ವ್ಲಾದಿಮಿರ್ ಪುಟಿನ್ ಆಪ್ತನ ಗುರಿಯಾಗಿಸಿ ಬಾಂಬ್ ದಾಳಿ, ಬಲಿಯಾಗಿದ್ದು ಅಮಾಯಕ ಮಗಳು!

By Suvarna News  |  First Published Aug 21, 2022, 6:54 PM IST

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಪ್ತೆಯನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿದೆ. ಪುಟಿನ್ ನಿರ್ಧಾರದ ಹಿಂದಿನ ಶಕ್ತಿಯಾಗಿದ್ದ ಈಕೆಯ ಹತ್ಯೆ ಇದೀಗ ರಷ್ಯಾ ಭದ್ರತೆಯನ್ನೇ ಪ್ರಶ್ನಿಸಿದೆ.


ಮಾಸ್ಕೋ(ಆ.21) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ಪುಟಿನ್ ಹತ್ಯೆಗೆ ಪ್ರಯತ್ನಗಳು ನಡೆಯತ್ತಿದೆ. ಆದರೆ ಭಾರಿ ಭದ್ರತೆಯಿಂದ ಇದು ಸಾಧ್ಯವಾಗಿಲ್ಲ. ಇದೀಗ ಪುಟಿನ್ ಆಪ್ತರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಇದೀಗ ವ್ಲಾದಿಮಿರ್ ಪುಟಿನ್ ಮೆದುಳು ಎಂದೇ ಗುರುತಿಸಿಕೊಂಡಿದ್ದಅಲೆಕ್ಸಾಂಡರ್ ಗೆಲಿವಿಚ್ ಡುಗಿನ್ ಪುತ್ರಿ ದರಿಯಾ ಡುಗಿನ್ ಹತ್ಯೆಯಾಗಿದ್ದಾರೆ. ದರಿಯಾ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ಮಾಸ್ಕೋ ಹೊರವಲಯದಲ್ಲಿ ಈ ಘಟನೆ ನಡೆದಿದೆ.  ರಷ್ಯಾದ ಖ್ಯಾತ ತತ್ವಜ್ಞಾನಿ, ರಾಜಕೀಯ ತಂತ್ರಗಾರ, ಅಲೆಕ್ಸಾಂಡರ್ ಗೆಲಿವಿಚ್ ಡುಗಿನ್ ಪುತ್ರಿಯಾಗಿದ್ದಾರೆ. ವ್ಲಾದಿಮಿರ್ ಪುಟಿನ್ ನಿರ್ಧಾರಗಳ ಹಿಂದೆ ದರಿಯಾ ಡುಗಿನ್ ಸಲಹೆಗಳು ಇದ್ದೇ ಇರುತ್ತಿತ್ತು. ಅಲೆಕ್ಸಾಂಡರ್ ಸಲಹೆ ಪಡೆಯದೇ ಪುಟಿನ್ ಯಾವುದೇ ನಿರ್ಣಣಯ ತೆಗೆದುಕೊಳ್ಳುತ್ತಿರಲಿಲ್ಲ. ಇಷ್ಟೇ ಅಲ್ಲ ವ್ಲಾದಿಮಿರ್ ಪುಟಿನ್ ಸುದೀರ್ಘ ಕಾಲ ರಷ್ಯಾ ಅಧಿಪತಿಯಾಗಿ ಮೆರೆಯಲು ಇದೇ ಅಲೆಕ್ಸಾಂಡರ್ ಡುಗಿನ್ ತಂತ್ರವೇ ಕಾರಣ ಅನ್ನೋ ಮಾತಿದೆ.

ಮಾಸ್ಕೊ ಹೊರವಲಯದ ಬೊಲ್ಶೆೈ ವ್ಯಾಜೋಮಿ ಹೆದ್ದಾರಿಯಲ್ಲಿ ಟೋಯೋಟಾ ಲ್ಯಾಂಡ್ ಕ್ರೂಸರ್ ಮೂಲಕ ತೆರಳುತ್ತಿದ್ದ ವೇಳೆ ಅಲೆಕ್ಸಾಂಡರ್ ಪುತ್ರಿ ದರಿಯಾ ಡುಗಿನ್ ಕಾರಿನಲ್ಲಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಡುಗಿನ್ ಸಂಚರಿಸುತ್ತಿದ್ದ ಕಾರು ಪುಡಿ ಪುಡಿಯಾಗಿದೆ. ಇತ್ತ ದರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಷ್ಯಾ ತನಿಖೆಗೆ ಆದೇಶಿಸಿದೆ. ಇದು ಅಲೆಕ್ಸಾಂಡರ್ ಗುರಿಯಾಗಿಸಿ ನಡೆದ ದಾಳಿಯಾಗಿದೆ. ಆದರೆ ತಂದೆಯಿಂದ ಕಾರು ಪಡೆದು ತೆರಳಿದ ಮಗಳು ಸ್ಫೋಟಕ್ಕೆ ಬಲಿಯಾಗಿದ್ದಾರೆ.

Tap to resize

Latest Videos

ಜನಸಂಖ್ಯೆ ಹೆಚ್ಚಳಕ್ಕೆ ಪುಟಿನ್‌ ತಂತ್ರ, 10 ಮಕ್ಕಳನ್ನು ಹೆತ್ತರೆ ಹೆಂಗಸರಿಗೆ ಲಕ್ಷ ಲಕ್ಷ ಹಣ

ಉಕ್ರೇನ್ ಮೇಲಿನ ಯುದ್ಧವನ್ನು ದರಿಯಾ ಡುಗಿನ್ ಬೆಂಬಲಿಸಿದ್ದರು. ಇಷ್ಟೇ ಅಲ್ಲ ರಷ್ಯಾ ಪರ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಪ್ರತಿಪಾದಿಸುತ್ತಾ ಬಂದಿರುವ ಡುಗಿನ್ ರಾಜಕೀಯ ಪರಿಣಿತಿ ಪಡೆದ ವಿಶ್ಲೇಷಕರೂ ಆಗಿದ್ದರು.  2014ರಲ್ಲಿ ರಷ್ಾ ಕ್ರೈಮಿಯಾ ಸ್ವಾಧೀನ ಪಡಿಸಿಕೊಂಡ ನಿರ್ಧಾರವನ್ನು ಸ್ವಾಗತಿಸಿದ್ದರು.  

ಮನೆಯಿಂದ ಕಾರು ಡ್ರೈವ್ ಮಾಡುತ್ತಾ ಹೆದ್ದಾರಿ ಮೂಲಕ ಡುಗಿನ್ ತೆರಳಿದ್ದಾರೆ. 40 ಕಿಲೋಮೀಟರ್ ದೂರ ತೆರಳುತ್ತಿದ್ದಂತೆ ಕಾರು ಸ್ಫೋಟಗೊಂಡಿದೆ. ಇದು ರಷ್ಯಾ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. 

ದೇಶದ್ರೋಹ ಆರೋಪಿ ರಷ್ಯಾ ವಿಜ್ಞಾನಿ ನಿಗೂಢ ಸಾವು!

ತಡರಾತ್ರಿ ವೇಳೆ ಪುಟಿನ್‌ಗೆ ದಿಢೀರ್‌ ಅನಾರೋಗ್ಯ, ತುರ್ತು ಚಿಕಿತ್ಸೆ: ಚೇತರಿಕೆ
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆರೋಗ್ಯದ ಕುರಿತು ಹಲವು ಊಹಾಪೋಹಗಳ ನಡುವೆಯೇ ಕಳೆದ ಶನಿವಾರ ಅವರ ಆರೋಗ್ಯದಲ್ಲಿ ದಿಢೀರ್‌ ಏರುಪೇರಾಗಿದ್ದು, ವೈದ್ಯರ 2 ತಂಡ ಧಾವಿಸಿ ತುರ್ತು ಚಿಕಿತ್ಸೆ ನೀಡಿವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಪುಟಿನ್‌ ಅವರಿಗೆ ತುರ್ತು ವೈದ್ಯಕೀಯ ಸೇವೆಯ ಅವಶ್ಯಕತೆ ಇದೆ ಎಂಬ ಮಾಹಿತಿಯ ಬೆನ್ನಲ್ಲೇ ಅಧ್ಯಕ್ಷೀಯ ಕಚೇರಿಗೆ ಧಾವಿಸಿದ ವೈದ್ಯರ ತಂಡ, ಪರಿಸ್ಥಿತಿ ಗಂಭಿರವಾಗಿದ್ದರಿಂದ ಹೆಚ್ಚುವರಿ ವೈದ್ಯರನ್ನು ಕರೆಸಿಕೊಂಡಿದೆ. ಮಧ್ಯರಾತ್ರಿ 1 ಗಂಟೆಯ ಸುಮಾರಿನಲ್ಲಿ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದೆ. ಸುಮಾರು 3 ಗಂಟೆಗಳ ಕಾಲ ಹೇರಲಾಗಿದ್ದ ವೈದ್ಯಕೀಯ ತುರ್ತುಸ್ಥಿತಿಯನ್ನು, ಅಧ್ಯಕ್ಷರ ಆರೋಗ್ಯ ಸುಧಾರಿಸುತ್ತಲೇ ಹಿಂಪಡೆಯಲಾಗಿದೆ ಎಂದು ರಷ್ಯಾದ ಟೆಲಿಗ್ರಾಂ ಚಾನಲ್‌ ಜನರಲ್‌ ಎಸ್‌ವಿಆರ್‌ ವರದಿ ಮಾಡಿದೆ.

click me!