ಒಬ್ಬ ಉಗ್ರರನನ್ನೂ ಉಳಿಸಲ್ಲ, ಹಮಾಸ್ ಉಗ್ರರ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಆರಂಭ!

By Suvarna News  |  First Published Oct 7, 2023, 4:25 PM IST

ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ 5000ಕ್ಕೂ ರಾಕೆಟ್ ದಾಳಿ ನಡೆಸಿದ ಹಮಾಸ್ ಉಗ್ರರು, ಟ್ಯಾಂಕ್, ಮಿಸೈಲ್ ಮೂಲಕ ದಾಳಿ ನಡೆಸಿದ್ದಾರೆ. ಹಮಾಸ್ ಉಗ್ರ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಆರಂಭಿಸಿದೆ. ಏರ್‌ಸ್ಟ್ರೈಕ್ ಬಾಂಬ್ ದಾಳಿ ಆರಂಭಿಸಿದ ಇಸ್ರೇಲ್ ಹಮಾಸ್ ಉಗ್ರರ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದೆ. ಈ ಕುರಿತು ವಿಡಿಯೋವನ್ನು ಇಸ್ರೇಲ್ ಸೇನೆ ಪೋಸ್ಟ್ ಮಾಡಿದೆ.


ಜೆರುಸಲೇಮ್(ಅ.07) ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿದ ಹಮಾಸ್ ಉಗ್ರರು ದೇಶದ ಭದ್ರತೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದಾರೆ. ಇಸ್ರೇಲ್ ಸರ್ಕಾರದ, ಇಸ್ರೇಲ್ ಸೇನೆ ಹಾಗೂ ನಾಗರೀಕರ ಮೇಲೆ ದಾಳಿ ನಡೆಸಲಾಗಿದೆ. ಗಾಜಾ ಪಟ್ಟಿಯಿಂದ ಸಾವಿರಾರು ಉಗ್ರರು ಇಸ್ರೇಲ್‌ಗೆ ನುಗ್ಗಿದ್ದಾರೆ. ಇಸ್ರೇಲ್ ಸೈನಿಕರನ್ನು ಹತ್ಯೆ ಮಾಡುತ್ತಿದ್ದಾರೆ. ಹಲವರನ್ನು ಒತ್ತೆಯಾಳಾಗಿ ಗಾಜಾಗೆ ಎಳೆದೊಯ್ದಿದ್ದಾರೆ. ಹಮಾಸ್ ಉಗ್ರರ ದಾಳಿಯಿಂದ ಬೆಚ್ಚಿ ಬಿದ್ದ ಇಸ್ರೇಲ್, ಇದೀಗ ಪ್ರತಿ ದಾಳಿ ಆರಂಭಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾಹು, ಈಗಾಗಲೇ ಯುದ್ದ ಘೋಷಿಸಿದ್ದಾರೆ. ಹಮಾಸ್ ಉಗ್ರರ ಹೆಡೆಮುರಿ ಕಟ್ಟುತ್ತೇವೆ ಎಂದು ಘೋಷಿಸಿದ ಬೆನ್ನಲ್ಲೇ ಇಸ್ರೇಲ್ ಸೇನೆ ಏರ್‌ಸ್ಟ್ರೈಕ್ ಆರಂಭಿಸಿದೆ.

ಇಸ್ರೇಲ್‌ನಲ್ಲಿ ಧಾವಿಸುತ್ತಿರುವ ಹಮಾಸ್ ಉಗ್ರರ ವಾಹನ, ಟ್ಯಾಂಕರ್ ಮೇಲೆ ಇಸ್ರೇಲ್ ಸೇನೆ ಏರ್‌ಸ್ಟ್ರೈಕ್ ನಡೆಸುತ್ತಿದೆ. ಬಾಂಬ್ ದಾಳಿ ಆರಂಭಿಸಿರುವ ಇಸ್ರೇಲ್  ಒಬ್ಬೊಬ್ಬ ಉಗ್ರನನ್ನು ಹುಡುಕಿ ಕೊಲ್ಲುತ್ತೇವೆ ಎಂದಿದೆ. ಇದರಂತೆ ಇಸ್ರೇಲ್ ಏರ್‌ಸ್ಟ್ರೈಕ್ ಆರಂಭಗೊಂಡಿದೆ. ಈ ಕುರಿತು ವಿಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ.

Tap to resize

Latest Videos

ಇಸ್ರೇಲ್ ವಿರುದ್ಧ ಜಿಹಾದ್ ಹೋರಾಟದಲ್ಲಿ ಪಾಲ್ಗೊಳ್ಳಿ, ಮುಸ್ಲಿಮರಿಗೆ ಮಸೀದಿ ಲೌಡ್‌ಸ್ಪೀಕರ್ ಸಂದೇಶ!

ಹಮಾಸ್ ಉಗ್ರರ ಮೇಲೆ ಸ್ಮಾರ್ಟ್ ಬಾಂಬ್ ಹಾಗೂ ಮಿಸೈಲ್ ದಾಳಿ ನಡೆಸಲಾಗಿದೆ. ಇದೇ ವೇಳೆ ಇಸ್ರೇಲ್ ಸೇನೆ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದೆ. ದಾಳಿ ಪ್ರತಿದಾಳಿಗಳ ಕಾರಣ ಯಾರೂ ಕೂಡ ಹೊರಬರಬೇಡಿ. ಸುರಕ್ಷಿತ ಸ್ಥಳದಲ್ಲಿರಿ. ಬಂಕರ್‌ಗಳಲ್ಲಿ ಸುರಕ್ಷಿತವಾಗಿರಿ. ನಿಮ್ಮೆಲ್ಲರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಇಸ್ರೇಲ್ ಸೇನೆ ಸಂದೇಶ ರವಾನಿಸಿದೆ.

 

עשרות מטוסי קרב של חיל האוויר תקפו לפני זמן קצר במספר מוקדים מטרות של ארגון הטרור חמאס ברצועת עזה.

דובר צה"ל שב ומבקש מהציבור להישמע להנחיות פיקוד העורף, המצילות חיים.

תיעוד מהתקיפות מוקדם יותר: pic.twitter.com/pnxdRyv4Un

— צבא ההגנה לישראל (@idfonline)

 

ಗಾಜಾ ಪಟ್ಟಿ ಸಮೀಪದಲ್ಲಿ ಇಸ್ರೇಲ್ ದಾಳಿ ಆರಂಭಿಸಿದೆ. ಇಸ್ರೇಲ್ ಒಳಗೂ ಈಗಾಗಲೇ ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರು ಸೇರಿದ್ದಾರೆ. ದಾಳಿ ನಡೆಸುತ್ತಿದ್ದಾರೆ. 22ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, ಹಲವರನ್ನು ಹಮಾಸ್ ಉಗ್ರರು ಚಿತ್ರಹಿಂಸೆ ನೀಡಿ ಗಾಜಾಪಟ್ಟಿಗೆ ಕರೆದೊಯ್ದಿದ್ದಾರೆ. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಹಮಾಸ್ ಉಗ್ರರ ವಿರುದ್ದ ಆಪರೇಶನ್ ಅಲ್ಲ, ಇದು ಯುದ್ಧ ಎಂದು ಇಸ್ರೇಲ್ ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ. 

ಹಲವು ದಿನಗಳಲ್ಲಿ ಪ್ಲಾನ್ ಮಾಡಿದ ಹಮಾಸ್ ಉಗ್ರರು ಇಂದು ಏಕಾಏಕಿ 5000 ರಾಕೆಟ್ ದಾಳಿ ನಡೆಸಿದ್ದಾರೆ. ಇಸ್ರೇಲ್ ಮೇಲಿನ ರಾಕೆಟ್ ದಾಳಿಗೆ ಸಂಪೂರ್ಣ ಇಸ್ರೇಲ್ ನಲುಗಿ ಹೋಗಿದೆ. ಇದರ ಬೆನ್ನಲ್ಲೇ ಹಮಾಸ್ ಉಗ್ರರು ಮಶಿನ್ ಗನ್ ಹಿಡಿದು ಗುಂಡು ಹಾರಿಸುತ್ತಾ ಇಸ್ರೇಲ್ ಒಳ ನುಗ್ಗಿದ್ದರೆ. ಇಸ್ರೇಲ್ ಸಾರ್ವಜನಿಕರ ಮೇಲೂ ದಾಳಿ ನಡೆಸಲಾಗಿದೆ.

ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!

click me!