ಅಮೆರಿಕಕ್ಕೆ ಬಾಂಬ್‌ ಸೈಕ್ಲೋನ್‌ ಭೀತಿ: ಮೈನಸ್‌ 40 ಡಿಗ್ರಿವರೆಗೂ ಕುಸಿದ ತಾಪಮಾನ; ಎಲ್ಲ 51 ರಾಜ್ಯಗಳಿಗೂ ಎಫೆಕ್ಟ್..!

By Kannadaprabha News  |  First Published Dec 24, 2022, 8:00 AM IST

ಚಂಡಮಾರುತ ಪರಿಣಾಮ 5,000ಕ್ಕೂ ಹೆಚ್ಚು ವಿಮಾನಗಳ (Flights) ಸಂಚಾರ ರದ್ದಾಗಿದ್ದು, 22,000ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಲವು ಹೆದ್ದಾರಿಗಳನ್ನು (Highways) ಬಂದ್‌ ಮಾಡಲಾಗಿದೆ. ಹೀಗಾಗಿ ಎಲ್ಲಾ 51 ರಾಜ್ಯಗಳು ಒಂದಲ್ಲಾ ಒಂದು ರೀತಿಯಲ್ಲಿ ಚಂಡಮಾರುತದ ಪರಿಣಾಮಗಳಿಗೆ ಒಳಗಾಗಿವೆ.


ವಾಷಿಂಗ್ಟನ್‌: ಕ್ರಿಸ್‌ಮಸ್‌ (Christmas) ಮತ್ತು ವರ್ಷಾಂತ್ಯದ ಸಂಭ್ರಮಾಚರಣೆಗೆ  (Year End Celebration) ಸಿದ್ಧರಾಗುತ್ತಿದ್ದ ಅಮೆರಿಕನ್ನರ (United States) ಮೇಲೆ ಭೀಕರ ಚಂಡಮಾರುತವೊಂದು (Storm) ಅಪ್ಪಳಿಸಿದೆ. ಭಾರಿ ಬಿರುಗಾಳಿ ಸಹಿತ ಹಿಮಪಾತದಿಂದಾಗಿ (Snowfall) ಹಲವು ರಾಜ್ಯಗಳಲ್ಲಿ ಉಷ್ಣಾಂಶ ಮೈನಸ್‌ 10ರಿಂದ ಮೈನಸ್‌ 40 ಡಿ.ಸೆಲ್ಷಿಯಸ್‌ವರೆಗೂ ಇಳಿದಿದೆ. ಇದು ಹೀಗೇ ಮುಂದುವರಿದರೆ ‘ಬಾಂಬ್‌ ಸೈಕ್ಲೋನ್‌’ (Bomb Cyclone) ಆಗಬಹುದು ಎಂದು ಹೇಳಲಾಗಿದೆ. ಚಂಡಮಾರುತ ಪರಿಣಾಮ 5,000ಕ್ಕೂ ಹೆಚ್ಚು ವಿಮಾನಗಳ (Flights) ಸಂಚಾರ ರದ್ದಾಗಿದ್ದು, 22,000ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಲವು ಹೆದ್ದಾರಿಗಳನ್ನು (Highways) ಬಂದ್‌ ಮಾಡಲಾಗಿದೆ. ಹೀಗಾಗಿ ಎಲ್ಲಾ 51 ರಾಜ್ಯಗಳು ಒಂದಲ್ಲಾ ಒಂದು ರೀತಿಯಲ್ಲಿ ಚಂಡಮಾರುತದ ಪರಿಣಾಮಗಳಿಗೆ ಒಳಗಾಗಿವೆ. ಅಂದಾಜು 20 ಕೋಟಿ ಜನರಿಗೆ ಭಾರಿ ಚಂಡಮಾರುತ, ಹಿಮಪಾತದ ಮುನ್ನೆಚ್ಚರಿಕೆ ನೀಡಲಾಗಿದೆ. ಹಲವು ರಾಜ್ಯಗಳಲ್ಲಿ ಜನಜೀವನ ಬಹುತೇಕ ವ್ಯತ್ಯಯಗೊಂಡಿದೆ.

ಪರಿಣಾಮ, ಹಬ್ಬದ ಸಂಭ್ರಮಕ್ಕೆ ತವರಿಗೆ ತೆರಳಲು ಸಜ್ಜಾಗಿದ್ದ ಲಕ್ಷಾಂತರು ಜನರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರ ಜೊತೆಗೆ ಭಾರಿ ಚಳಿಯ ಪರಿಣಾಮ ಮನೆಯಿಂದ ಹೊರಗೆ ಬಂದರೆ 5 ನಿಮಿಷದಲ್ಲೇ ಫ್ರಾಸ್ಟ್‌ಬೈಟ್‌ (ಚಳಿಯ ಹೊಡೆತಕ್ಕೆ ಚರ್ಮಕ್ಕೆ ಆಗುವ ಗಾಯ) ಆಗುವ ಸಾಧ್ಯತೆ ಇದ್ದು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಜೊತೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಚಂಡಮಾರುತವು ಒಂದು ತಲೆ ಮಾರಿನಲ್ಲಿ ಒಂದು ಬಾರಿ ಸಂಭವಿಸುವ ‘ಬಾಂಬ್‌ ಸೈಕ್ಲೋನ್‌’ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆಯೂ ಇದೆ ಎಂದು ಹವಾಮಾನ ಸಂಸ್ಥೆಗಳು ಎಚ್ಚರಿಸಿವೆ.

Tap to resize

Latest Videos

ಇದನ್ನು ಓದಿ: Karwar: ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದ ಮ್ಯಾಂಡೌಸ್ ಚಂಡಮಾರುತ

ಡೆನ್ವೆರ್‌ನಲ್ಲಿ ಉಷ್ಣಾಂಶವು ಕೇವಲ ಒಂದು ಗಂಟೆ ಅವಧಿಯಲ್ಲಿ 37 ಡಿ.ಸೆ.ನಷ್ಟುಇಳಿಕೆ ಕಂಡು ಮೈನಸ್‌ 20 ಡಿ.ಸೆ.ಗೆ ತಲುಪಿದೆ. ಜೊತೆಗೆ ಮೋನ್‌ಟಾನಾದಲ್ಲಿ ಉಷ್ಣಾಂಶ ಈಗಾಗಲೇ ಮೈನಸ್‌ 40 ಡಿ.ಸೆ.ಗೆ ಇಳಿದಿದ್ದು, ಶುಕ್ರವಾರದ ಹೊತ್ತಿಗೆ ವಿಂಡ್‌ ಚಿಲ್‌ (ನಾವು ಅನುಭವಿಸು ಚಳಿ) ಮೈನಸ್‌ 60 ಡಿ.ಸೆ.ಗೆ ಇಳಿಯಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಂದರೆ ಮಂಗಳ ಗ್ರಹಕ್ಕಿಂತ (ಮೈನಸ್‌ 81 ಡಿ.ಸೆ) ಸ್ವಲ್ಪ ಹೆಚ್ಚಿನ ಉಷ್ಣತೆ ಇಲ್ಲಿ ಇರಲಿದೆ. ಇನ್ನು ನ್ಯೂಯಾರ್ಕ್ ರಾಜ್ಯದ ಬಫೆಲ್ಲೋದಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಜನಜೀವನವನ್ನು ಬಹುತೇಕ ಅಸ್ತವ್ಯಸ್ತಗೊಳಿಸಿದೆ.

ಭಾರಿ ಚಂಡಮಾರುತ:
ಆರ್ಕಿಕ್ಟ್‌ ತೀರದಿಂದ ಬೀಸುತ್ತಿರುವ ಭಾರೀ ಚಳಿಗಾಳಿಯು ಚಂಡಮಾರುತದ ಸ್ವರೂಪ ಪಡೆದುಕೊಂಡು ಅಮೆರಿಕದ ಹಲವು ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 20 ಸೆಂ.ಮೀಗಿಂತ ಹಿಮಪಾತವಾಗಿದೆ. ಪರಿಣಾಮ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗುತ್ತಿದೆ. ವಿಮಾನ, ರೈಲಿನ ಜೊತೆಗೆ ರಸ್ತೆ ಸಂಚಾರದಲ್ಲೂ ವ್ಯತ್ಯಯವಾಗಿದೆ. ಹೀಗಾಗಿ ಚಂಡಮಾರುತಕ್ಕೆ ತುತ್ತಾದ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಇದನ್ನೂ ಓದಿ: Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

ಏನಿದು ಬಾಂಬ್‌ ಸೈಕ್ಲೋನ್‌..?
ಬೇರೆ ಬೇರೆ ತೂಕದ (ತಣ್ಣನೆಯ, ಒಣ) ಗಾಳಿಯು ಒಂದಾದ ವೇಳೆ ‘ಸೈಕ್ಲೋನ್‌ ಬಾಂಬ್‌’ ಸೃಷ್ಟಿಯಾಗುತ್ತದೆ. ಆದ್ರ್ರ ಗಾಳಿ ಮತ್ತು ಬಿಸಿ ಗಾಳಿ ಒಂದಾದ ವೇಳೆ, ಹಗುರವಾಗಿರುವ ಬಿಸಿ ಗಾಳಿ ಮೇಲೆ ಏರುತ್ತದೆ. ಈ ಮೂಲಕ ಮೋಡದ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪರಿಣಾಮ ವಾಯುಭಾರ ಕುಸಿತ ಉಂಟಾಗುತ್ತದೆ. ಬಳಿಕ ವಾಯುಭಾರ ಕುಸಿತವಾದ ಪ್ರದೇಶದಲ್ಲಿ ಆದ್ರ್ರ ಗಾಳಿಯು ಸುರಳಿಯಾಕಾರದಲ್ಲಿ ಆ್ಯಂಟಿಕ್ಲಾಕ್‌ ದಿಕ್ಕಿನಲ್ಲಿ ಸುತ್ತಲು ಆರಂಭವಾಗುತ್ತದೆ. ಇದನ್ನೇ ಬಾಂಬ್‌ ಸೈಕ್ಲೋನ್‌ ಅನ್ನುತ್ತಾರೆ.

ಬಾಂಬ್‌ ಹೆಸರೇಕೆ..?
ವಾಯುಭಾರ ಭಾರೀ ಕುಸಿತವಾದ ಪ್ರದೇಶದಲ್ಲಿ ಸೃಷ್ಟಿಯಾಗುವ ಭಾರೀ ಪ್ರಮಾಣದ ಶಕ್ತಿಯ ಕಾರಣ ಫ್ರೆಡ್‌ ಸ್ಯಾಂಡ​ರ್‍ಸ್ ಮತ್ತು ಜಾನ್‌ ಗೈಕುಮ್‌ ಎಂಬ ವಿಜ್ಞಾನಿಗಳು ಇದಕ್ಕೆ ‘ಬಾಂಬ್‌ ಸೈಕ್ಲೋನ್‌’ ಎಂದು ಮೊದಲ ಬಾರಿಗೆ ಹೆಸರಿಸಿದ್ದಾರೆ.

ಇದನ್ನೂ ಓದಿ: Cyclone Mandous ಬೆನ್ನಲ್ಲೇ ಮತ್ತೊಂದು ಚಂಡಮಾರುತ; ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ

ಸೈಕ್ಲೋನ್‌ ಬಾಂಬ್‌ ಸೃಷ್ಟಿಯಾಗುವುದು ಹೇಗೆ..?
ವಾತಾವರಣದಲ್ಲಿ ಗಾಳಿಯು ಒತ್ತಡವು 24 ಗಂಟೆಯಲ್ಲಿ ಕನಿಷ್ಠ 24 ಮಿಲಿಬಾರ್‌ನಷ್ಟು ಕಡಿಮೆಯಾದ ವೇಳೆ, ವಾಯುಭಾರ ಮತ್ತಷ್ಟು ಕುಸಿತವಾಗಿ ಚಂಡಮಾರುತವು ಮತ್ತಷ್ಟು ಪ್ರಬಲವಾಗುತ್ತದೆ. ಹೀಗೆ ಅತ್ಯಲ್ಪ ಅವಧಿಯಲ್ಲಿ ವಾತಾವರಣದಲ್ಲಿ ಗಾಳಿಯ ಒತ್ತಡ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿ ಚಂಡಮಾರುತವು ಅತ್ಯುಗ್ರ ಸ್ವರೂಪ ಪಡೆದುಕೊಂಡು ಅನಾಹುತ ಸೃಷ್ಟಿಸುತ್ತದೆ. ಬಾಂಬ್‌ ಸೈಕ್ಲೋನ್‌ನಿಂದಾಗಿ ಚಂಡಮಾರುತ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ, ಭಾರಿ ಪ್ರಮಾಣದ ಹಿಮಪಾತ, ಭಾರೀ ಮಳೆ, ಬಿರುಗಾಳಿ, ಕರಾವಳಿ ಪ್ರದೇಶದಲ್ಲಿ ಪ್ರವಾಹವೂ ಸೃಷ್ಟಿಯಾಗಬಹುದು. ಆದರೆ ಇದು ಬಾಂಬ್‌ ಸೈಕ್ಲೋನ್‌ ಸೃಷ್ಟಿಯಾದ ಪ್ರದೇಶ ಮತ್ತು ಚಂಡಮಾರುತದ ವೇಗವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಗಾಳಿಯು ಮಿಲಿಬಾರ್‌ 1000ದಿಂದ 1050ರವರೆಗೆ ಇರುತ್ತದೆ. ಇದು ಹಾಲಿ ಅಮೆರಿಕದ ಕೆಲ ಪ್ರದೇಶಗಳಲ್ಲಿ 968ಕ್ಕೆ ಇಳಿದಿದೆ.

click me!