ ಮಾಲೀಕರು, ಫಾಸ್ಟ್ಯಾಗ್‌ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಜನವರಿ 31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

ಇದೇ ವೇಳೆ, ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್‌ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ - ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್‌ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರತಿ ದಿನ ಎಷ್ಟಾಗುತ್ತೆ FASTag ಟೋಲ್ ಸಂಗ್ರಹ? ಹೆದ್ದಾರಿ ಸಂಚಾರದಲ್ಲಿ ಕೋಟಿ ಕೋಟಿ ಆದಾಯ!

ಈ ಬಗ್ಗೆ ಹೆಚ್ಚಿನ ಮಾಹಿತಿಯುನ್ನು ನೀವು ಫಾಸ್ಟ್ಯಾಗ್‌ ಪಡೆದುಕೊಂಡ ಬ್ಯಾಂಕ್‌ಗಳಿಗೆ ಹೋಗಿ ತಿಳಿಯಬಹುದು ಅಥವಾ ಟೋಲ್‌ ಪ್ಲಾಜಾಗೆ ಹೋಗಿ ಪಡೆಯಬಹುದು ಅಥವಾ ಫಾಸ್ಟ್ಯಾಗ್‌ ಟೋಲ್‌ ಫ್ರೀ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅದು ಸಲಹೆ ನೀಡಿದೆ.

ಈ ಕ್ರಮ ಏಕೆ?:
ಇತ್ತೀಚೆಗೆ ಒಂದೇ ಫಾಸ್ಟ್ಯಾಗನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಹಾಗೂ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಲಿಂಕ್‌ ಮಾಡುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಎಚ್ಎಐ ಬಿಗಿ ಕ್ರಮ ತೆಗೆದುಕೊಂಡಿದೆ. ‘ಇದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ’ ಎಂದು ಅದು ಹೇಳಿದೆ. ಈಗಾಗಲೇ ದೇಶದಲ್ಲಿ 8 ಕೋಟಿ ಫಾಸ್ಟ್ಯಾಗ್‌ ಬಳಕೆದಾರರಿದ್ದಾರೆ ಹಾಗೂ ಶೇ.98ರಷ್ಟು ವಾಹನಗಳು ಫಾಸ್ಟ್ಯಾಗ್‌ಗೆ ಒಳಪಟ್ಟಿವೆ.

 

ಟೋಲ್‌ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್‌ ಗಡ್ಕರಿ

ಇ ಕೆವೈಸಿಗೆ ಏನೇನು ದಾಖಲೆ ಬೇಕು?
ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾನ್‌ ಸಂಖ್ಯೆ, ಆಧಾರ್‌ ಸಂಖ್ಯೆ, ನರೇಗಾ ಅಥವಾ ಸರ್ಕಾರಿ ದಾಖಲೆಗಳು, ವಾಹನದ ನೋಂದಣಿ ಪ್ರಮಾಣಪತ್ರ.

ಬ್ಯಾಂಕ್‌ನಲ್ಲಿ ಇ ಕೆವೈಸಿ ಹೇಗೆ?

  • ಸಮೀಪದ ಬ್ಯಾಂಕ್‌ಗೆ ತೆರಳಿ
  • ಕೆವೈಸಿ ಫಾರ್ಮ್‌ ಕೇಳಿ ಪಡೆಯಿರಿ
  • ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ತುಂಬಿ
  • ಬ್ಯಾಂಕ್‌ಗೆ ಫಾರ್ಮ್‌ ಸಲ್ಲಿಕೆ ಮಾಡಿ
Follow Us:
Download App:
  • android
  • ios