Health
ಹೆಚ್ಚು ಮದ್ಯಪಾನ ಸೇವಿಸುವುದರಿಂದ ಚರ್ಮದ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಮದ್ಯಪಾನ ಮಾಡದೇ ಇರುವುದು ಒಳ್ಳೆಯದು.
ಧೂಮಪಾನ ಮಾಡುವವರಲ್ಲಿ ಚರ್ಮದ ಮೇಲೆ ಸುಕ್ಕುಗಳು ಬೇಗನೆ ಬರುತ್ತವೆ. ಆದ್ದರಿಂದ ಧೂಮಪಾನವನ್ನು ಕಡಿಮೆ ಮಾಡುವುದು ಒಳ್ಳೆಯದು.
ನಿದ್ರಾಹೀನತೆಯಿಂದ ದೇಹದಲ್ಲಿ ಕಪ್ಪು ಕಲೆಗಳು ಬರುತ್ತವೆ. ಇದರಿಂದ ಹೆಚ್ಚು ವಯಸ್ಸು ಕಾಣಿಸುತ್ತದೆ. ಆದ್ದರಿಂದ ನಿದ್ರೆ ಬಹಳ ಅವಶ್ಯಕ.
ಎಣ್ಣೆಯಲ್ಲಿ ಕರಿದ ಆಹಾರಗಳು, ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನುವುದರಿಂದ ಚರ್ಮದ ಆರೋಗ್ಯ ಹಾಳಾಗುತ್ತದೆ.
ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ ಮುಖದ ಮೇಲೆ ಹೆಚ್ಚು ವಯಸ್ಸು ಕಾಣಿಸುತ್ತದೆ. ಆದ್ದರಿಂದ ನೀರನ್ನು ಹೆಚ್ಚಾಗಿ ಕುಡಿಯಬೇಕು.
ವ್ಯಾಯಾಮ ಮಾಡದಿರುವುದರಿಂದ ಕೂಡ ಚರ್ಮ ಹಾಳಾಗುತ್ತದೆ.
ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರುವುದು, ಸನ್‌ಸ್ಕ್ರೀನ್ ಲೋಷನ್‌ಗಳನ್ನು ಬಳಸದೇ ಇರುವುದರಿಂದ ಚರ್ಮದ ಸಮಸ್ಯೆಗಳು ಬರುತ್ತವೆ.