ಗಾಳಿಯಲ್ಲಿ ಕೊರೋನಾ ಹರಡೋದು ಎಂದರೇನು..? ಅದು ಹೇಗೆ ಸಾಧ್ಯವಾಗುತ್ತದೆ..? ಮನೆಯಲ್ಲೇ ಇದ್ದರೂ ಕೊರೋನಾ ಬಾಧಿಸುತ್ತದಾ ಎಂಬಂತಹ ಜನರ ಗೊಂದಲಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಉತ್ತರಿಸಿದ್ದಾರೆ.
ದೆಹಲಿ(ಜು.09): ಕೊರೋನಾ ಗಾಳಿಯಲ್ಲಿ ಹರಡುತ್ತದೆ, ಆದಷ್ಟು ಬೇಗ ಕೊರೋನಾ ವೈರಸ್ ಸಂಬಂಧ ಹೊಸ ನಿಯಮಗಳನ್ನು ಜಾರಿ ಮಾಡಿ ಎಂದು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯಿಸಿದ ಬೆನ್ನಲ್ಲೇ ಜನರಲ್ಲಿ ಆತಂಕ ಹೆಚ್ಚಾಗಿದೆ. ಜತ್ತಿನ 32 ರಾಷ್ಟ್ರಗಳ 230ಕ್ಕೂ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿ ಇಂತಹದೊಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಗಾಳಿಯಲ್ಲಿ ಕೊರೋನಾ ಹರಡೋದು ಎಂದರೇನು..? ಅದು ಹೇಗೆ ಸಾಧ್ಯವಾಗುತ್ತದೆ..? ಮನೆಯಲ್ಲೇ ಇದ್ದರೂ ಕೊರೋನಾ ಬಾಧಿಸುತ್ತದಾ ಎಂಬಂತಹ ಜನರ ಗೊಂದಲಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಉತ್ತರಿಸಿದ್ದಾರೆ.
undefined
ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!
ಕೊರೋನಾ ವೈರಸ್ ಗಾಳಿಯಲ್ಲಿ ಬದುಕಬಲ್ಲದು. ಹರಡುವ ಸಾಧ್ಯತೆಯೂ ಇದೆ. ಆದರೆ ಅದಕ್ಕೂ ಒಂದು ಮಿತಿ ಅಥವಾ ವ್ಯಾಪ್ತಿ ಇದೆ ಎಂದು ಅವರು ಹೇಳಿದ್ದಾರೆ. ನಾವು ಮಾತನಾಡುವಾಗ, ಏರು ಧ್ವನಿಯಲ್ಲಿ ಬೊಬ್ಬಿಡುವಾಗ, ಉಸಿರಾಡುವಾಗ ನಮ್ಮ ಬಾಯಿಯಿಂದ ವಿಭಿನ್ನ ಗಾತ್ರದ ಎಂಜಲು ಹನಿಗಳು ಹೊರ ಚಿಮ್ಮುತ್ತದೆ. ದೊಡ್ಡ ಹನಿಗಳು 1 ಅಥವಾ 2 ಮೀಟರ್ ಕೆಳಕ್ಕೆ ಬಿದ್ದುಬಿಡುತ್ತವೆ. ಹೀಗಾಗಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಈ ರೀತಿ ಮಾಡುವುದರಿಂದ ಒಬ್ಬ ವ್ಯಕ್ತಿಗೆಯಿಂದ ಇನ್ನೊಬ್ಬ ವ್ಯಕ್ತಿಗೆ ನೇರವಾಗಿ ಸೋಂಕು ಹರಡುವುದನ್ನು ತಡೆಯಹುದು.
ಆದರೆ ನಾವು ಮಾತನಾಡುವಾಗ ಕಣ್ಣಿಗೆ ಕಾಣದಷ್ಟು ಚಿಕ್ಕ ಗಾತ್ರದ ಎಂಜಲ ಹನಿಯೂ ಹೊರಗೆ ಚಿಮ್ಮುತ್ತದೆ. ಇಂತಹ ಸಣ್ಣ ಎಂಜಲಿನ ಹನಿಗಳು 5 ಮೈಕ್ರೋನ್ಸ್‌ಗಿಂತಲೂ ಚಿಕ್ಕ ಗಾತ್ರದಲ್ಲಿರುತ್ತದೆ. ಅವುಗಳನ್ನು ಏರೋಸೆಲ್ಸ್ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದಲೇ ಈ ಕಣಗಳು ಗಾಳಿಯಲ್ಲಿ ಸ್ವಲ್ಪ ಹೆಚ್ಚು ಹೊತ್ತು ಇರಬಲ್ಲವು ಮತ್ತು ಬಹಳ ನಿಧಾನವಾಗಿ ನೆಲಕ್ಕೆ ಬೀಳುತ್ತದೆ.
ಕೆಮ್ಮಿದ್ರೆ, ಸೀನಿದ್ರೆ ಮಾತ್ರವಲ್ಲ ಗಾಳಿಯಿಂದಲೂ ಹರಡುತ್ತಿದೆಯಂತೆ ಡೆಡ್ಲಿ ವೈರಸ್.!
ಈ ಕಣಗಳು ಜೋರಾದ ಗಾಳಿಯ ಹೊಡೆತಕ್ಕೋ, ಬಿರುಸಿನ ಗಾಳಿಗೂ ಸುತ್ತಮುತ್ತ ಹರಡಬಲ್ಲದು. ಹೀಗಾಗಿ ಇದೇ ಕಣಗಳನ್ನು ಬೇರೊಬ್ಬರು ಉಸಿರಾಡಬಹುದು. ಈ ರೀತಿಯಾಗಿ ಕೊರೋನಾ ಕರಡುವುದನ್ನು ಗಾಳಿಯ ಮೂಲಕ ಕೊರೋನಾ ಹರಡುವುದು ಅಥವಾ ಏರ್ ಬೋರ್ನ್ ಟ್ರಾನ್ಸ್‌ಮಿಷನ್ ಎಂದು ಕರೆಯಬಹುದು ಎಂದು ಅವರು ತಿಳಿಸಿದ್ದಾರೆ.
ದಡಾರ ರೋಗ ಹರಡುವಂತಲ್ಲ ಕೊರೋನಾ ವೈರಸ್ ಗಾಳಿಯಲ್ಲಿ ಹರಡುವ ರೀತಿ. ದಡಾರಾ ಮುಖ್ಯವಾಗಿ ಗಾಳಿಯಲ್ಲಿಯೇ ಹರಡುತ್ತದೆ. ಆದರೆ ಕೊರೋನಾ ವೈರಸ್ ಹಾಗಲ್ಲ. ಹಾಗಾಗಿ ಗಾಳಿಯಲ್ಲಿ ವೈರಸ್ ಹರಡುತ್ತದೆ ಎನ್ನುವಾಗ ಈ ವ್ಯತ್ಯಾಸವನ್ನು ನಾವು ಗಮನದಲ್ಲಿಡಬೇಕು ಎಂದಿದ್ದಾರೆ.
BBMP ಆಸ್ಪತ್ರೆ ಅಭಿವೃದ್ಧಿ: ಇನ್ಫೋಸಿಸ್ 30 ಕೋಟಿ ಅನುದಾನ
ವಾತಾವರಣ ಸೇರಿದ ಎಂಜಲಿನ ಚಿಕ್ಕ ಕಣಗಳು 10-15 ನಿಮಿಷ ಗಾಳಿಯಲ್ಲಿರಬಹುದು. ಈ ಸಂದರ್ಭದಲ್ಲಿ ನೀವು ಆ ಪ್ರದೇಶದಲ್ಲಿದ್ದರೆ ನಿಮಗೂ ವೈರಸ್ ಬಾಧಿಸಬಹುದು ಎಂದಿದ್ದಾರೆ.
ಆದರೆ ಇದು ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ ಎನ್ನಲು ಸಾಧ್ಯವಿಲ್ಲ. ದಡಾರದಂತೆ ಗಾಳಿಯಲ್ಲೇ ಕೊರೋನಾ ವೈರಸ್ ಹರಡುವುದಾಗಿದ್ದರೆ ಈ ಹೊತ್ತಿಗೆ ನಮಗೆಲ್ಲ ಕೊರೋನಾ ಬಾಧಿಸಿರುತ್ತಿತ್ತು. ಮುಖ್ಯವಾಗಿ ಎಂಜಲು ಕಣದಿಂದಲೇ ಹರಡುವುದರಿಂದ ನಾವು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೊರೋನಾದಿಂದ ಪಾರಾಗಬಹುದು ಎಂದಿದ್ದಾರೆ. ಈ ರೀತಿ ಎಂಜಲು ಕಣಗಳು ಗಾಳಿಗೆ ಸೇರದಂತೆ ಮಾಸ್ಕ್ ಹಾಕಿ ಕೊಳ್ಳುವುದು ಒಳ್ಳೆಯ ಅಭ್ಯಾಸ.