Small Screen
ಕನ್ನಡ ಕಿರುತೆರೆಯ ಫೇವರಿಟ್ ನಾಗಿಣಿ ದೀಪಿಕಾ ದಾಸ್, ತಮ್ಮ ಮಾಡರ್ನ್, ಬೋಲ್ಡ್ ಲುಕ್ ನಿಂದಲೇ ಗಮನ ಸೆಳೆಯುವ ನಟಿ.
ದೀಪಿಕಾ ಅದೆಷ್ಟೇ ಮಾಡರ್ನ್ ಡ್ರೆಸ್ ಹಾಕಿದ್ರೂ ಸಹ ಸೀರೆಯುಟ್ಟರೆ ದೀಪಿಕಾ ದಾಸ್ ಅಪ್ಪಟ ದೇವತೆ. ಹಾಗಂತ ಅಭಿಮಾನಿಗಳು ಹೇಳ್ತಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಪಾರ್ವತಿ ದೇವಿಯ ಲಕ್ಷಣ, ದೀಪಿಕಾ, ನಮ್ಮ ಹಾಸನದ ಹೆಣ್ಣು ಮಗಳು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ಫ್ಯಾನ್ಸ್.
ಪಿಂಕ್ ಬಣ್ಣದ ಸೀರೆ ಮತ್ತು ಮೆರೂನ್ ಬಣ್ಣದ ಬ್ಲೌಸ್ ಧರಿಸಿರುವ ದೀಪಿಕಾ ದಾಸ್ ನೋಡಿ ಜನ ಅಂದದ ಸೀರೆಯಲ್ಲಿ, ಅಂದದ ಬೆಡಗಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು ಪ್ರೀತಿಯಿಂದ ದೀಪಿಕಾ ದಾಸ್ ಏನರ ಸಿಹಿ ಸುದ್ದಿ ಆದಷ್ಟು ಬೇಗ ಕೊಡ್ತೀರಾ? ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.
ಅಂದಹಾಗೇ ದೀಪಿಕಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೇ ಮಾರ್ಚ್ ತಿಂಗಳಿಗೆ ಒಂದು ತಿಂಗಳು ತುಂಬಿದ್ದು, ಪತಿ ಜೊತೆ ದೇಶ ವಿದೇಶ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ ದೀಪಿಕಾ.
ದೀಪಿಕಾ ದಾಸ್ ಪತಿ ದೀಪಕ್ ಗೌಡ, ಬ್ಯುಸಿನೆಸ್ ಮ್ಯಾನ್ ಆಗಿದ್ದು, ಇವರು ದುಬೈ, ಲಂಡನ್ ನಲ್ಲಿ ತಮ್ಮದೇ ಆದ ಕಂಪನಿಯನ್ನು ಕೂಡ ಹೊಂದಿದ್ದಾರೆ. ಲಂಡನ್ ನಲ್ಲಿ ಇತ್ತೀಚೆಗೆ ಕನ್ನಡ ಕೂಟವನ್ನು ಕೂಡ ಮಾಡಿದ್ದರು.
ಆತ್ಮವಿಶ್ವಾಸ ಮೌನವಾಗಿದೆ; ಇನ್ ಸೆಕ್ಯೂರಿಟಿ ಸದ್ದು ಮಾಡುತ್ತಿದೆ, ನನ್ನ ಸ್ವಂತ ಆತ್ಮದ ಪಿಸುಮಾತುಗಳನ್ನು ಅನುಸರಿಸುತ್ತವೆ ಎಂದು ಕ್ಯಾಪ್ಶನ್ ಕೊಟ್ಟ ದೀಪಿಕಾ.
ನಾಗಿಣಿ, ಬಿಗ್ ಬಾಸ್ ಬಳಿಕ ಕಿರುತೆರೆಯಿಂದ ದೂರ ಉಳಿದಿದ್ದ ದೀಪಿಕಾ, ಇತ್ತೀಚೆಗೆ ಪಾರು, ಪಾರ್ವತಿ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು. ಮುಂದಿನ ಸಿನಿಮಾ ಯಾವುದು ಅನ್ನೋ ಮಾಹಿತಿ ಸಿಕ್ಕಿಲ್ಲ.