Viral Video: ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನದಲ್ಲಿ ಕಾಣಿಸಿಕೊಂಡ ಹಾವು! ಪ್ರಯಾಣಿಕರು ಶಾಕ್

Published : Jul 26, 2026, 12:02 PM IST
Snake on a Plane Video Goes Viral Raising Airline Safety Questions

ಸಾರಾಂಶ

ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನದೊಳಗೆ ಹಾವು ಕಾಣಿಸಿಕೊಂಡಿದೆ ಎನ್ನಲಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಮಾನಯಾನ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಆದರೆ, ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಬಸ್‌ನಲ್ಲಿ ಹಾವು ಕಾಣಿಸಿಕೊಂಡರೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನ ಇಳಿಸಿ ಹಾವು ಓಡಿಸಬಹುದು. ಆದರೆ ಎತ್ತರದ ಆಕಾಶದಲ್ಲಿ ವಿಮಾನ ಹಾರುತ್ತಿದ್ದಾಗಲೇ ವಿಮಾನದೊಳಗೆ ಹಾವು ಕಾಣಿಸಿಕೊಂಡರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬೇಡ? ಅಂಥದೊಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆ ಯಾವಾಗ, ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ, ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಹಾವೊಂದು ವಿಮಾನದೊಳಗೆ ಓಡಾಡುತ್ತಿರುವುದು, ಪ್ರಯಾಣಿಕರು ಗಾಬರಿಯಿಂದ ನೋಡುತ್ತಿರುವುದು ವಿಡಿಯೋದಲ್ಲಿ ಸರೆಯಾಗಿದೆ.

ಈ ವಿಡಿಯೋ ವೈರಲ್ ಆಗಿದ್ರೂ, ಈ ಘಟನೆ ಯಾವಾಗ, ಎಲ್ಲಿ ನಡೀತು ಅನ್ನೋದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅಷ್ಟಕ್ಕೂ, ಈ ಹಾವು ವಿಮಾನದೊಳಗೆ ಹೇಗೆ ಬಂತು ಅನ್ನೋದು ಕೂಡ ನಿಗೂಢವಾಗಿದೆ.

ಪ್ರಯಾಣಿಕರು ಶಾಕ್, ವಿಮಾನದೊಳಗೆ ಹಾವು ಹೇಗೆ ಬಂತು?

ಈ ವೈರಲ್ ವಿಡಿಯೋ ವಿಮಾನಯಾನ ಸಂಸ್ಥೆಗಳ ಸುರಕ್ಷತೆ ಮತ್ತು ಭದ್ರತಾ ನಿಯಮಗಳ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ವಿಮಾನದೊಳಗೆ ಹಾವು ಹೇಗೆ ಬರಲು ಸಾಧ್ಯ ಎಂದು ಹಲವು ಸೋಷಿಯಲ್ ಮೀಡಿಯಾ ಬಳಕೆದಾರರು ಪ್ರಶ್ನಿಸಿದ್ದಾರೆ. ಟೇಕ್-ಆಫ್‌ಗೂ ಮುನ್ನ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು, ಸತ್ಯಾಸತ್ಯತೆ ತಿಳಿಯುವವರೆಗೂ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಹೇಳಿದ್ದಾರೆ.

 

ಸದ್ಯ ಇದಕ್ಕೆ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ವಿಡಿಯೋ ನಿಜವೇ ಅಥವಾ ಸುಳ್ಳೇ ಮತ್ತು ಇದರ ಹಿಂದಿನ ಸತ್ಯಾಂಶ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಹೆಚ್ಚಿನ ಮಾಹಿತಿ ಸಿಗುವವರೆಗೂ ಈ ವಿಡಿಯೋವನ್ನು ಎಚ್ಚರಿಕೆಯಿಂದ ನೋಡಬೇಕಿದೆ. ಆದರೂ ಈ ಘಟನೆ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವೈರಲ್ ವಿಡಿಯೋ ಬಗ್ಗೆ ವಿಮಾನಯಾನ ಸಂಸ್ಥೆ ಅಥವಾ ಅಧಿಕಾರಿಗಳಿಂದ ಸ್ಪಷ್ಟನೆಗಾಗಿ ಹಲವರು ಕಾಯುತ್ತಿದ್ದಾರೆ.

PREV
Read more Articles on
click me!

Recommended Stories

ಅಪ್ಪ-ಅಮ್ಮನೇ ಹಿಂಗಾದ್ರೆ ವಿದೇಶದಲ್ಲಿರೋ ಮಕ್ಕಳ ಪಾಡೇನು? ತಿಂಗಳಿಗೆ 70 ಸಾವಿರ ಕಳಿಸಿದ್ರೂ ಸಾಲುತ್ತಿಲ್ಲ! 25 ಲಕ್ಷ ಕೇಳಿದ ಪೋಷಕರು
ದಳಪತಿ ವಿಜಯ್‌ ಪತ್ನಿ ಸಂಗೀತಾ ಥಿಯೇಟರ್‌ಗೆ ಹೋಗಿ ʻಜನನಾಯಗನ್‌ʼ ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ್ರಾ?