ತಾಳಿ ಕಟ್ಟಲು ಬರದೇ ವರನ ಪರದಾಟ: Viral Video ನೋಡಿ 'ಫಸ್ಟ್​ ರ್‍ಯಾಂಕ್‌ ರಾಜು' ಎಂದ ನೆಟ್ಟಿಗರು

Published : May 29, 2026, 06:04 PM IST
Viral Marriage

ಸಾರಾಂಶ

ವೈರಲ್ ಆದ ಮದುವೆಯ ವಿಡಿಯೋವೊಂದರಲ್ಲಿ, ವರನೊಬ್ಬ ವಧುವಿಗೆ ಮಂಗಳಸೂತ್ರ ಕಟ್ಟಲು ಪರದಾಡಿದ್ದಾನೆ. ಈ ಫನ್ನಿ ವಿಡಿಯೋ ನೋಡಿದ ನೆಟ್ಟಿಗರು, ಈತ 'ಫಸ್ಟ್ ರ್‍ಯಾಂಕ್ ರಾಜು' ಸಿನಿಮಾದ ನಾಯಕನಂತಿದ್ದಾನೆ ಎಂದು ತಮಾಷೆ ಮಾಡುತ್ತಿದ್ದಾರೆ.

ಮಕ್ಕಳನ್ನು ಓದು ಓದು ಎಂದು ಅಪ್ಪ-ಅಮ್ಮ ಓದಿಗಷ್ಟೇ ಸೀಮಿತವಾಗಿ, ಮಕ್ಕಳನ್ನು ಬೇರೆ ಯಾವುದೇ ಯೋಚನೆ ಕಡೆ ತಿರುಗದಂತೆ ಮಾಡಿ, ಅವರು ಹೇಳಿದ್ದನ್ನೆಲ್ಲಾ ಕೊಡಿಸುತ್ತಾ, ನಿನ್ನ ಧ್ಯೇಯ ಮೊದಲ ರ್‍ಯಾಂಕ್‌ ಬರುವುದು ಅಷ್ಟೇ ಎಂದು ಹೇಳಿದರೆ, ಅಂಥ ಮಕ್ಕಳ ಭವಿಷ್ಯ ಏನಾಗುತ್ತದೆ ಎನ್ನುವುದನ್ನು ಅತ್ಯಂತ ಸುಂದರವಾಗಿ ಹಾಸ್ಯದ ರೂಪದಲ್ಲಿ ತೋರಿಸಿರುವ ಹಿಂದಿ ಚಿತ್ರ 'ಫಸ್ಟ್​ ರ್‍ಯಾಂಕ್‌ ರಾಜು' . ಒಂದನೇ ಕ್ಲಾಸ್​ನಿಂದ ಡಾಕ್ಟರ್​ ಆಗುವವರೆಗೂ ಫಸ್ಟ್​ ರ್‍ಯಾಂಕ್‌ ಗಳಿಸಿದ ರಾಜುಗೆ ಬೇರೆ ಯಾವ ವಿಷಯವೂ ಗೊತ್ತೇ ಇರುವುದಿಲ್ಲ. ಎಲ್ಲದ್ದಕ್ಕೂ ಅಪ್ಪ-ಅಮ್ಮನ ಮೇಲೆ ಡಿಪೆಂಡ್​, ಓದುವುದು ಬಿಟ್ಟು ಹೇಗೆ ಬದುಕಬೇಕು ಎನ್ನುವುದೂ ಅವನಿಗೆ ತಿಳಿಯುವುದಿಲ್ಲ. ಕೊನೆಗೆ ಅಪ್ಪ-ಅಮ್ಮಂದಿರಿಗೆ ತಮ್ಮ ತಪ್ಪಿನ ಅರಿವಾಗಿ ಹುಡುಗಿಯನ್ನು ಹೇಗೆ ಲವ್​ ಮಾಡಬೇಕು ಎನ್ನುವುದನ್ನೂ ಅವರೇ ಕಲಿಸುವಂತಾಗುತ್ತದೆ.

ಮದುವೆಯ ಫನ್ನಿ ವಿಡಿಯೋ

ಈ ಸಿನಿಮಾದ ವಿಷಯ ಇಲ್ಯಾಕೆ ಪ್ರಸ್ತಾಪ ಆಯ್ತು ಎಂದರೆ, ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಮದುವೆಯ ಹಲವಾರು ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲಿ ಒಂದು ವಿಡಿಯೋ ಇದಾಗಿದೆ. ಇದರಲ್ಲಿ ಮದುಮಗನಿಗೆ ಏನು ಮಾಡಿದ್ರೂ ಮಂಗಳಸೂತ್ರವನ್ನು ವಧುವಿನ ಕೊರಳಿಗೆ ಕಟ್ಟಲು ಬರುವುದೇ ಇಲ್ಲ. ಯಾವ ಕೈ ಅತ್ತ ಹಿಡಿಯಬೇಕು, ಯಾವ ಕೈ ಇತ್ತ ಹಿಡಿಯಬೇಕು ತಿಳಿಯದೇ ಪರದಾಡಿದ್ದಾನೆ.

ಪುರೋಹಿತರು ಕಟ್ಟೋದೊಂದೇ ಬಾಕಿ

ಅಲ್ಲಿಯ ಪುರೋಹಿತರು ಎಷ್ಟು ಸಲ ಹೇಳಿದ್ರೂ, ಮಾಂಗಲ್ಯವನ್ನು ಉಲ್ಟಾ ಪಲ್ಟಾ ಮಾಡಿ ಹಿಡಿದ್ರೂ ಕೊನೆಗೂ ವರನಿಗೆ ಸರಿಯಾಗಿ ವಧುವಿನ ಕೊರಳಿಗೆ ಕಟ್ಟುವಂತೆ ಹಿಡಿದುಕೊಳ್ಳಲು ಬರುವುದೇ ಇಲ್ಲ. ಇನ್ನೇನು ಪುರೋಹಿತರೇ ಮಾಂಗಲ್ಯ ಕಟ್ಟುವುದೊಂದು ಬಾಕಿ, ಅಂಥ ಸನ್ನಿವೇಶ ಸೃಷ್ಟಿಯಾಗಿತ್ತು.

ಈ ಫನ್ನಿ ವಿಡಿಯೋ ನೋಡಿದ ಹಲವರು 'ಫಸ್ಟ್​ ರ್‍ಯಾಂಕ್‌ ರಾಜು' ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಬಹುಶಃ ಈ ವರ ಕೂಡ 'ಫಸ್ಟ್​ ರ್‍ಯಾಂಕ್‌ ರಾಜು' ಇರಬೇಕು. ಅದಕ್ಕಾಗಿ ಏನೂ ಬರುತ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ.

 

 

PREV
Read more Articles on
click me!

Recommended Stories

SS Rajamouli: 'ನನಗೆ ಆ ನಾಯಕಿ ತುಂಬಾ ಇಷ್ಟ' ಎಂದ ರಾಜಮೌಳಿ, 'ನಿಮ್ಮಷ್ಟದ ನಾಯಕ ಯಾರು' ಎಂದು ಕೇಳಿದಾಗ ಹೇಳಿದ್ದೇನು?
ರೈಲಿನಲ್ಲಿ ಮಾರುವ ರುಚಿ ರುಚಿ ಸಮೋಸಾ ತಿಂದೋರಿಗೆ ವಾಂತಿ ಬರಿಸೋ ವಿಡಿಯೋ ವೈರಲ್