Cricket
ಟೀಂ ಇಂಡಿಯಾ ವೇಗಿ ಕಳೆದ ಅಕ್ಟೋಬರ್‌ನಲ್ಲಿ ತೆಲಂಗಾಣ DSP ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಿರಾಜ್ ಬಳಿಕ ಇದೀಗ ಭಾರತದ ಅನುಭವಿ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಅವರಿಗೆ ಉತ್ತರ ಪ್ರದೇಶ ಪೊಲೀಸ್‌ನಲ್ಲಿ ಮಹತ್ವದ ಹುದ್ದೆ ಹೆಗಲೇರಿದೆ.
ದೀಪ್ತಿ ಶರ್ಮಾ ಯುಪಿ ಪೊಲೀಸ್‌ನಲ್ಲಿ DSP ಆಗಿ ಅಧಿಕಾರ ಸ್ವೀಕರಿಸಿದ್ದಾರೆ. DSP ಯೂನಿಫಾರಂ ತೊಟ್ಟಿರುವ ಫೋಟೋಗಳನ್ನು ದೀಪ್ತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನನಗೆ ಈ ಹುದ್ದೆ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ ಅವರ ಸಹಕಾರದಿಂದಲೇ ನಾನು ಈ ಹಂತಕ್ಕೇರಿದ್ದೇನೆ ಎಂದಿದ್ದಾರೆ.
ಈ ಅವಕಾಶ ನೀಡಿದ ಉತ್ತರಪ್ರದೇಶ ಸರ್ಕಾರಕ್ಕೂ ನಾನು ಆಭಾರಿಯಾಗಿದ್ದೇನೆ. ಯುಪಿ ಪೊಲೀಸ್‌ನಲ್ಲಿ DSP ಆಗಿ ಸಮರ್ಪಣ ಭಾವದಿಂದ ಕರ್ತವ್ಯ ನಿಭಾಯಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.
ದೀಪ್ತಿ ಶರ್ಮಾ ಭಾರತ ಮಹಿಳಾ ತಂಡದ ಪರ ಇದುವರೆಗೂ 5 ಟೆಸ್ಟ್ 101 ಏಕದಿನ ಹಾಗೂ 124 ಟಿ20 ಪಂದ್ಯಗಳನ್ನಾಡಿದ್ದಾರೆ.
ಮಹಿಳಾ ಟೆಸ್ಟ್‌ನಲ್ಲಿ ದೀಪ್ತಿ ಶರ್ಮಾ 63.80ರ ಬ್ಯಾಟಿಂಗ್ ಸರಾಸರಿಯಲ್ಲಿ 319 ರನ್ ಗಳಿಸಿದ್ದಾರೆ. ಜತೆಗೆ 20 ವಿಕೆಟ್ ಕೂಡಾ ಕಬಳಿಸಿದ್ದಾರೆ.
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 34.74ರ ಬ್ಯಾಟಿಂಗ್ ಸರಾಸರಿಯಲ್ಲಿ 2,154 ರನ್ ಹಾಗೂ 130 ವಿಕೆಟ್ ಕಬಳಿಸಿದ್ದಾರೆ.
ಇನ್ನು ಮಹಿಳಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 23.60ರ ಬ್ಯಾಟಿಂಗ್ ಸರಾಸರಿಯಲ್ಲಿ 1086 ರನ್ ಹಾಗೂ 138 ವಿಕೆಟ್ ಕಬಳಿಸಿದ್ದಾರೆ.
1997ರ ಆಗಸ್ಟ್ 24ರಂದು ಆಗ್ರಾದಲ್ಲಿ ಜನಿಸಿದ ದೀಪ್ತಿ, WPL ಟೂರ್ನಿಯಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.