Union Budget 2023 FM Nirmala Sitharaman Speech on Budget 2023 Kannada Live ckm

Union Budget Highlights ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿದೆ ಹಲವು ವಿಶೇಷತೆ!

ಭಾರಿ ಕುತೂಹಲ ಕೆರಳಿಸಿದ್ದ ಮೋದಿ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಮದ್ಯಮ ವರ್ಗದ ಜನರಿಗೆ 7 ಲಕ್ಷ ರೂಪಾಯಿ ವರೆಗೆ ಆದಾಯ ತೆರಿಗೆ ವಿನಾಯಿತಿ ಘೋಷಣೆ, ಮಹಿಳಯರಿಗೆ ಉಳಿತಾಯ ಯೋಜನೆ, ಹಿರಿಯರ ರೇವಣಿ ಮೊತ್ತ ಹೆಚ್ಚಳ, ಶಿಕ್ಷಣ, ಕೃಷಿ, ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಅಳೆದು ತೂಗಿ ಹಣ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ಬದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಇತ್ತ ಬರಪೀಡಿತ ಪ್ರದೇಶಗಳಿಗೆ ಹೊಸ ಯೋಜನೆ ರೂಪಿಸಲಾಗಿದೆ.  ಸರ್ವರಿಗೂ ಸಮಪಾಲು, ಸಮಬಾಳು  ಎನ್ನುವಂತೆ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹಿಂದುಳಿದ ಜಾತಿ, ಬುಡಕಟ್ಟು ಜನಾಂಗ ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ಹಲವು ಘೋಷಣೆ ಮಾಡಿರುವ ನಿರ್ಮಲಾ, ಕೃಷಿ ಸಾಲವನ್ನು ಹೆಚ್ಚಿಸಿದ್ದಾರೆ. ಇದೀಗ ಬಜೆಟ್ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದೆ.  ನಿರುದ್ಯೋಗ ಸಮಸ್ಯೆಗೆ, ಬಡನತ ನಿರ್ಮೂಲನ ಮಾಡಲು ಈ ಬಜೆಟ್‌ನಲ್ಲಿ ಯಾವುದೇ ಪರಿಹಾರ ಸೂತ್ರಗಳಿಲ್ಲ ಎಂದಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ ಈ ಬಜೆಟ್ ಐತಿಹಾಸಿಕ ಎಂದು ಬಣ್ಣಸಿದ್ದಾರೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಲಾಗಿದೆ. ಹೊಸ ಯೋಜನೆ, ಅತೀ ದೊಡ್ಡ ಘೋಷಣೆ, ಯಾವುದು ದುಬಾರಿ? ಯಾವುದು ಅಗ್ಗ, ಪ್ರತಿಪಕ್ಷಗಳ ಪ್ರತಿಕ್ರಿಯೆ ಸೇರದಂತೆ ಬಜೆಟ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.