ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಕುಳಿತರೆ ಸಾಧನೆ ಶೂನ್ಯ. ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಬುದ್ಧಿವಂತಿಕೆಯಿಂದ ಕೆಲಸ ಶುರು ಮಾಡಿದ್ರೆ ಯಶಸ್ಸು ನಿಶ್ಚಿತ. 62ರ ವೃದ್ಧಿಯ ಹಾಲು ಮಾರಾಟದ ಕಥೆ ಮಹಿಳೆಯರಿಗೆ ಸ್ಪೂರ್ತಿ.
ಕರ್ನಾಟಕ(Karnataka)ದ ಕೆಲ ಹಳ್ಳಿ(Village)ಗಳಲ್ಲಿ ಮೊದಲಿನಂತೆ ಹಸು(Cow)ಗಳ ಸಾಕಣೆಯಿಲ್ಲ. ಅನೇಕ ಕಾರಣಗಳಿಗೆ ಜನರು ಮನೆಯಲ್ಲಿದ್ದ ಹಸುಗಳನ್ನು ಮಾರಾಟ ಮಾಡಿದ್ದಾರೆ. ಹಾಗಾಗಿ ಹಾಲಿಗಾಗಿ ಡೈರಿಯಲ್ಲಿ ಬೇಡಿಕೆ ಹೆಚ್ಚಾಗಿದೆ.ಮನೆಯಲ್ಲಿ ಹಸುವಿಲ್ಲ ಎಂದಾಗ ಬರೀ ಹಾಲು ಮಾತ್ರವಲ್ಲ ಮೊಸರು,ತುಪ್ಪ ಹೀಗೆ ಅನೇಕ ಹಾಲಿನ ಉತ್ಪನ್ನಗಳಿಗೆ ನಾವು ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಇದನ್ನೇ ಮಹಿಳೆಯರು ಬಂಡವಾಳ ಮಾಡಿಕೊಳ್ಳಬಹುದು. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ. ಯಾವುದೇ ಕೆಲಸವನ್ನು ಸರಿಯಾಗಿ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ ಮತ್ತು ವ್ಯವಹಾರದಲ್ಲಿ ಆಸಕ್ತಿ ಇದ್ದರೆ ನೀವು ನಿಜವಾಗಿಯೂ ಉತ್ತಮ ಉದ್ಯಮಿಯಾಗಬಹುದು. ಏನನ್ನಾದ್ರೂ ಸಾಧಿಸಬೇಕೆಂಬ ಹಳ್ಳಿಯ ಮಹಿಳೆಯರಿಗೆ ಗುಜರಾತ್‌ನ 62 ವರ್ಷದ ಮಹಿಳೆ ನವಲ್ಬೆನ್ ದಲ್ಸಂಗ್‌ಭಾಯ್ ಚೌಧರಿ ಮಾದರಿಯಾಗಬಲ್ಲರು. ಹಾಲು ಮಾರಾಟ ಮಾಡುವ ಮೂಲಕ, ಅತಿ ಕಡಿಮೆ ಸಮಯದಲ್ಲಿ ದೊಡ್ಡ ಸಾಧನೆ ಮಾಡಿದವರ ಪಟ್ಟಿಯಲ್ಲಿ ನವಲ್ಬೆನ್ ದಲ್ಸಂಗ್ ಭಾಯ್ ಚೌಧರಿ ಸೇರುತ್ತಾರೆ. ನವಲ್ಬೆನ್ ದಲ್ಸಂಗಭಾಯ್ ಚೌಧರಿಯವರ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದ ಸ್ಪೂರ್ತಿದಾಯಕ ಕಥೆ ಕೇಳಿ.
ನವಲ್ಬೆನ್ ಡೈರಿಯಲ್ಲಿವೆ 80 ಎಮ್ಮೆಗಳು ಮತ್ತು 45 ಹಸುಗಳು
ನವಲ್ಬೆನ್ ಅವರು ಡೈರಿ ಶುರು ಮಾಡಿದ್ದು ಸಣ್ಣ ಪ್ರಮಾಣದಲ್ಲಿ. ಅವರ ಬಳಿ ಆರಂಭದಲ್ಲಿ ಕೇವಲ 20-25 ಹಸುಗಳು ಮತ್ತು ಎಮ್ಮೆಗಳಿದ್ದವು. ಈಗ, ಅವರು 80 ಕ್ಕೂ ಹೆಚ್ಚು ಎಮ್ಮೆಗಳು ಮತ್ತು 45 ಹಸುಗಳನ್ನು ಸಾಕುತ್ತಿದ್ದಾರೆ. ಅನೇಕ ಹಳ್ಳಿಗಳ ಜನರ ಹಾಲಿನ ಅಗತ್ಯವನ್ನು ನವಲ್ಬೆನ್ ಪೂರೈಸುತ್ತಿದ್ದಾರೆ. ಅವರು 2020 ರಲ್ಲಿ 1.10 ಕೋಟಿ ರೂಪಾಯಿ ಮೌಲ್ಯದ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 3.50 ಲಕ್ಷ ರೂಪಾಯಿ ಲಾಭ ಗಳಿಸಿದ್ದರು. 2019 ರಲ್ಲಿ ಅವರು 87.95 ಲಕ್ಷ ರೂಪಾಯಿ ಮೌಲ್ಯದ ಹಾಲನ್ನು ಮಾರಾಟ ಮಾಡಿದ್ದರು.
undefined
Acne Problem: ಮಧ್ಯವಯಸ್ಸಲ್ಲಿ ಮೊಡವೆಯೇ? ಕಾರಣ ಅರಿಯಿರಿ
ಹಾಲು ಮಾರಾಟದಿಂದ ಪ್ರತಿ ತಿಂಗಳು 3.50 ಲಕ್ಷ ಲಾಭ
ಮನೆಯಲ್ಲಿಯೇ ಏನನ್ನಾದರೂ ಮಾಡಬೇಕೆಂಬ ಛಲದೊಂದಿಗೆ ನವಲ್ಬೆನ್ ಡೈರಿ ಶುರು ಮಾಡಿದರು. ಅಲ್ಲಿಂದ ಅವರ ಯಶಸ್ಸಿನ ಕಥೆ ಪ್ರಾರಂಭವಾಯಿತು. ಬನಸ್ಕಾಂತ ಜಿಲ್ಲೆಯ ನಾಗಾನಾ ಗ್ರಾಮದ ನಿವಾಸಿ ನವಲ್ಬೆನ್ ಅವರು ತಮ್ಮ ಜಿಲ್ಲೆಯಲ್ಲಿ ಮಿನಿ ಕ್ರಾಂತಿ ಮಾಡಿದ್ದಾರೆ. ಕೊರೊನಾ ಅವಧಿಯಲ್ಲಿ ಜನರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೆ ನವಲ್ಬೆನ್ ಅವರು ತಿಂಗಳಿಗೆ 3.50 ಲಕ್ಷ ರೂಪಾಯಿ ಲಾಭ ಗಳಿಸಿದ್ದರು.
2020 ರಲ್ಲಿ ಒಂದು ಕೋಟಿ ಲಾಭ : ಅವರ ಡೈರಿಯ ಹಾಲು ಬನಸ್ಕಾಂತದಾದ್ಯಂತ ಹೋಗುತ್ತದೆ. ಬೆಳಗ್ಗೆ ಮತ್ತು ಸಂಜೆ 500-500 ಲೀಟರ್ ಹಾಲು ಮಾರುತ್ತಾರೆ. ಅಷ್ಟೇ ಅಲ್ಲದೆ ಈ ವ್ಯವಹಾರದ ಮೂಲಕ 15 ಮಂದಿ ನಿರುದ್ಯೋಗಿಗಳಿಗೆ ಕೆಲಸ ನೀಡಿದ್ದಾರೆ. ಅವರಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿದ್ದಾರೆ. 2019 ರಲ್ಲಿ ಗುಜರಾತ್‌ನ ತನ್ನ ಜಿಲ್ಲೆಯಲ್ಲಿ 87.95 ಲಕ್ಷ ರೂಪಾಯಿ ಮೌಲ್ಯದ ಹಾಲನ್ನು ಮಾರಾಟ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಅಪ್ಪಿತಪ್ಪಿಯೂ Menstrual Cup ಬಳಸ್ಬೇಡಿ
ಲಕ್ಷ್ಮಿ ಪ್ರಶಸ್ತಿ ನೀಡಿ ಗೌರವ : ನವಲ್ಬೆನ್ ಅವರು ತಮ್ಮ ಜಿಲ್ಲೆಯ ಅತ್ಯುತ್ತಮ 'ಪಶುಪಾಲಕಿ' ಪ್ರಶಸ್ತಿಯನ್ನು 3 ಬಾರಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಎರಡು ಬಾರಿ ‘ಲಕ್ಷ್ಮಿ’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಅವರಿಗೆ 4 ಗಂಡು ಮಕ್ಕಳಿದ್ದಾರೆ. ಅವರು ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಆದಾಯವು ಇವರಿಗಿಂತ ಕಡಿಮೆ. ಅವರು ಪ್ರತಿದಿನ ಬೆಳಿಗ್ಗೆ ತನ್ನ ಎಮ್ಮೆ,ಹಸುವಿಗೆ ನೀರು ನೀಡುತ್ತಾರೆ.ಅವುಗಳ ಆರೈಕೆ ಮಾಡ್ತಾರೆ. ಅವರು ಹಸು ಮತ್ತು ಎಮ್ಮೆಗಳನ್ನು ವ್ಯಾಪಾರದ ಸಾಧನವಾಗಿ ಎಂದೂ ನೋಡಿಲ್ಲ. ಕೊರೊನಾ ಅವಧಿಯಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಜನರಿಗೆ ನವಲ್ಬೆನ್ ಸ್ಫೂರ್ತಿಯಾಗಿದ್ದಾರೆ.