ಸತ್ತಳೆಂದು ಭಾವಿಸಿ ದಹನ ಮಾಡಿದ್ದ ಕುಟುಂಬ, ಎರಡು ವರ್ಷಗಳ ಬಳಿಕ ಬಂದ ಆ ಒಂದು ಕರೆಯಿಂದ ಶಾಕ್, ಮಗಳು ಜೀವಂತ!

Published : Oct 28, 2026, 06:08 PM IST
missing Uttar Pradesh woman found alive

ಸಾರಾಂಶ

ಉತ್ತರಪ್ರದೇಶದ 30 ವರ್ಷದ ಪ್ರೀತಿ ಎಂಬ ಮಹಿಳೆ 2023ರಲ್ಲಿ ನಾಪತ್ತೆಯಾಗಿದ್ದಳು. ಆಕೆ ಸತ್ತಿದ್ದಾಳೆಂದು ಭಾವಿಸಿ ಕುಟುಂಬಸ್ಥರು ಶವವೊಂದರ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು. ಆದರೆ ಇದೀಗ ಆಕೆ ಗುಜರಾತ್‌ನ ಮಹಿಳಾ ರಕ್ಷಣಾ ಕೇಂದ್ರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ಕುಟುಂಬದಲ್ಲಿ ಅಚ್ಚರಿ ಮೂಡಿಸಿದೆ.

ಹೀಗೆ ಒಮ್ಮೆ ಯೋಚಿಸಿ ನೋಡಿ, ನಿಮ್ಮ ಮನೆಯ ಮಗಳು, ಮಗ ಅಥವಾ ಯಾರಾದರೂ ಪ್ರೀತಿ ಪಾತ್ರರು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ, ಎಷ್ಟೇ ಹುಡುಕಿದರೂ ಸಿಗುವುದಿಲ್ಲ. ಕೊನೆಗೆ ಒಂದು ದಿನ ಸಿಗುವ ಶವ ತಮ್ಮದೆ ಮಗಳದ್ದು ಎನಿಸಿ ದುಃಖದಿಂದ ಅಂತ್ಯಕ್ರಿಯೆ ನಡೆಸುವಾಗ ಮನಸಿಗೆ ಎಷ್ಟು ಆಘಾತವಾಗುತ್ತದೆ? ಆದರೆ ಹೀಗೆ ಮಗಳು ಜೀವಂತವಿಲ್ಲ, ಸತ್ತಳೆಂದು ದಹನ ಮಾಡಿದ ಮೇಲೂ ಜೀವಂತ ಕಣ್ಮುಂದೆ ಬಂದರೆ ಹೇಗಿದ್ದೀತು?! ಅಂತಹದ್ದೊಂದು ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ಮಗಳು ಸತ್ತಿದ್ದಾಳೆಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬ ನೋವಿನಿಂದ ದಿನ ಕಳೆಯುತ್ತಿತ್ತು. ಆದರೆ ಅದೇ ಕುಟುಂಬ ಇಂದು ಮತ್ತೆ ಅವಳ ಬರ್ತಡೇ ಆಚರಿಸುವಂತಾಗಿದೆ ವಿಧಿಯಾಟ ಹೇಗಿರುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಂತಿದೆ.

ಅಷ್ಟಕ್ಕೂ ಅಂದು ನಡೆದಿದ್ದೇನು? ಮಗಳು ನಾಪತ್ತೆಯಾಗಿದ್ದು ಹೇಗೆ?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ತೋರಿಸಿರುವಂತೆ ಪ್ರೀತಿ ಎಂಬ 30 ವರ್ಷದ ಮಹಿಳೆ 2023 ರಲ್ಲಿ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾಳೆ. ಎಲ್ಲಿಗೆ ಹೋದಳು, ಯಾಕೆ ಹೋದಳು, ಅಪಹರಿಸಿದರಾ? ದಾರಿ ತಪ್ಪಿದಳಾ? ತಾನೇ ಮನೆ ಬಿಟ್ಟು ಹೋದಳಾ..? ಊಹುಂ ಪ್ರೀತಿ ಹೇಗೆ ಕಾಣೆಯಾದಳು ಎಂಬ ಬಗ್ಗೆ ಕುಟುಂಬಕ್ಕೆ ತಿಳಿಯುವುದೇ ಇಲ್ಲ. ಆದರೆ ಮಗಳು ನಾಪತ್ತೆಯಾದಾಗ ಕುಟುಂಬಕ್ಕೆ ಆಘಾತವಾಗಿದೆ. ನಿರಂತರ ಹುಡುಕಾಟ ನಡೆಸಿದರೂ ಎಲ್ಲಿದ್ದಾಳೆ ಎಂಬ ಸಣ್ಣ ಸುಳಿವು ಸಿಗುವುದಿಲ್ಲ. ಕೊನೆಗೆ ಮೇ 13 ರಂದು ಪ್ರೀತಿ ಪತ್ತೆಯಾಗದಿದ್ದಾಗ ಕುಟುಂಬವು ಮೇ 16, 2023 ರಂದು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿತು. ನಂತರ ಈ ಬಗ್ಗೆ ಪೊಲೀಸರು ಕೂಡ ಹುಡುಕಾಟ ಶುರು ಮಾಡಿದ್ದರು. ಸೆಪ್ಟೆಂಬರ್ 30, 2026 ರಂದು ಗೋರಖ್‌ಪುರ ಪೊಲೀಸರು ಪೊದೆಗಳಲ್ಲಿ ಶವ ಪತ್ತೆ ಹಚ್ಚಿದರು. ಆ ಶವ ಪ್ರೀತಿಯದ್ದೇ ನಂಬಿದ ಕುಟುಂಬಸ್ಥರು ಆಕೆ ಸತ್ತಿದ್ದಾಳೆಂದು ಭಾವಿಸಿ ಆಕೆಯ 13 ನೇ ದಿನದ ಕಾರ್ಯ ಮಾಡಿ ಮುಗಿಸಿದರು.

ಒಂದು ದಿನ ಇದ್ದಕ್ಕಿದ್ದಂತೆ ಕಾಲ್ ಬಂತು..!

ಮಗಳ ಸತ್ತಳೆಂದುಕೊಂಡಿದ್ದ ಕುಟುಂಬಕ್ಕೆ ಅದೊಂದು ದಿನ ಕಾಲ್ ಬಂತು, ಫೋನ್ ರಿಸೀವ್ ಮಾಡಿದರೆ ಅತ್ತ ಗುಜರಾತಿನಿಂದ ಬಂದ ಫೋನ್ ಕಾಲ್ ಅದು. ನಿಮ್ಮ ಮಗಳು ನಮ್ಮೊಂದಿಗಿದ್ದು ಸುರಕ್ಷಿತವಾಗಿದ್ದಾಳೆ ಎಂದರು. ಈ ಮಾತು ಕೇಳಿ ಕುಟುಂಬಕ್ಕೆ ಶಾಕ್ ಆಗಿದ್ದು ನಿಜ. ಇದು ಕನಸೋ, ನಿಜವೋ ಎಂದು ನಂಬಲಾಗಲಿಲ್ಲ. ಏಕೆಂದರೆ ಮಗಳು ಸತ್ತಳೆಂದು ಭಾವಿಸಿ ಪತ್ತೆಯಾಗಿದ್ದ ಮೃತದೇಹ ಮಗಳದ್ದೇ ನಂಬಿ ದಹನ ಮಾಡಿದ್ದ ಕುಟುಂಬ. ಇದೀಗ ಮಗಳು ಬದುಕಿದ್ದಾಳೆಂದು, ಸುರಕ್ಷಿತಳಾಗಿದ್ದಾಳೆಂದು ಕುಟುಂಬಕ್ಕೆ ಫೋನ್ ಮಾಡಿ ತಿಳಿಸಿದಾಗ ಕುಟುಂಬಕ್ಕೆ ಮಾತೇ ಹೊರಡಲಿಲ್ಲ.

ನಾಪತ್ತೆಯಾಗಿದ್ದ ಮಗಳು ಗುಜರಾತ್‌ನ ವಡೋದರಾದಲ್ಲಿರುವ ಮಹಿಳಾ ರಕ್ಷಣಾ ಕೇಂದ್ರದಲ್ಲಿದ್ದಾರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಗುಜರಾತ್ ಪೊಲೀಸರು ಪ್ರೀತಿ ಪೋಷಕರ ಮಾಹಿತಿ ಸಂಗ್ರಹಿಸಿ ಕರೆ ಮಾಡಿ ತಿಳಿಸಿದ್ದರು. ಇದಲ್ಲದೆ, ಪ್ರೀತಿ ತಾಯಿ ಕಮಲಾ ದೇವಿ ಅವರು ತಮ್ಮ ಮಗಳೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡಲು ಪೊಲೀಸರು ವ್ಯವಸ್ಥೆ ಮಾಡಿದರು! ತಮ್ಮ ಮಗಳು ಜೀವಂತವಾಗಿರುವುದನ್ನು ನೋಡಿ ಕುಟುಂಬವು ಅದೆಷ್ಟು ಖುಷಿಪಟ್ಟಿತು ಎಂದರೆ ಮಾತೇ ಹೊರಡಲಿಲ್ಲ. ಒಂದು ಕಡೆ ದುಃಖ ಇನ್ನೊಂದು ಕಡೆ ಸಂತೋಷ. ಶೀಘ್ರದಲ್ಲೇ ಮನೆಗೆ ಮರಳಲಿದ್ದಾಳೆ ಮಗಳು ಪ್ರೀತಿ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟಿಜನ್ ಕೂಡ ತುಂಬಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, 'ಮಗಳ ಬದುಕಿದ್ದಾಳೆ ಎಂದಾಗ, ಆ ಕುಟುಂಬಕ್ಕೆ ಎಷ್ಟು ಸಂತೋಷವಾಗಿರಬೇಕು?' ಎಮದು ಬರೆದರೆ, ಮತ್ತೊಬ್ಬ 'ಕಾಣೆಯಾದ ನಂತರ ಆಕೆ ಗುಜರಾತ್ ತಲುಪಿದ್ದು ಹೇಗೆ?' ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.. ಇತರರು ಆಕೆ ಏಕೆ ನಾಪತ್ತೆಯಾದಳು, ಇದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

Barefoot Runner: ಸೀರೆಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಓಡಿದ್ದ ಕವಿತಾ ದೇವಿ 'ಹೋಮ್ ಗಾರ್ಡ್' ಕನಸು ನುಚ್ಚುನೂರು, ಏನಾಯ್ತು?
ಇಂಜೆಕ್ಷನ್ ಸೂಜಿ ನೋಡ್ತಿದ್ದಂತೆ ಓಟ ಕಿತ್ತ ಪಾರ್ಶ್ವವಾಯು ಭಿಕ್ಷುಕ! ಖದೀಮನ ನಾಟಕ ಬಯಲು ಮಾಡಿದ ಯುವಕನ ವಿಡಿಯೋ ವೈರಲ್