ಗಿಫ್ಟ್ ಬಾಕ್ಸ್ ತೆರೆದಾಗ ಸಿಕ್ಕಿದ್ದು ಬರಿ ಚಾಕೊಲೇಟ್! ಬೇಸರದಲ್ಲಿದ್ದ ಉದ್ಯೋಗಿಗಳಿಗೆ ಬಾಸ್ ಕೊಟ್ಟ ಬಿಗ್ ಟ್ವಿಸ್ಟ್..

Published : Sep 25, 2026, 12:50 PM IST
Some Got Chocolates, Others Got iPhones; Boss’s Final Surprise Wins the Internet

ಸಾರಾಂಶ

ಉದ್ಯೋಗಿಗಳಿಗೆ ಗಿಫ್ಟ್ ಬಾಕ್ಸ್ ಆಯ್ಕೆ ಮಾಡುವ ಅವಕಾಶ ನೀಡಿದ UAE ಕಂಪನಿಯೊಂದರ ವಿಡಿಯೋ ವೈರಲ್ ಆಗಿದೆ. ಕೆಲವರ ಬಾಕ್ಸ್‌ನಲ್ಲಿ ಐಫೋನ್ ಸಿಕ್ಕರೆ, ಇನ್ನು ಕೆಲವರಿಗೆ ಚಾಕೊಲೇಟ್ ಸಿಕ್ಕಿತ್ತು. ಆದರೆ ಕೊನೆಯಲ್ಲಿ ಚಾಕೊಲೇಟ್ ಪಡೆದವರಿಗೂ ಹೊಸ ಐಫೋನ್ ನೀಡಿ ಬಾಸ್ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.

ಚಾಕೊಲೇಟ್‌ನಿಂದ ಐಫೋನ್‌ವರೆಗೆ: ಬಾಸ್ ಕೊಟ್ಟ ಸರ್ಪ್ರೈಸ್ ಗಿಫ್ಟ್!

ಉದ್ಯೋಗಿಗಳಿಗೆ ಗಿಫ್ಟ್ ನೀಡುವಾಗ ಎಲ್ಲರಿಗೂ ಒಂದೇ ರೀತಿಯ ಉಡುಗೊರೆ ಸಿಗಬೇಕು ಎಂಬ ನಿಯಮವೇನಿಲ್ಲ. ಆದರೆ ಉಡುಗೊರೆಯ ಹಿಂದೆ ಇರುವ ಉದ್ದೇಶ ಮತ್ತು ಕೊನೆಯ ಕ್ಷಣದ ಸರ್ಪ್ರೈಸ್‌ವೇ ಇಡೀ ಕ್ಷಣವನ್ನು ವಿಶೇಷವಾಗಿಸುತ್ತದೆ. UAE ಮೂಲದ ಕಂಪನಿಯೊಂದರಲ್ಲಿ ನಡೆದ ಇಂತಹ ಗಿಫ್ಟ್ ಗೇಮ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಗಿಫ್ಟ್ ಬಾಕ್ಸ್ ತೆರೆದಾಗ ಶುರುವಾಯ್ತು ಕುತೂಹಲ

ವೈರಲ್ ವಿಡಿಯೋದಲ್ಲಿ ಉದ್ಯೋಗಿಗಳು ಮೇಜಿನ ಮೇಲಿದ್ದ ಪ್ಯಾಕ್ ಮಾಡಿದ ಗಿಫ್ಟ್ ಬಾಕ್ಸ್‌ಗಳನ್ನು ಒಂದೊಂದಾಗಿ ಆಯ್ಕೆ ಮಾಡುತ್ತಾರೆ. ಬಾಕ್ಸ್ ತೆರೆದಾಗ ಕೆಲವರಿಗೆ ಹೊಸ ಐಫೋನ್ ಸಿಕ್ಕರೆ, ಇನ್ನು ಕೆಲವರ ಪಾಲಿಗೆ ಚಾಕೊಲೇಟ್ ಬಂದಿದೆ.

ಐಫೋನ್ ಸಿಕ್ಕ ಉದ್ಯೋಗಿಗಳ ಮುಖದಲ್ಲಿ ಸಂತಸ ಕಂಡುಬಂದರೆ, ಚಾಕೊಲೇಟ್ ಪಡೆದವರು ಸಹ ಅದನ್ನು ನಗುತ್ತಲೇ ಸ್ವೀಕರಿಸುತ್ತಾರೆ. ಆದರೆ ಈ ಆಟದ ನಿಜವಾದ ಟ್ವಿಸ್ಟ್ ಇನ್ನೂ ಬಾಕಿಯೇ ಇತ್ತು.

ಚಾಕೊಲೇಟ್ ಪಡೆದವರಿಗೂ ಸಿಕ್ತು ಐಫೋನ್!

ಗಿಫ್ಟ್ ಬಾಕ್ಸ್‌ನಲ್ಲಿ ಚಾಕೊಲೇಟ್ ಸಿಕ್ಕ ಉದ್ಯೋಗಿಗಳಿಗೆ ಕೊನೆಯಲ್ಲಿ ಮತ್ತೊಂದು ಸರ್ಪ್ರೈಸ್ ಕಾದಿತ್ತು. ಆರಂಭದಲ್ಲಿ ಐಫೋನ್ ಸಿಗದ ಉದ್ಯೋಗಿಗಳಿಗೂ ಹೊಸ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಹೀಗಾಗಿ ಮೊದಲಿಗೆ ‘ಲಕ್ಕಿ’ ಎನಿಸಿದ್ದವರಿಗೆ ಮಾತ್ರವಲ್ಲ, ಚಾಕೊಲೇಟ್ ಪಡೆದವರಿಗೂ ಐಫೋನ್ ಸಿಕ್ಕಂತಾಯಿತು.

ಉದ್ಯೋಗಿಗಳೇ ನಮ್ಮ ಶಕ್ತಿ ಎಂದ ಮ್ಯಾನೇಜಿಂಗ್ ಡೈರೆಕ್ಟರ್

ಈ ವಿಡಿಯೋವನ್ನು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಸೀನಾ ನಿಶಾದ್ ಹಂಚಿಕೊಂಡಿದ್ದಾರೆ. ಉದ್ಯೋಗಿಗಳ ಪರಿಶ್ರಮ, ಸಕಾರಾತ್ಮಕ ಮನೋಭಾವ ಮತ್ತು ಒಗ್ಗಟ್ಟೇ ಸಂಸ್ಥೆಯ ಶಕ್ತಿ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬರ ಪ್ರಯತ್ನವೂ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ಬಾಕ್ಸ್‌ಗಿಂತ ದೊಡ್ಡದಾಗಿತ್ತು ಬಾಸ್‌ ಸರ್ಪ್ರೈಸ್

ಮೊದಲಿಗೆ ಚಾಕೊಲೇಟ್ ಸಿಕ್ಕಾಗ ಕೆಲ ಉದ್ಯೋಗಿಗಳಿಗೆ ನಿರಾಸೆಯಾಗಿರಬಹುದು. ಆದರೆ ಕೊನೆಯಲ್ಲಿ ಎಲ್ಲರಿಗೂ ಐಫೋನ್ ಸಿಗುವಂತೆ ಮಾಡಿದ ಬಾಸ್‌ರ ನಿರ್ಧಾರ ಇಡೀ ಆಟವನ್ನೇ ಮತ್ತಷ್ಟು ವಿಶೇಷವಾಗಿಸಿದೆ. ಗಿಫ್ಟ್‌ನ ಬೆಲೆಗಿಂತ ಉದ್ಯೋಗಿಗಳ ಮುಖದಲ್ಲಿ ಸಂತಸ ಮೂಡಿಸುವ ಉದ್ದೇಶವೇ ಈ ಸರ್ಪ್ರೈಸ್‌ನ ಪ್ರಮುಖ ಆಕರ್ಷಣೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಉದ್ಯೋಗಿಗಳಿಗೆ ನೀಡಿದ ಈ ಸರ್ಪ್ರೈಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಬಾಸ್ ಕೂಡ ಹೀಗೆ ಗಿಫ್ಟ್ ನೀಡಲಿ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ವಿಶೇಷವಾಗಿ ಚಾಕೊಲೇಟ್ ಪಡೆದವರನ್ನೂ ಕೊನೆಯಲ್ಲಿ ಖುಷಿಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ.

PREV
Read more Articles on
click me!

Recommended Stories

ಕೋಟೆಹುಂಡಿ ಸರ್ಕಾರಿ ಶಾಲೆಗೆ ₹32 ಲಕ್ಷ ಖರ್ಚು; ಅಭಿವೃದ್ಧಿ ಮಾಡಿದ ಮಹಿಳೆಗೆ 'ನೀವ್ಯಾರು' ಎಂದು ಕೇಳಿದ್ಯಾರು?
Toshisuke Kanazawa: ಮಾಂಸ ಇಲ್ಲ, ಮೀನು ಇಲ್ಲ; 90ರಲ್ಲೂ ಬಾಡಿಬಿಲ್ಡಿಂಗ್! ಜಪಾನ್‌ನ ಈ ವ್ಯಕ್ತಿ ಆರೋಗ್ಯದ ಗುಟ್ಟು ಬಯಲು!