
ಚೀನಾದ ಒಬ್ಬ ಮಹಿಳೆ. ಹೆಸರು ಹುಬೈ ಜಿಂಗ್ಶಿ. ಪತಿ ವಾಂಗ್ ಜೊತೆ ವಾಸವಿದ್ದಾಳೆ. ಹೀಗೆ ಒಂದು ದಿನ ಆಕೆಗೆ ತುಂಬಾ ಚಳಿ ಆಗುತ್ತಿತ್ತು. ಅದಕ್ಕಾಗಿ ಆಕೆ ಪತಿ ಬಳಿಯಿಂದ ಪ್ರೀತಿಯ ಅಪ್ಪುಗೆ ಬಯಸಿದ್ದಳು. ನನಗೆ ವಿಪರಿತ ಚಳಿ ಆಗುತ್ತಿದೆ. ಬನ್ನಿ ಅಪ್ಪಿಕೊಳ್ಳಿ ಎಂದು ಕರೆದಿದ್ದಾಳೆ. ಪತ್ನಿಯ ಕರೆಗೆ ಓಗುಟ್ಟು ಬಂದ ಆತ ಜೋರಾಗಿ ಅಪ್ಪಿಕೊಂಡಿದ್ದಾನೆ. ಆಗಲೇ ಆಕೆಗೆ ನರಕ ದರ್ಶನ ಆಗಿರೋದು. ಅಪ್ಪಿಕೊಂಡ ಹೊಡೆತಕ್ಕೆ ಆಕೆ ನೋವಿನಿಂದ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ ಎಂದು ಸಿಂಗಾಪುರದ ಮದರ್‍ಶಿಪ್ ವರದಿ ಮಾಡಿದೆ.
ಕಳೆದ ಅಕ್ಟೋಬರ್ 19 ರಂದು ಈ ಘಟನೆ ನಡೆದಿದೆ. ಕುಸಿದು ಬಿದ್ದ ಆಕೆ ಸ್ವಲ್ಪ ಸುಧಾರಿಸಿಕೊಂಡಿದ್ದಾಳೆ. ರಾತ್ರಿ ಇಡೀ ನೋವು ಕಾಡಿದೆ. ಮಾರನೇಯ ದಿನ ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರ ಸಲಹೆಯಂತೆ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಎದೆಯ ಭಾಗವನ್ನು ಸ್ಕ್ಯಾನ್ ಮಾಡಿದಾಗ.. ಐದು ಪಕ್ಕೆಲುಬುಗಳು ಮುರಿದಿವೆ. ಇನ್ನೊಂದು ಎಲುಬು ಬಿರುಕು ಬಿಟ್ಟಿರೋದು ಗೊತ್ತಾಗಿದೆ..
ಮೂಳೆ ಮುರಿತಗೊಡರೂ ಅದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ. ಸರಿ ಹೋಗುತ್ತದೆ. ಆದರೆ ಕಟ್ಟುನಿಟ್ಟಿನ ವಿಶ್ರಾಂತಿ ಪಾಲಿಸಬೇಕು ಎಂದು ಹೇಳಿ ಅದಕ್ಕೆ ಬೇಕಾಗಿರುವ ಔಷಧಿಗಳನ್ನ ನೀಡಿ ಕಳುಹಿಸಿದ್ದಾರೆ. ಇನ್ನು ತಪಾಸಣೆ ವೇಳೆ ವೈದ್ಯರು ಇನ್ನೊಂದು ವಿಚಾರವನ್ನು ಕಂಡುಕೊಂಡರು. ಪತಿ ಹಗ್ ಮಾಡಿದ ಕಾರಣಕ್ಕೆ ಆಕೆ ಕುಸಿದು ಬೀಳಲಿಲ್ಲ. ಆಕೆ ತೀವ್ರವಾದ ಆಸ್ಟಿಯೊಪೊರೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಮಹಿಳೆಯ ಮೂಳೆಗಳು ದುರ್ಬಲಗೊಂಡಿವೆ ಅನ್ನೋದನ್ನು ಅರಿತುಕೊಂಡಿದ್ದಾರೆ. ದೈನಂದಿನ ದಿನಗಳಲ್ಲಿಆಕೆ ಮೂಳೆ ಮುರಿತದಿಂದ ಕುಸಿದು ಬೀಳುವ ಸಾಧ್ಯತೆ ಇತ್ತು ಎಂದು ವೈದ್ಯರು ವಿವರಿಸಿದ್ದಾರೆ.
ವೈದ್ಯರಿಗೆ ಪತಿ ವಾಂಗ್ ನೀಡಿರುವ ಮಾಹಿತಿ ಪ್ರಕಾರ.. ಹೆಂಡತಿ 45 ಕೆಜಿಯಿಂದ 50 ಕೆಜಿ ತೂಕವಿದ್ದಳು. ಆಗಾಗ ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸುತ್ತಿದ್ದಳು. ಆಗಾಗ ಉಪವಾಸ ಮಾಡುತ್ತಿದ್ದಳು. ಪ್ರತಿದಿನ ಕಾಫಿ ಕುಡಿಯುತ್ತಿದ್ದಳು. ಎಂದಿಗೂ ಹೊರಗೆ ಹೋಗುತ್ತಿರಲಿಲ್ಲ, ಸೂರ್ಯನ ಬೆಳಕು ಬೀಳದಂತೆ ಬಟ್ಟೆ ಮುಚ್ಚಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾನೆ. ಆಗ ಸ್ಥಳೀಯ ವೈದ್ಯರು ಸೂರ್ಯನ ಬೆಳಕಿನ ಕೊರತೆಯಿಂದಾಗಿ ದೇಹವು ಸಾಕಷ್ಟು ವಿಟಮಿನ್ ಡಿ ಉತ್ಪಾದಿಸುವುದನ್ನು ತಡೆಯುತ್ತದೆ ಎಂದು ವಿವರಿಸಿದರು. ಇದು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ.. ಆಸ್ಟಿಯೊಪೊರೋಸಿಸ್ ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಅವು ಮುರಿತದ ಸಾಧ್ಯತೆಯನ್ನು ಹೆಚ್ಚಿಸುವ ಕಾಯಿಲೆ. ದಿನ ಕಳೆದಂತೆ ಮೂಳೆಗಳನ್ನ ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಪ್ರಸ್ತುತ ಮಹಿಳೆ ತನ್ನ ಆರೋಗ್ಯದತ್ತ ಗಮನ ಹರಿಸುತ್ತಿದ್ದಾಳೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ.. ವಿಷಯ ಗೊತ್ತಾದ ದಿನದಿಂದ ನಿತ್ಯ ಸೂರ್ಯನ ಬೆಳಕಿಗೆ ಹೋಗುತ್ತಾಳೆ. ನಿಯಮಿತವಾಗಿ ವಾಕಿಂಗ್ ಮಾಡುತ್ತಾಳೆ. ದೆಹಕ್ಕೆ ಹೆಚ್ಚುವರಿಯಾಗಿ ಕ್ಯಾಲ್ಸಿಯಮ್ ಸಿಗುವಂತೆ ನೋಡಿಕೊಳ್ಳುತ್ತಿದ್ದಾಳೆ.