ದಿಂಬಿಗೆ ತಲೆಯಿಟ್ಟ ಕೆಲವೇ ಕ್ಷಣದಲ್ಲಿ ಗೊರಕೆ ಶುರುವಾಗುತ್ತೆ.. ನನಗೆ ಮಾತ್ರ ತಡರಾತ್ರಿಯಾದ್ರೂ ನಿದ್ರೆ ಬರಲ್ಲ ಅಂತಾ ಪತಿಯನ್ನು ತೆಗಳ್ತಾ ಪತ್ನಿ ತನ್ನ ಗೋಳು ಹೇಳೋದನ್ನು ನೀವು ಕೇಳಿರಬಹುದು. ನಿಮಗೂ ಅನೇಕ ಬಾರಿ ಈ ಅನುಭವ ಆಗಿರಬಹುದು. ಅದಕ್ಕೆ ಕಾರಣ ಏನು ಗೊತ್ತಾ?
ಪ್ರತಿಯೊಬ್ಬ ವ್ಯಕ್ತಿ ದಿನದಲ್ಲಿ 8 ಗಂಟೆಯಾದ್ರೂ ನಿದ್ರೆ ಮಾಡಬೇಕು. ನಿದ್ರೆ ಕಡಿಮೆಯಾದ್ರೆ ನಾನಾ ಸಮಸ್ಯೆಗಳು ಶುರುವಾಗುತ್ತವೆ. ಮಾನಸಿಕ, ದೈಹಿಕ ತೊಂದರೆಯಿಂದ ಬಳಲಬೇಕಾಗುತ್ತದೆ. ಈಗಿನ ಒತ್ತಡ ಜೀವನ, ಕೆಲಸದ ಕಾರಣಕ್ಕೆ ಜನರು ಹಾಸಿಗೆ ಸೇರೋದೆ ತಡವಾಗಿ. ತಜ್ಞರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿ ದಿನ ರಾತ್ರಿ 10 ಗಂಟೆಯೊಳಗೆ ನಿದ್ರೆಗೆ ಜಾರಬೇಕು. ಬೆಳಿಗ್ಗೆ ಬೇಗ ಏಳ್ಬೇಕು. ಆದ್ರೆ ನಾವು ಉಲ್ಟಾ ಮಾಡ್ತಿದ್ದೇವೆ. ತಡರಾತ್ರಿ ಮಲಗಿ ಬೆಳಿಗ್ಗೆ ತಡವಾಗಿ ಏಳ್ತಿದ್ದೇವೆ. ಕೆಲವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಕಾರಣ ರಾತ್ರಿ ಬೇಗ ಮಲಗ್ತಾರೆ. ಆದ್ರೆ ಹಾಸಿಗೆ ಮೇಲೆ ತಲೆಯಿಟ್ಟು ಎಷ್ಟು ಸಮಯವಾದ್ರೂ ನಿದ್ರೆ ಬರೋದಿಲ್ಲ.
ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಕೆಲ ಮಾನಸಿಕ ಹಾಗೂ ಶಾರೀರಿಕ ಕಾರಣಕ್ಕೆ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ನಿದ್ರೆ ತಡವಾಗಿ ಬರುತ್ತೆ. ಇದನ್ನು ನಿದ್ರಾಹೀನತೆ (Isomnia) ಎಂದು ಕರೆಯಲಾಗುತ್ತದೆ. ನಿದ್ರೆ ಬರದೆ ಇರೋದನ್ನು ಸ್ಲೀಪ್ ಡಿಸಾರ್ಡರ್ ಎಂದು ಪರಿಗಣಿಸಲಾಗುತ್ತದೆ. ಕೆಲ ಮಹಿಳೆಯರಿಗೆ ಇದ್ರಲ್ಲಿ ಸಮಸ್ಯೆ ಕಡಿಮೆ ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ ಇಡೀ ರಾತ್ರಿ ನಿದ್ರೆ ಬರದೆ ಇರಬಹುದು. ಇದಕ್ಕೆ ನಾನಾ ಕಾರಣವಿದೆ.
undefined
ಈ ರೀತಿಯ ಒಳಉಡುಪು ಧರಿಸೋದು ವಜೈನಾಕ್ಕೆ ತುಂಬಾನೆ ಡೇಂಜರ್ !
ಮಹಿಳೆಯರಲ್ಲಿ ಹಾರ್ಮೋನ್ (Hormone) ಬದಲಾವಣೆ ಹೆಚ್ಚು. ಈ ಕಾರಣದಿಂದಲೇ ಅವರು ನಿದ್ರಾಹೀನತೆ ಸಮಸ್ಯೆ ಎದುರಿಸೋದು ಹೆಚ್ಚು. ರಾತ್ರಿ (Night) ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಬೆಳಿಗ್ಗಿನ ಕೆಲಸಕ್ಕೆ ತೊಂದರೆಯಾಗುತ್ತದೆ. ಸುಸ್ತು, ಆಲಸ್ಯ, ವಾಕರಿಕೆ, ತಲೆನೋವು ಸೇರಿದಂತೆ ಅನೇಕ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ. ಪ್ರತಿ ದಿನ ನಿದ್ರಾಹೀನತೆ ಕಾಣಿಸಿಕೊಂಡ್ರೆ ದೀರ್ಘಸಮಯದಲ್ಲಿ ಇದು ಗಂಭೀರ ರೋಗ (disease)ಕ್ಕೆ ಕಾರಣವಾಗುತ್ತದೆ. ಮಹಿಳೆಯರು ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡ್ಬೇಕಾಗುತ್ತದೆ.
ಹಾರ್ಮೋನ್ ಬದಲಾವಣೆ : ಹಾರ್ಮೋನ್ ಹಾಗೂ ನಿದ್ರೆ ಮಧ್ಯೆ ದೊಡ್ಡ ಸಂಬಂಧವಿದೆ. ಯೌವನಕ್ಕೆ ಕಾಲಿಡುವವರೆಗೆ ಈ ಸಮಸ್ಯೆ ಕಾಡೋದಿಲ್ಲ. ಹುಡುಗಿಯರು ಪಿರಿಯಡ್ಸ್ ಚಕ್ರಕ್ಕೆ ಒಳಪಡುತ್ತಿದ್ದಂತೆ ಸಮಸ್ಯೆ ಶುರುವಾಗುತ್ತದೆ. ಮುಟ್ಟಿನ ಆಧಾರದ ಮೇಲೆ ಆಗುವ ಹಾರ್ಮೋನ್ ಬದಲಾವಣೆಯಿಂದ ಸ್ಲೀಪ್ ಡಿಸಾರ್ಡರ್ ನಲ್ಲೂ ಬದಲಾವಣೆ ಕಾಣಬಹುದು. ಗರ್ಭಧಾರಣೆ, ಮುಟ್ಟು ನಿಲ್ಲುವ ಸಮಯದಲ್ಲೂ ಹಾರ್ಮೋನ್ ಬದಲಾವಣೆ ಆಗುವ ಕಾರಣ ಆಗ್ಲೂ ನಿದ್ರಾಹೀನತೆ ಮಹಿಳೆಯರನ್ನು ಕಾಡುತ್ತದೆ.
ಪುರುಷರ ಎದುರು ಚಡಪಡಿಕೆ ಯಾತಕ್ಕೆ? ಆತ್ಮವಿಶ್ವಾಸವಿಲ್ಲದ ಮಹಿಳೆಯರು ಹೇಗೆಲ್ಲ ಹಿಂಸೆ ಪಡ್ತಾರೆ ನೋಡಿ
ಮೂಡ್ ಬದಲಾವಣೆ : ಚಿಂತೆ, ಒತ್ತಡ ಸೇರಿದಂತೆ ಬದಲಾಗುವ ಮೂಡ್ ನಿದ್ರಾಹೀನತೆಗೆ ಎರಡನೇ ಕಾರಣವಾಗಿದೆ. ಮುಟ್ಟಿನ ಸಮಯದಲ್ಲಿ ಮೂಡ್ ಸ್ವಿಂಗ್ ಆಗೋದು ಹೆಚ್ಚು. ಮೂಡ್ ಸ್ವಿಂಗ್ ಆಗೋದ್ರಿಂದಲೂ ನಿದ್ರೆ ಸರಿಯಾಗಿ ಬರೋದಿಲ್ಲ. ಮಕ್ಕಳ ಜವಾಬ್ದಾರಿ, ಮನೆ, ಅಡುಗೆ, ಕೆಲ ಹೀಗೆ ನಾನಾ ಕೆಲಸಗಳನ್ನು ಮಹಿಳೆ ಒಂದೇ ಸಮಯದಲ್ಲಿ ಮಾಡ್ತಾಳೆ, ಈ ಎಲ್ಲ ವಿಷ್ಯವನ್ನು ನೆನಪಿಟ್ಟುಕೊಂಡು ತಪ್ಪಾಗದಂತೆ ತನ್ನ ಕೆಲಸ ಮಾಡುವ ಕಾರಣ ಆಕೆಯ ತಲೆಯಲ್ಲಿ ಒಂದಿಷ್ಟು ವಿಷ್ಯಗಳು ಓಡಾಡ್ತಿರುತ್ತವೆ. ಒತ್ತಡ ಕಾಡುತ್ತಿರುತ್ತದೆ. ಇದು ಆಕೆ ನಿದ್ರೆ ಮೇಲೆ ಪರಿಣಾಮ ಬಿರುತ್ತದೆ.
ಉತ್ತಮ ನಿದ್ರೆಗೆ ಮಾಡಿ ಈ ಕೆಲಸ : ಮಹಿಳೆ ತನ್ನ ಆರೋಗ್ಯವನ್ನು ನಿರ್ಲಕ್ಷ್ಯ ಮಾಡೋದು ಹೆಚ್ಚು. ಮಕ್ಕಳು, ಕುಟುಂಬವಾದ್ಮೇಲೆ ತಾನು ಎನ್ನುವ ಮಹಿಳೆ ತನ್ನ ನಿದ್ರೆಗೆ ಮಾನ್ಯತೆ ನೀಡೋದಿಲ್ಲ. ಒಂದೊಂದು ದಿನ ಒಂದೊಂದು ಸಮಯದಲ್ಲಿ ನಿದ್ರೆ ಮಾಡ್ತಾಳೆ. ಇದು ತಪ್ಪು. ನೀವು ಪ್ರತಿ ದಿನ ಒಂದೇ ಸಮಯದಲ್ಲಿ ನಿದ್ರೆ ಮಾಡ್ಬೇಕು ಒಂದೇ ಸಮಯದಲ್ಲಿ ಎದ್ದೇಳಬೇಕು. ನಿದ್ರೆಗೆ ಟೈಂ ಸೆಟ್ ಮಾಡಿಕೊಳ್ಳುವುದು ಉತ್ತಮ.
ನಿದ್ರೆ ಮಾಡುವ ಮುನ್ನ ಯಾವುದೇ ಆಲೋಚನೆ ಮಾಡಬೇಡಿ. ನಿದ್ರೆ ಮಾಡುವ ಮುನ್ನ ಹಾಸಿಗೆಯ ಮೇಲೆ ಶಾಂತವಾಗಿ ಕುಳಿತು ಧ್ಯಾನ ಮಾಡಬೇಕು. ಹಾಸಿಗೆಗೆ ಹೋಗುವ ಒಂದು ಗಂಟೆ ಮೊದಲೇ ನೀವು ಮೊಬೈಲ್, ಗ್ಯಾಜೆಟ್ ನೋಡುವುದನ್ನು ನಿಲ್ಲಿಸಿ. ಬೆಡ್ ರೂಮಿನ ಸ್ವಚ್ಛತೆ, ಉತ್ತಮ ಗುಣಮಟ್ಟದ ಬೆಡ್, ಬೆಡ್ ಶೀಟ್ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ರಾತ್ರಿ ಕಿರಿಕಿರಿ ನೀಡುವ ಬಟ್ಟೆ ಧರಿಸಬೇಡಿ. ರಾತ್ರಿ ಕಾಫಿ, ಟೀ ಸೇವನೆಯಿಂದ ದೂರವಿರಿ.