ಟೆಹ್ರಾನ್(ನ.28) ಇರಾನ್‌ನ ಟಾಪ್ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕೀರ್‌ಝಾದೆಯವರನ್ನು ಹತ್ಯೆಮಾಡಲಾಗಿದೆ.  ಇರಾನ್‌ ರಕ್ಷಣಾ ಸಚಿವಾಲಯದ ಸಮಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದ ಮೊಹ್ಸೆನ್‌ರನ್ನು ಟೆಹ್ರಾನ್‌ ಬಳಿ ಉಗ್ರರು ಹತ್ಯೈಗೈದಿದ್ದಾರೆ.

ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೊಹ್ಸೆನ್ ಗಂಭೀರವಾಗಿ ಗಾಯಗೊಂಡಿದ್ರು. ಆಸ್ಪತ್ರೆಗೆ ಸೇರಿಸಿದ್ರೂ ಅವರನ್ನ ಉಳಿಸಲಿಕ್ಕಾಗಿಲ್ಲ, ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ಹೇಳಿದೆ.

ಅಲ್‌ಖೈದಾ ನಾಯಕ ಲಾಡೆನ್ ಬೀಗನ ಹತ್ಯೆ : ಲಾಡೆನ್‌ ಸೊಸೆಯೂ ಸಾವು

ಮೊಹ್ಸೆನ್‌ ಇರಾನ್‌ನ ಪರಮಾಣು ಯೋಜನೆಯ ರೂವಾರಿಯಾಗಿದ್ದರು. ಇರಾನ್‌ನ ರಹಸ್ಯ ಅಣ್ವಸ್ತ್ರ ಗಳ ಹಿಂದಿನ ಬ್ರೈನ್ ಇವರೇ ಆಗಿದ್ರು. ಪಾಶ್ಚಿಮಾತ್ಯ ದೇಶಗಳು ಇವರನ್ನು ಫಾದರ್‌ ಆಫ್ ಇರಾನಿಯನ್‌ ಬಾಂಬ್ ಎಂದೇ ಕರೆಯುತ್ತಿದ್ದುವು.

ಮೊಹ್ಸೆನ್ ಸಾವು ಇರಾನ್‌ನ ಪರಮಾಣು ಮತ್ತು ಅಣ್ವಸ್ತ್ರ ಯೋಜನೆಗಳಿಗೆ ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ.