ಹಂದಿಯ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು

By Anusha KbFirst Published Nov 1, 2023, 4:29 PM IST
Highlights

ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು.

ನ್ಯೂಯಾರ್ಕ್‌: ಹಂದಿಯ ಹೃದಯ ಕಸಿ ಪಡೆದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಯ 40 ದಿನಗಳ ನಂತರ ಸಾವಿಗೀಡಾಗಿದ್ದಾರೆ. ಇವರು ವಿಶ್ವದಲ್ಲೇ ಹಂದಿ ಹೃದಯ ಕಸಿಗೊಳಗಾಗಿದ್ದ 2ನೇ ವ್ಯಕ್ತಿಯಾಗಿದ್ದರು. 58 ವರ್ಷದ ಲಾರೆನ್ಸ್‌ ಫೌಸೆಟ್ಟೆ ಮೃತವ್ಯಕ್ತಿ. ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದು, ಅವರಿಗೆ ಅತ್ಯಂತ  ಪ್ರಾಯೋಗಿಕ ಶಸ್ತ್ರಚಿಕಿತ್ಸೆಯ ಮೂಲಕ 40 ದಿನಗಳ ಹಿಂದಷ್ಟೇ ಹಂದಿಯ ಹೃದಯ ಅಳವಡಿಸಲಾಗಿತ್ತು. 

ಸೆಪ್ಟೆಂಬರ್ 20 ರಂದು ಅವರಿಗೆ ಹಂದಿಯ ಹೃದಯ ಅಳವಡಿಸಲಾಗಿತ್ತು. ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಪ್ರಕಾರ, ಅವರಿಗೆ ಮೊದಲ ತಿಂಗಳಲ್ಲಿ ಹೃದಯವೂ ಆರೋಗ್ಯಕರವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಇತ್ತೀಚೆಗೆ ಅದು ಸರಿಯಾಗಿ ಸ್ಪಂದಿಸದೇ ನಿರಾಕರಿಸುವ ಲಕ್ಷಣವನ್ನು ತೋರಿಸುತ್ತಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಸುಮಾರು ಆರು ವಾರಗಳ ಕಾಲ ಬದುಕಿದ್ದು ಆಕ್ಟೋಬರ್ 30 ರಂದು ಸಾವನ್ನಪ್ಪಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. 

ಹೆಣ್ಣಿನಂತೆ ಅಳು, ರಕ್ಷಿಸುವಂತೆ ಮೊರೆ: ಪಕ್ಕದ ಮನೆಯವರು ನೀಡಿದ ದೂರು ಕೇಳಿ ಮನೆಗೆ ಬಂದ ಪೊಲೀಸರೇ ಶಾಕ್‌?

ಹಂದಿಯ ಹೃದಯ ಅಳವಡಿಸಿದ ನಂತರ ಫೌಸೆಟ್‌ ಆರೋಗ್ಯ ಸುಧಾರಿಸಿತ್ತು, ಅವರು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆದಿದ್ದರು.  ಜೊತೆಗೆ ಪತ್ನಿ ಜೊತೆ ಇಸ್ಪೀಟ್‌ನ್ನು ಆಡುತ್ತಿದ್ದರು. ಆದರೆ ಇತ್ತೀಚೆಗೆ ಅವರ ಹೃದಯವು ನಿರಾಕರಣೆಯ ಆರಂಭಿಕ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿತು. ಇದು ಬಹಳ ಸವಾಲಿನ ಪ್ರಕರಣವಾಗಿದ್ದರೂ ಸಹ ವೈದ್ಯಕೀಯ ತಂಡ ಹೆಚ್ಚಿನ ಮುತುರ್ವಜಿ ವಹಿಸಿ ಅವರಿಗೆ ಚಿಕಿತ್ಸೆ ನೀಡಿದರಾದರೂ ಅವರು ಆಕ್ಟೋಬರ್  30 ರಂದು ಪ್ರಾಣ ಬಿಟ್ಟಿದ್ದಾರೆ.

ಫೌಸೆಟ್ ಅವರು ನೌಕಾಪಡೆಯಲ್ಲಿ ಕೆಲಸ ಮಾಡಿ ನಂತರ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ  ಲ್ಯಾಬ್ ತಂತ್ರಜ್ಞರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಅವರು ಮೇರಿಲ್ಯಾಂಡ್ ಆಸ್ಪತ್ರೆಗೆ ಬಂದಾಗ ಇತರ ಆರೋಗ್ಯ ಸಮಸ್ಯೆಗಳ ಕಾರಣ ಸಾಂಪ್ರದಾಯಿಕ ಹೃದಯ ಕಸಿ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಹೀಗಾಗಿ ಈ ಪ್ರಾಯೋಗಿಕ ಕಸಿ ಇಲ್ಲದೆಯೂ ಇವರು ಕೆಲವು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ತನಗೆ ಬಹಳ ಕಡಿಮೆ ಸಮಯ ಇದೇ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ಅವರು ಇದು ತಾನು ಬೇರೆಯವರಿಗಾಗಿ ಬದುಕಲು ಇರುವ ಕೊನೆಯ ಅವಕಾಶ ಎಂದು ತಿಳಿದಿದ್ದರು. ಜೊತೆಗೆ ಅವರು ಇಷ್ಟು ದಿನವಾದರೂ ಬದುಕಿರುತ್ತಾರೆ ಎಂಬ ನಿರೀಕ್ಷೆಯು ಅವರಿಗೆ ಇರಲಿಲ್ಲ ಎಂದು ಫೌಸೆಟ್ ಅವರ ಪತ್ನಿ ಹೇಳಿದ್ದಾರೆ.

ಗಾಜಾ ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ಬಾಂಬ್ ದಾಳಿ: ಸಂತ್ರಸ್ತರಿಗಾಗಿ ಮೊದಲ ಬಾರಿ ರಾಫಾ ಗಡಿ ತೆರೆಯಲೊಪ್ಪಿದ ಈಜಿಫ್ಟ್‌

ಕ್ಸೆನೋಟ್ರಾನ್ಸ್ಪ್ಲಾಂಟೇಶನ್ (xenotransplantation) ಎಂದು ಕರೆಯಲ್ಪಡುವ ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ವಿಧಾನದಿಂದ  ಮಾನವ ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಗೆ ಪರಿಹಾರವನ್ನು ನೀಡಬಹುದು. ಆದರೆ ರೋಗಿಯ ಪ್ರತಿರಕ್ಷಣಾ ವ್ಯವಸ್ಥೆಯು ಹೊಸದಾದ ಅಂಗವನ್ನು ಆಕ್ರಮಿಸುವುದರಿಂದ ಈ ಕಾರ್ಯವಿಧಾನಗಳು ಸವಾಲಿನವುಗಳಾಗಿವೆ. ಹಂದಿಯ ಭಾಗಗಳನ್ನು ತಳೀಯವಾಗಿ ಮಾರ್ಪಡಿಸುವ ಮೂಲಕ ಮಾನವ ಅಂಗಗಳಂತೆಯೇ ಕೆಲಸ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

click me!