ಫಿಂಗರ್‌ಪ್ರಿಂಟ್‌ ಇದ್ರೆ ಮಾತ್ರ ಓಪನ್‌ ಆಗೋ ಬ್ರಾ ಡಿಸೈನ್‌ ಮಾಡಿದ ವ್ಯಕ್ತಿ, ಬಂದ ಕಾಮೆಂಟ್‌ ಅಷ್ಟಿಷ್ಟಲ್ಲ..!

By Santosh Naik  |  First Published Oct 17, 2024, 9:32 PM IST

ಜಪಾನ್‌ನ ಸಂಶೋಧಕರೊಬ್ಬರು ಮಹಿಳೆಯರು ಧರಿಸುವ, ಗಂಡ ಅಥವಾ ಬಾಯ್‌ಫ್ರೆಂಡ್‌ನ ಫಿಂಗರ್‌ಪ್ರಿಂಟ್‌ ಇದ್ದರೆ ಮಾತ್ರ ತೆಗೆಯಬಹುದಾದ ಬ್ರಾವನ್ನು ಸಂಶೋಧಿಸಿದ್ದಾರೆ. ಈ ಸಂಶೋಧನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮಾಷೆ ಮತ್ತು ಟೀಕೆಗಳಿಗೆ ಗುರಿಯಾಗಿದೆ.


ಬೆಂಗಳೂರು (ಅ.17): ಸಂಶೋಧನಾ ಜಗತ್ತಿನಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಂಶೋಧನೆಗಳು ಇಂದು ಮನುಷ್ಯರನ್ನು ಬಾಹ್ಯಾಕಾಶದ ಅಂಚಿಗೆ ಕರೆದುಕೊಂಡು ಹೋಗಿದ್ದರೆ, ಇನ್ನೂ ಕೆಲವು ಸಮುದ್ರದ ಅಂಚಿನವರೆಗೆ ತಲುಪುವ ಪ್ರಯತ್ನ ಮಾಡಲಾಗಿದೆ. ಆದರೆ, ಹೆಣ್ಣಿನ ಮನಸ್ಸಿನ ಆಳದಲ್ಲಿ ಏನಿದೆ ಅನ್ನೋದನ್ನು ತಿಳಿಯುವ ಯಾವುದೇ ಟೆಕ್ನಾಲಜಿ ಬಂದಿಲ್ಲ. ಇಂದು ಪ್ರೀತಿ-ಪ್ರೇಮದಲ್ಲಿ ಮೋಸಗಳೇ ಹೆಚ್ಚು. ಹುಡುಗಿಯರು ಮಾತ್ರವಲ್ಲ, ಮೋಸ ಮಾಡೋದ್ರಲ್ಲಿ ಹುಡುಗರೂ ಕೂಡ ಮುಂದಿದ್ದಾರೆ. ಆದರೆ, ಜಪಾನ್‌ನ ಬಹುಶಃ ಭಗ್ನಪ್ರೇಮಿ ಸಂಶೋಧಕನೊಬ್ಬ ಹೊಸ ಸಂಶೋಧನೆಯೊಂದನ್ನ ಮಾಡಿದ್ದಾನೆ. ಅದನ್ನು ಕೇಳಿದರೆ, ನೀವು ಬೆರಗಾಗೋದು ಖಂಡಿತ. ಆತ ಡಿಸೈನ್‌ ಮಾಡಿರೋದು ಮಹಿಳೆಯರು ಧರಿಸುವ ಬ್ರಾ. ಇದು ಅಂತಿಂಥ ಬ್ರಾ ಅಲ್ಲ. ಬಾಯ್‌ಫ್ರೆಂಡ್‌ಗೆ ಅಥವಾ ಗಂಡನಿಗೆ ಮೋಸ ಮಾಡಲು ಸಾಧ್ಯವೇ ಆಗದಿರುವಂಥ ಬ್ರಾ ಇದು ಎಂದು ಹೇಳಿಕೊಂಡಿದ್ದಾನೆ. ಅಷ್ಟಕ್ಕೂ ಆತ ಮಾಡಿದ ಸಂಶೋಧನೆ ಏನು ಅನ್ನೋದನ್ನ ನೋಡೋದಾದರೆ ನಿಮ್ಮ ಹುಬ್ಬೇರಬಹುದು.

ಸಾಮಾನ್ಯ ಬ್ರಾ ರೀತಿಯಲ್ಲೇ ಇದ್ದರೂ, ಇದಕ್ಕೆ ಆತ ಟಚ್‌ ಐಡಿ ಅಳವಡಿಸಿದ್ದಾನೆ. ಫೋನ್‌ಗೆ ಇರುವ ಟಚ್‌ ಐಡಿ ರೀತಿಯಲ್ಲಿ ಇದು ಇದೆ. ಗಂಡ ಅಥವಾ ಬಾಯ್‌ಫ್ರೆಂಡ್‌ನ ಫಿಂಗರ್‌ ಪ್ರಿಂಟ್‌ ಇದ್ದರೆ ಮಾತ್ರವೇ ಈ ಬ್ರಾ ತೆರೆದುಕೊಳ್ಳುತ್ತದೆ. ಇದರ ವಿಡಿಯೋವನ್ನು ಕೂಡ ಆತ ಹಂಚಿಕೊಂಡಿದ್ದಾನೆ.

ಇನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಈತನ ಸಂಶೋಧನೆ ಸಖತ್‌ ವೈರಲ್‌ ಆಗಿರುವುದು ಮಾತ್ರವಲ್ಲದೆ, ತಮಾಷೆಯ ಕಾಮೆಂಟ್‌ಗಳಿಗೆ ಕಾರಣವಾಗಿದೆ. 'ಬಾಯ್‌ಫ್ರೆಂಡ್‌ನ ಫಿಂಗರ್‌ ಪ್ರಿಂಟ್‌ ಇಲ್ಲದೆ, ಇದನ್ನು ಓಪನ್‌ ಮಾಡೋಕೆ ಆಗಲ್ಲ ಎಂದು ಯಾರಾದರೂ ಹೇಳಿದರೆ, ಆತನ ರಿಲೇಷನ್‌ಷಿಪ್‌ನಲ್ಲಿರೋಕೆ ಲಾಯಕ್ಕಲ್ಲ' ಎಂದು ಕಾಮೆಂಟ್‌ ಮಾಡಿದ್ದಾರೆ.ಇಷ್ಟೆಲ್ಲಾ ಕಷ್ಟಪಟ್ಟು ಸಂಶೋಧನೆ ಮಾಡಿ ಏನು ಬಂತು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಕನ್ನಡದಲ್ಲಿ ನೀವು ಓದಬೇಕಾದ 10 ಐತಿಹಾಸಿಕ ಕಾದಂಬರಿಗಳು!

ಮಹಿಳೆಯರ ಫಿಂಗರ್‌ಪ್ರಿಂಟ್‌ ಲಾಕ್‌ ಇರುವ ಪುರುಷರ ಚಡ್ಡಿ ಬರುವವರೆಗೂ ಇದು ಒಳ್ಳೆಯ ಸಂಶೋಧನೆ ಎಂದುಕೊಳ್ಳಬಹುದು ಎಂದು ತಮಾಷೆ ಮಾಡಿದ್ದಾರೆ.'ಇದನ್ಯಾರಾದರೂ ಸಂಶೋಧನೆ ಅಂತಾರಾ, ಟಿ-ಶರ್ಟ್‌ ತೆಗೆಯೋ ಥರ ತೆಗೆದರೆ ಆಯ್ತು..' ಎಂದು ಬರೆದಿದ್ದಾರೆ. ಇನ್ನು Anti Cheating ಮಾಡೋವಾಗ, ಕಾಂಡಮ್‌ ಜೊತೆ ಕತ್ತರಿಗಳನ್ನೂ ಹಿಡಿದುಕೊಂಡು ಹೋಗಬೇಕು' ಎಂದು ತಮಾಷೆ ಮಾಡಿದ್ದಾರೆ.

ದೆಹಲಿ ಏರ್‌ಪೋರ್ಟ್‌, ಹೊಸ ಸಂಸತ್ತು ಎಲ್ಲವೂ ವಕ್ಫ್‌ ಆಸ್ತಿ: ಬದ್ರುದ್ದೀನ್‌ ಅಜ್ಮಲ್‌ ವಿವಾದಿತ ಹೇಳಿಕೆ

'ಇದ್ರಲ್ಲಿ ಇರೋದು ಒಂದು ಮೈಕ್ರೋ ಕಂಟ್ರೋಲರ್‌, ಸರ್ವೋ ಮೋಟರ್‌ ಜೊತೆ ಇರುವ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಮಾತ್ರ..' ಎಂದು ಬರೆದಿದ್ದಾರೆ. ಈ ಸಂಶೋಧಕ ಒಂದು ಸಲ್ಯೂಷನ್‌ಅನ್ನು ಕ್ರಿಯೇಟ್‌ ಮಾಡಿದ್ದಾನೆ. ಆದರೆ, ಯಾವುದೇ ಸಮಸ್ಯೆಯನ್ನ ಈತ ಬಗೆಹರಿಸಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ. ಅಷ್ಟಕ್ಕೂ ಮಹಿಳೆಯೊಬ್ಬಳ ಜೀವನವನ್ನು ಬಾಯ್‌ಫ್ರೆಂಡ್‌ ಒಬ್ಬನೇ ಯಾಕೆ ಕಂಟ್ರೋಲ್‌ ಮಾಡಬೇಕು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Techtuv (@techtuv)

click me!