Small Screen
ಕನ್ನಡದ ಕಾಂಟ್ರವರ್ಸಿ ನಟ ಎಂದೇ ಖ್ಯಾತಿ ಆಗಿರುವ ದರ್ಶನ್ ತೂಗುದೀಪ ಅವರೊಂದಿಗೆ ಡಾ.ಬ್ರೋ ಕಳೆದ ಐದಾರು ವರ್ಷಗಳ ಹಿಂದೆಯೇ ಫೋಟೋ ತೆಗೆಸಿಕೊಂಡಿದ್ದಾರೆ.
ಕನ್ನಡ ಸ್ಟಾರ್ ನಟ ಡಾ.ಶಿವ ರಾಜ್‌ಕುಮಾರ್ ಅವರೊಂದಿಗೆ ಡಾ.ಬ್ರೋ ಶೂಟಿಂಗ್ ಸ್ಪಾಟ್‌ಗೆ ತೆರಳಿ ಫೋಟೋ ಕಲ್ಲಿಕ್ಕಿಸಿಕೊಂಡಿದ್ದಾರೆ.
ಡಾ.ಬ್ರೋ ನಟ ಕಿಚ್ಚ ಸುದೀಪ್ ಅವರೊಂದಿಗೆ ಫೋಟೋ ತೆಗೆದುಕೊಳ್ಳುವಾಗ ಅವರನ್ನು ಮಾತನಾಡಿಸಿಯೂ ಇಲ್ಲವೆಂಬಂತೆ ಕಾಣುತ್ತದೆ.
ಕನ್ನಡ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆದ ನಟರಲ್ಲಿ ಒಬ್ಬರಾದ ರಾಜ್.ಬಿ. ಶೆಟ್ಟಿ ಅವರೊಂದಿಗೆ ಡಾ.ಬ್ರೋ ತೀರಾ ಆತ್ಮೀಯವಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಯ್ಯೂಟೂಬ್‌ನಲ್ಲಿ ವಿಭಿನ್ನ ವಿಡಿಯೋ ಹಂಚಿಕೊಂಡು ಸ್ಟಾರ್ ಆಗುತ್ತಿದ್ದಂತೆ ಡಾ.ಬ್ರೋ ಕೂಡ ಪ್ರಸಿದ್ಧಿ ಆಗಿದ್ದಾರೆ. ಹೀಗಾಗಿ, ವಸಿಷ್ಠ ಸಿಂಹ ಅವರೊಂದಿಗೆ ಆತ್ಮೀಯ ಸೆಲ್ಫಿ ತೆಗೆದುಕೊಂಡಿದ್ದಾರೆ.
ದೇಶದಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿದ ಲೂಸಿಯಾ ಸಿನಿಮಾ ನಟ ಸತೀಶ್ ನಿನಾಸಂ ಅವರೊಂದಿಗೂ ಡಾ.ಬ್ರೋ ಕಾದು ನಿಂತು ಫೋಟೋ ತೆಗೆದುಕೊಂಡಿದ್ದಾರೆ.
ಡಾ ಬ್ರೋ ಕೂಡ ಒಬ್ಬ ಸೆಲೆಬ್ರಿಟಿ ಆಗಿಯೇ ಮತ್ತೊಬ್ಬ ಸೆಲೆಬ್ರಿಟಿ ನಟ ಸಿಹಿ ಕಹಿ ಚಂದ್ರು ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ ಮಾತ್ರವಲ್ಲ ರಾಜಕೀಯ ನಾಯಕ ಪ್ರದೀಪ್ ಈಶ್ವರ್ ಅವರೊಂದಿಗೂ ಗಗನ್ ಶ್ರೀನಿವಾಸ್ ಫೋಟೋ ಹೊಂದಿದ್ದಾರೆ.
ಭಾರತದ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾಗಿರುವ ಅನಿಲ್ ಕುಂಬ್ಳೆ ಅವರೊಂದಿಗೆ 6 ಅಡಿ 4 ಅಡಿಯ ಮೂರ್ತಿಗಳಂತೆ ನಿಂತು ಡಾ.ಬ್ರೋ ಫೋಟೋ ತೆಗೆಸಿಕೊಂಡಿದ್ದಾರೆ.
ಗಗನ್ ಶ್ರೀನಿವಾಸ್ ಇನ್ನೂ ಹುಡುಗನಾಗಿದ್ದಾಗಲೇ ನಟಿ ರಚಿತಾ ರಾಮ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.