ಭಾರಿ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋದ 900ಕ್ಕೂ ಹೆಚ್ಚು ಹಾವು, ಸ್ನೇಕ್ ಸವಾರಿ ದೃಶ್ಯ ಸೆರೆ

Published : Jul 11, 2026, 01:01 PM IST
Floods Wash Away Over 900 Snakes in China

ಸಾರಾಂಶ

ಭಾರಿ ಮಳೆಯಿಂದ ಸೃಷ್ಟಿಯಾದ ಪ್ರವಾಹದಲ್ಲಿ ಒಂದೇ ಬಾರಿ 900ಕ್ಕೂ ಹೆಚ್ಚು ಹಾವು ಕೊಚ್ಚಿ ಹೋದ ಘಟನೆ ಸೆರೆಯಾಗಿದೆ. ಗ್ರಾಮದಲ್ಲಿ ಎಲ್ಲೆಡೆ ಹಾವುಗಳೇ ಕಾಣಿಸಿಕೊಳ್ಳುತ್ತಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಗೌಂಗ್ಸಿ (ಜು.11) ಹವಾಮಾನ ವೈಪರಿತ್ಯ, ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪರಿಣಾಮ ನೀರಿನಲ್ಲಿ 900ಕ್ಕೂ ಹೆಚ್ಚು ಹಾವುಗಳು ಕೊಚ್ಚಿ ಹೋಗಿದೆ. ಈ ಹಾವುಗಳು ಗ್ರಾಮಗಳಲ್ಲಿ ಸೇರಿಕೊಂಡಿದೆ. ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಹೆಬ್ಬಾವು ಸೇರಿದಂತೆ ಅತ್ಯಂತ ವಿಷಕಾರಿ ಹಾವುಗಳು ಹಲವು ಮನೆ ಸೇರಿಕೊಂಡಿದೆ. ಪರಿಣಾಮ ಮಹಿಳೆಯೊಬ್ಬರು ಹಾವು ಕಡಿದು ಮೃತಪಟ್ಟ ಘಟನೆ ನಡೆದಿದೆ, ಹಲವರು ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ಚೀನಾದ ಗಾಂಗ್ಸಿ ಪ್ರಾಂತ್ಯದಲ್ಲಿ ನಡೆದಿದೆ.

ಫಾರ್ಮ್‌ನಲ್ಲಿದ್ದ ಎಲ್ಲಾ ಹಾವುಗಳು ಪ್ರವಾದಲ್ಲಿ ಎಸ್ಕೇಪ್

ಗಾಂಗ್ಸಿ ಪ್ರಾಂತ್ಯದಲ್ಲಿ ಅತೀ ದೊಡ್ಡ ಹಾವು ಸಾಕಾಣಿಕೆ ಹಾಗೂ ಅಭಿವೃದ್ಧಿ ಕೇಂದ್ರಕ್ಕೂ ಪ್ರವಾಹದ ಬಿಸಿ ತಟ್ಟಿದೆ. ಗೌಂಗ್ಸಿ ಪ್ರಾಂತ್ಯದಲ್ಲಿ ಜನಪ್ರಿಯ ಹಾವು ಸಾಕಾಣಿಕೆ ಕೇಂದ್ರದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹಾವುಗಳಿತ್ತು. ಹಾವುಗಳ ಮೊಟ್ಟೆಗಳು ಸೇರಿದಂತೆ ಔಷಧಿಗಳು ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರವಾಹದ ನೀರು ಹಾವಿನ ಫಾರ್ಮ್‌ಗೆ ನುಗ್ಗಿದೆ. ಹೀಗಾಗಿ ಫಾರ್ಮ್‌ನಲ್ಲಿದ್ದ ಹಾವುಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿದೆ.ಈ ವಿಡಿಯೋ ಸೆರೆಯಾಗಿದೆ.

ಒಟ್ಟಿಗೆ 900 ಹಾವುಗಳು ಎಸ್ಕೇಪ್

ಒಟ್ಟಿಗೆ 900ಕ್ಕೂ ಹೆಚ್ಚು ಹಾವುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ದೂರದಿಂದ ನೋಡಿದಾಗ ಬಾತುಕೋಳಿಗಳು ಸಾಗುತ್ತಿರುವಂತೆ ಕಂಡರು ಇದು ಅತ್ಯಂತ ವಿಷಕಾರಿ ಹಾವಾಗಿದೆ. ಪ್ರವಾಹ ನೀರಿನಿಂದ ಫಾರ್ಮ್‌ನಲ್ಲಿ ಬಂಧಿಯಾಗಿದ್ದ ಹಾವುಗಳು ಎಸ್ಕೇಪ್ ಆಗಿದೆ. ಇನ್ನು ಹಲವು ಗ್ರಾಮಸ್ಥರು ಹಾವು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಪತ್ತೆಯಾಗಿದೆ. ಗೌಂಗ್ಸಿ ಪ್ರಾಂತ್ಯದ ಹಲವು ಗ್ರಾಮಗಳಿಗೆ ಹಾವುಗಳು ನುಗ್ಗಿದೆ. ಎಲ್ಲೆಡೆ ಹಾವುಗಳೇ ಕಾಣಿಸಿಕೊಳ್ಳುತ್ತಿದೆ.

ಹಾವು ಕಡಿದು ಮಹಿಳೆ ಸಾವು

ಹೀಗೆ ಫಾರ್ಮ್‌ನಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಹಾವು ಗ್ರಾಮಸ್ಥರ ಆತಂಕ ಹೆಚ್ಚಿದೆ. ಮನೆಯೊಳಕ್ಕೆ ನೀರು ಸೇರಿಕೊಂಡ ಕಾರಣ ಹೊರಹಾಕುತ್ತಿದ್ದ ಮಹಿಳೆಗೆ ಹಾವು ಕಡಿದು ಮೃತಪಟ್ಟ ಘಟನೆ ನಡೆದಿದೆ. ಹಲವರಿಗೆ ಹಾವು ಕಡಿದಿದೆ. ಪರಿಣಾಮ ಹಲವರು ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದು, ಗ್ರಾಮ ತೊರೆಯುಲು ಸೂಚಿಸಿದ್ದಾರೆ. ಪ್ರವಾಹ ಪರಿಸ್ಥಿತಿ ಹೆಚ್ಚಾಗುತ್ತಿರುವ ಕಾರಣ ಹಾಗೂ ಹಾವುಗಳು ಮನೆಯೊಳಗೆ ಸೇರಿಕೊಳ್ಳುತ್ತಿರುವುದರಿಂದ ಅಪಾಯ ಹೆಚ್ಚಿದೆ. ಹೀಗಾಗಿ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದ್ದಾರೆ.

 

 

 

PREV
Read more Articles on
click me!

Recommended Stories

ಎಲ್ಲರಿಂದಲೂ ತಿನ್ನೋಕೆ ಆಗಲ್ಲ, ಈ ಮೊಟ್ಟೆ ತಿಂದ್ರೆ 7 ವರ್ಷ ಆಯಸ್ಸು ಹೆಚ್ಚಾಗುತ್ತೆ!
ಕಾರ್ಪೋರೇಟ್​ ಕೆಲಸ ಬಿಟ್ಟರೂ ಐಷಾರಾಮಿ ಜೀವನ: ಅನುಭವ ತಿಳಿಸಿದ ಯುವತಿಯ ವಿಡಿಯೋಗೆ ಲಕ್ಷಗಟ್ಟಲೆ ಪ್ರತಿಕ್ರಿಯೆ