
ಮಗು ಅಳಲು ಆರಂಭಿಸಿದಾಗೆಲ್ಲ ಸುಮ್ಮನಾಗಿಸಲು ತಾಯಿ ಲಾಲಿ ಹಾಡುವುದು, ತೊಟ್ಟಿಲಲ್ಲಿ ಹಾಕಿ ತೂಗುವುದು, ತೋಳುಗಳಲ್ಲಿ ಹಿಡಿದುಕೊಂಡು ತೂಗುವುದು, ಮಗುವಿನೊಂದಿಗೆ ಮಾತನಾಡುವುದು ಮಾಡುತ್ತಾರೆ ಇದು ಸಾಮಾನ್ಯವೇ ಬಿಡಿ.
ಇತ್ತೀಚೆಗೆ ಚೀನಿ ಮಹಿಳೆ ಸಾರಾ ಜೇನ್ ಹೋ ತನ್ನ 4 ತಿಂಗಳ ಅಳುವ ಮಗುವನ್ನು ಸುಮ್ಮನಾಗಿಸಲು ವಿವಿಧ ರೀತಿಯಲ್ಲಿ ಕಸರತ್ತು ನಡೆಸಿದರೂ ಸುಮ್ಮನಾಗದ ಮಗುವನ್ನು ಶಾಂತಗೊಳಿಸಲು ಹನುಮಾನ್ ಚಾಲೀಸಾ ಪಠಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಡಿಯೋದಲ್ಲಿ, ನನ್ನ ಮಗು ಅತ್ತಾಗಲೆಲ್ಲ ನಾನು ಹನುಮಾನ್ ಚಾಲೀಸಾ ಹಾಡುತ್ತೇನೆ ಅಥವಾ ನುಡಿಸುತ್ತೇನೆ ಕೆಲವೇ ಸೆಕೆಂಡ್‌ಗಳಲ್ಲಿ ಮಗು ಅಳುವುದು ನಿಲ್ಲಿಸುತ್ತದೆ. ಸ್ವಲ್ಪ ಸಮಯದ ನಂತರ ನಿದ್ರಿಸುತ್ತದೆ ಎಂದು ಹೇಳಿದ್ದರು. ಅಲ್ಲದೇ ಹನುಮಾನ್ ಚಾಲೀಸಾ ತನ್ನ ಭಾರತೀಯ ಸ್ನೇಹಿತರಿಂದ ಕಲಿತಿದ್ದಾಗಿ ಸಾರಾ ಹಂಚಿಕೊಂಡಿದ್ದರು.
ಇದು ಆಕೆಯ ವೈಯಕ್ತಿಕ ಅನುಭವವಾಗಿದ್ದರೂ ಮತ್ತೊಮ್ಮೆ ಹನುಮಾನ್ ಚಾಲೀಸಾ ಬಗ್ಗೆ ತೀವ್ರ ಆಸಕ್ತಿಯನ್ನು ಹುಟ್ಟುಹಾಕಿರುವುದಂತೂ ಹೌದು. ನಿಜವಾಗಿಯೂ ಹನುಮಾನ ಚಾಲೀಸಾ ಕೇಳುವುದರಿಂದ ಹಾಡುವುದರಿಂದ ಮನಸ್ಸು ಮತ್ತು ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಮಗು ಹೇಗೆ ಅಳುವುದು ನಿಲ್ಲಿಸುತ್ತದೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಸಾರಾ ಜೇನ್ ಹೋ ಅವರ ಅನುಭವದ ಪ್ರಕಾರ ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರ ಆಕೆಯ ಮಗು ಬೇಗ ಅಳುವುದು ನಿಲ್ಲಿಸಿತು. ಹನುಮಾನ್ ಚಾಲೀಸಾ ಹಾಡಿದ್ದಕ್ಕೇ ಅಳುವುದು ನಿಲ್ಲಿಸಿತೇ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ. ಆದರೆ ಹನುಮಾನ್ ಚಾಲೀಸಾ ಪಠಿಸುವಾಗ ಅದರ ಸ್ಥಿರವಾದ ಲಯ, ಪುನರಾವರ್ತಿತ ಶಬ್ದ, ಒಂದು ವೇಳೆ ತಾಯಿಯೇ ಪಠಿಸುತ್ತಿದ್ದರೆ ಅವಳ ಧ್ವನಿ ಅಳುವ ಮಗುವಿನ ಗಮನ ಬೇರೆಡೆಗೆ ಸೆಳೆಯುತ್ತದೆ. ಮಕ್ಕಳನ್ನು ಶಾಂತಗೊಳಿಸಲು ಮೃದುವಾದ ಸಂಗೀತ, ಇಂಪಾದ ಹಾಡು, ಮಾತು, ಮೃದುವಾದ ಲಯಬದ್ಧವಾದ ಶಬ್ದಗಳನ್ನ ಬಳುಸಬೇಕೆಂದರು ತಜ್ಞರು ಹೇಳುತ್ತಾರೆ.
ಚಿಕ್ಕ ಮಕ್ಕಳ ಮೆದುಳು ನಿರಂತರವಾಗಿ ಹೊಸ ಶಬ್ದಗಳು, ವಸ್ತುಗಳಿಗೆ ಪ್ರತಿಕ್ರಿಯಿಸುತ್ತದೆ. ಜೋರಾದ ಶಬ್ದಗಳಿಗಿಂತ, ಪರಿಚಯದ ಧ್ವನಿಗಳನ್ನು ಕೇಳಿದಾಗ ಮಗು ಸುಮ್ಮನಾಗುತ್ತೆ. ಉದಾಹರಣೆಗೆ ಮಗು ಅಳುವಾಗ ತಾಯಿ ಲಾಲಿ ಹಾಡುತ್ತಿದ್ದಂತೆ, ತಾಯಿ ಶಬ್ದ ಕೇಳುತ್ತಿದ್ದಂತೆ ಮಗು ಸುಮ್ಮನಾಗುತ್ತದೆ. ಕೆಲವು ಅಧ್ಯಯನಗಳು ಲಾಲಿ ಹಾಡುಗಳು ಅಥವಾ ಅವರ ತಾಯಿಯ ಧ್ವನಿಯನ್ನು ಕೇಳುವಾಗ ಚಿಕ್ಕ ಮಕ್ಕಳಲ್ಲಿ ಹೃದಯ ಬಡಿತದಲ್ಲಿ ಇಳಿಕೆ ಕಂಡುಬರುತ್ತದೆ. ಈ ಶಾಂತ ಸ್ಥಿತಿಯು ಮಕ್ಕಳು ನಿದ್ರಿಸಲು ಸಹಾಯ ಮಾಡಬಹುದು.
ಶಿಶುಗಳು ಹನುಮಾನ ಚಾಲೀಸಾದಂತಹ ಮಧುರ ಲಯಬದ್ಧ ಧ್ವನಿಯಲ್ಲದೆ, ಧ್ವನಿಯ ಮಾದರಿಗಳನ್ನ ಮಗು ಗುರುತಿಸುತ್ತದೆ. ಒಂದು ಧ್ವನಿ ಅಥವಾ ಹಾಡನ್ನು ಪದೇ ಪದೇ ನುಡಿಸಿದರೆ, ಅದು ಮಗುವಿಗೆ ಪರಿಚಿತವಾಗಬಹುದು. 8 ಮತ್ತು 10 ತಿಂಗಳ ವಯಸ್ಸಿನ ಶಿಶುಗಳ ಮೇಲಿನ ಒಂದು ಅಧ್ಯಯನವು ಪರಿಚಿತ ಹಾಡುಗಳು ಇತರ ಶಬ್ದಗಳಿಗಿಂತ ಮಗುವನ್ನು ಶಾಂತಗೊಳಿಸುತ್ತೆ ಎಂದು ಕಂಡುಹಿಡಿದೆ. ಆದ್ದರಿಂದ, ಪ್ರತಿದಿನ ಮಗುವಿಗೆ ಅದೇ ಮೃದುವಾದ ಲಾಲಿ ಹಾಡು ಹಾಡುವ ತಾಯಿಯ ಧ್ವನಿ ಹನುಮಾನ್ ಚಾಲೀಸಾ ನುಡಿಸುವುದರಿಂದ ಮಗುವಿಗೆ ಕ್ರಮೇಣ ಆ ಧ್ವನಿ ಕೇಳಿದಾಗ ಆರಾಮ ಎನಿಸಿ ಸುಮ್ಮನಾಗುತ್ತದೆ. ಕೇಳುತ್ತಾ ನಿದ್ರೆ ಜಾರಬಹುದು.
ಅಳುತ್ತಿದ್ದ ಮಗು ತಾಯಿಯ ಲಾಲಿ ಕೇಳುತ್ತಲೇ ಅಳುವುದು ನಿಧಾನವಾಗಿ ಕಡಿಮೆ ಮಾಡಿ ಹಾಡುತ್ತ ನಿದ್ರೆ ಜಾರಬಹುದು. ಏಕೆಂದರೆ ಪರಿಚಿತ ಧ್ವನಿಯ ಮಧುರವಾದ ಹಾಡು ಕೇಳಿದಾಗ ಮಗುವಿನ ಮೆದುಳಿನಲ್ಲಿ ಚಟುವಟಿಕೆ ನಿಧಾನವಾಗುತ್ತ ದೇಹವು ವಿಶ್ರಾಂತಿ ಪಡೆಯಲು ಪ್ರಾರಂಭಿಸುತ್ತದೆ. ಈ ವೇಳೆ ಕೋಣೆಯಲ್ಲಿ ಹೆಚ್ಚು ಬೆಳಕಿಲ್ಲದೆ ಮಂದವಾಗಿದ್ದರೆ ಬೇಗ ಮಲಗುತ್ತದೆ. ಚಿಕ್ಕ ಮಕ್ಕಳಿಗೆ ದಿನನಿತ್ಯ ಲಾಲಿ ಹಾಡು ಹಾಡುವುದು, ಅಥವಾ ಹನುಮಾನ್ ಚಾಲೀಸಾ ಪಠಣ ಕೇಳಿಸುವುದು ಅಭ್ಯಾಸ ಮಾಡಿಸಿದರೆ ಅಳುವಾಗಲೆಲ್ಲ ಅದರ ಧ್ವನಿಗೆ ಮಕ್ಕಳು ಸುಮ್ಮನಾಗುತ್ತವೆ ಇದು ಮಗುವಿಗೆ ನಿದ್ದೆ ಮಾಡಿಸಲು ಉತ್ತಮ ಉಪಾಯ.
ಗೊತ್ತಿಲ್ಲ. ಇಲ್ಲಿ ವಿಡಿಯೋದಲ್ಲಿ ಸಾರಾ ಜೇನ್ ಹೋ ವಿವರಿಸುವುದು ಆಕೆಯ ಮಗುವಿನ ವೈಯಕ್ತಿಕ ಅನುಭವ. ಆದ್ದರಿಂದ ಇದನ್ನು ಪ್ರತಿ ಮಗುವು ಹನುಮಾನ್ ಚಾಲೀಸಾ ಪಠಣ ಮಾಡಿದರೆ ಮಲಗುತ್ತದೆ ಎಂದರ್ಥವಲ್ಲ. ಒಂದು ಮಗು ಹನುಮಾನ್ ಚಾಲೀಸಾವನ್ನು ಆನಂದಿಸಬಹುದು, ಇನ್ನೊಂದು ಮಗು ಲಾಲಿ ಅಥವಾ ತಾಯಿಯ ಧ್ವನಿಯೇ ಹೆಚ್ಚು ಶಾಂತವಾಗಿ ಕಾಣಬಹುದು, ಮತ್ತೊಂದು 'ಸಂಪೂರ್ಣವಾಗಿ ಶಾಂತವಾದ ಕೋಣೆಯನ್ನು ಬಯಸಬಹುದು.
ಆದರೆ ತಾಯಂದಿರು ಒಂದು ವಿಷಯ ಗಮನಿಸಬೇಕು; ಒಂದು ಮಗು ನಿರಂತರವಾಗಿ ಅಸಹಜವಾಗಿ ಅಳುತ್ತಿದ್ದರೆ, ಕೇವಲ ಶಬ್ದದಿಂದ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುವ ಬದಲು, ಅಳುವಿಗೆ ಕಾರಣಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಮಕ್ಕಳಿಗೆ ಮಾತೇ ಬರುವುದಿಲ್ಲವಾದ್ದರಿಂದ ಅದು ಏಕೆ ಅಳುತ್ತಿದೆ ಎಂದು ಹೇಳಲಾಗದು. ಒಂದು ವಿಡಿಯೋದಲ್ಲಿ ತುಂಬಾ ಜೋರಾಗಿ ಅಳುತ್ತಿದೆ ಯಾಕೆಂದು ತಾಯಿಗೂ ಗೊತ್ತಾಗುತ್ತಿಲ್ಲ. ಎಷ್ಟೇ ಸುಮ್ಮನಾಗಿಸುವ ಪ್ರಯತ್ನ ಮಾಡಿದ್ರೂ ಮಗು ಸುಮ್ಮನಾಗುತ್ತಿಲ್ಲ, ಏನೋ ಹೊಟ್ಟೆನೋವು ಇರಬಹುದು ಎಂದ ಮಗುವನ್ನು ಎತ್ತಿಕೊಂಡಾಗ ತಾಯಿ ಶಾಕ್ ಆಗಿದ್ದಳು. ಮಗವಿನ ಕೆಳಗೆ ಇರುವೆ ಇತ್ತು. ಅದು ಮಗುವಿನ ಬೆನ್ನಿಗೆ ಕಚ್ಚುತ್ತಲೇ ಇತ್ತು!