ಪ್ರೀ ವೆಡ್ಡಿಂಗ್​ ಶೂಟ್​ನಲ್ಲಿ ಭಾವಿ ಪತ್ನಿಯ ಎತ್ತಿದ್ದೇ, ಆಗಬಾರದ್ದು ಆಗೋಯ್ತು- ವಿಡಿಯೋನೂ ವೈರಲ್ ​ಆಯ್ತು

Published : Mar 22, 2026, 05:55 PM IST
Pre Wedding Shoot

ಸಾರಾಂಶ

ಪ್ರೀ ವೆಡ್ಡಿಂಗ್ ಶೂಟ್​ ವೇಳೆ ವರನು ವಧುವನ್ನು ನೀರಿನಲ್ಲಿ ಎತ್ತಲು ಹೋಗಿ ಅವಘಡ ಸಂಭವಿಸಿದೆ. ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದು, ಮೇಲೆ ಬರಲು ಒದ್ದಾಡಿದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಾವಿ ದಂಪತಿಗೆ ಮರೆಯಲಾಗದ ನೆನಪಾಗಿ ಉಳಿಯಲಿದೆ.

ಈಗಂತೂ ಮದುವೆ ಎನ್ನುವುದು ಆರಂಭವಾಗುವುದೇ ಪ್ರೀ ವೆಡ್ಡಿಂಗ್ ಶೂಟ್​ನಿಂದ. ಈಗ ಎಲ್ಲರಿಗೂ ಮದುವೆಯ ಮೊದಲು ವಿಡಿಯೋ ಮಾಡಿಸುವ ಹುಚ್ಚು. ಇದೊಂದು ಟ್ರೆಂಡ್​ ಆಗಿಬಿಟ್ಟಿದೆ. ಮದುವೆಯ ದಿನ ದೊಡ್ಡ ಪರದೆಯ ಮೇಲೆ ಈ ವಿಡಿಯೋ ಹಾಕಿ ಖುಷಿಪಡುತ್ತಾರೆ. ಪ್ರೀ ವೆಡ್ಡಿಂಗ್​ ಶೂಟ್​ (Pre- Wedding Shoot) ಮಾಡಿಸಿಕೊಳ್ಳುವವರ ಸಂಖ್ಯ ಹೆಚ್ಚಾಗಿರೋ ಕಾರಣ, ವಿಭಿನ್ನ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳಲು ಹಲವರು ಮುಂದಾಗುತ್ತಾರೆ. ಇದರಿಂದ ಇದಾಗಲೇ ಚಿತ್ರ-ವಿಚಿತ್ರ ಎನ್ನಿಸುವಂಥ ಫೋಟೋ, ವಿಡಿಯೋಶೂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದರೆ, ಕೆಲವೊಂದು ಸಮಯದಲ್ಲಿ ಈ ವಿಡಿಯೋ ಸಮಯದಲ್ಲಿಯೇ ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ.

ಪ್ರೀ ವೆಡ್ಡಿಂಗ್ ಶೂಟ್​ನಲ್ಲಿ ಅವಘಡ

ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಇದು ಸೀರಿಯಲ್​ , ಸಿನಿಮಾ ಪ್ರಭಾವವೋ ಗೊತ್ತಿಲ್ಲ. ಅಲ್ಲಿ ನಟಿಯರನ್ನು ನಾಯಕರು ಅತ್ಯಂತ ಸುಲಭವಾಗಿ ಎತ್ತಿ ಬಿಡುತ್ತಾರಲ್ಲ. ಆದರೆ ಶೂಟಿಂಗ್​ ಸಂದರ್ಭದಲ್ಲಿ ಅಲ್ಲಿ ನಡೆಯುವುದೇ ಬೇರೆ. ನಿಜವಾಗಿಯೂ ನಾಯಕರು ನಾಯಕಿಯನ್ನು ಎತ್ತಿಯೇ ಇರುವುದಿಲ್ಲ. ಕೊನೆಗೆ ಎಡಿಟಿಂಗ್​ನಲ್ಲಿ ಅವೆಲ್ಲಾ ಮಾಡಲಾಗುತ್ತದೆ. ಆದರೂ ಪುರುಷರಿಗೆ ತನ್ನ ಭಾವಿ ಪತ್ನಿಯ ಎದುರು ಪೌರುಷ ತೋರಿಸಬೇಕು, ಆಕೆಯನ್ನು ಮೆಚ್ಚಿಸಬೇಕು ಎನ್ನುವ ಹುಮ್ಮಸ್ಸು ಇರುತ್ತದಲ್ಲ, ಅದೇ ರೀತಿ ಇಲ್ಲಿಯೂ ಆಗಿದೆ.

ನೀರಿನಲ್ಲಿ ಶೂಟಿಂಗ್​

ನೀರಿನಲ್ಲಿ ಈ ಶೂಟಿಂಗ್​ ಮಾಡಲಾಗಿದೆ. ಇದರಲ್ಲಿ ವರ ಹುಡುಗಿಯನ್ನು ನೀರಿನಲ್ಲಿ ಎತ್ತಿ ಪೋಸ್​ ಕೊಡಲು ಹೋಗಿದ್ದಾನೆ. ಅವಳನ್ನು ಸುಲಭವಾಗಿ ಎತ್ತಿದ ಕೂಡ. ಆದರೆ ಆಕೆಯ ಭಾರವನ್ನು ತಡೆದುಕೊಳ್ಳಲಾಗಿಲ್ಲನೋ ಅಥವಾ ನೀರಿನಲ್ಲಿ ಆಯ ತಪ್ಪಿದನೋ ಗೊತ್ತಿಲ್ಲ. ಹುಡುಗಿ ಸಹಿತವಾಗಿ ಇಬ್ಬರೂ ನೀರಿನಲ್ಲಿ ಮುಳುಗಿ ಹೋದರು. ಹುಡುಗಿ ಆತನ ಮೈಮೇಲೆಯೇ ಬಿದ್ದುಬಿಟ್ಟಳು.

ಒದ್ದಾಡಿದ ಭಾವಿ ದಂಪತಿ!

ಆ ಪರಿಸ್ಥಿತಿಯಲ್ಲಿ ಇಬ್ಬರೂ ಮೇಲೆ ಬರಲು ಒದ್ದಾಡಿ ಹೋದರು. ಇನ್ನು ಪ್ರೀ ವೆಡ್ಡಿಂಗ್​ ಶೂಟ್​ ಕನಸಿನಲ್ಲಿಯೂ ಮಾಡಿಸಿಕೊಳ್ಳಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಪಾಪ ಭಾವಿ ಪತ್ನಿಯ ಎದುರು ಹೀರೋ ಆಗಲು ಹೋಗಿ ಹೀಗೆಲ್ಲಾ ಆಗಬಾರದಿತ್ತು ಎಂದು ಕೆಲವರು ಹೇಳಿದ್ರೆ, ಅವರ ವಿಡಿಯೋ ವೈರಲ್​ ಮಾಡಬಾರದಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್​ ಮಾತ್ರ ಇವರಿಗೆ ಕೊನೆಯವರೆಗೂ ನೆನಪಿರುತ್ತೆ ಬಿಡಿ.

 

 

PREV
Read more Articles on
click me!

Recommended Stories

ತಂತಾನೇ ಚಲಿಸುವ ಪಾರ್ಕ್​ನ ಉಪಕರಣ: ತನಿಖೆಗೆ ಬಂದ ಪೊಲೀಸರೇ ಬೆಚ್ಚಿಬಿದ್ದರು! ಏನಿದು ನಿಗೂಢ
ಕಿಕ್ ಶುರು.. 3ನೇ ದಿನ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ 3’ ಮ್ಯಾಜಿಕ್: ವೀಕೆಂಡ್‌ನಲ್ಲಿ ಬಂತು ಕೋಟಿ ಕೋಟಿ ಹಣ!