ರಾತ್ರಿ ಮ!ನೆವರೆಗೆ ಹಿಂಬಾಲಿಸಿದ ಕಾಮುಕ..! ಭಯಾನಕ ಅನುಭವ ಹಂಚಿಕೊಂಡ ಬೆಂಗಳೂರು ಮಹಿಳೆ! ಆಕೆಯ ಆ ನಿರ್ಧಾರ ವೈರಲ್

Published : Oct 07, 2026, 10:11 PM ISTUpdated : Oct 07, 2026, 10:12 PM IST
helmet camera for women riders

ಸಾರಾಂಶ

ಬೆಂಗಳೂರಿನಲ್ಲಿ ಒಂಟಿಯಾಗಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ. ಈ ಆಘಾತಕಾರಿ ಘಟನೆಯ ನಂತರ ಆಕೆ ತನ್ನ ಸುರಕ್ಷತೆಗಾಗಿ ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ , ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ? ಎಂಬ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎದುರಾಗಿದೆ. ದಿನನಿತ್ಯ ಕಚೇರಿ, ಗಾರ್ಮೆಂಟ್‌, ಶಾಪ್‌ಗಳಲ್ಲಿ ದುಡಿಯುವ ಮಹಿಳೆಯರು ರಾತ್ರಿ ಮನೆಗೆ ತಲುಪುವವರೆಗೆ ಜೀವಭಯದಲ್ಲೇ ಹೋಗುವಂತಾಗಿದೆ. ಸಾರ್ವಜನಿಕ ಬಸ್‌ಗಳಲ್ಲಿ ಓಡಾಡುವವ ಮಹಿಳೆಯರದ್ದು ಒಂದು ಸಮಸ್ಯೆಯಾದರೆ, ಸ್ಕೂಟಿ, ಬೈಕ್, ಟ್ಯಾಕ್ಸಿಗಳಲ್ಲಿ ಓಡಾಡುವ ಮಹಿಳೆಯರು ಎಂಥ ಸಮಸ್ಯೆ ಎದುರಿಸುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಬೆಂಗಳೂರಿನ ಮಹಿಳೆಯೊಬ್ಬರು ಮನೆಗೆ ಸ್ಕೂಟಿಯಲ್ಲಿ ಹೊರಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಮನೆವರೆಗೂ ಹಿಂಬಾಲಿಸಿದ ಬಗ್ಗೆ ಆಘಾತಕಾರಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ; ಈ ಘಟನೆಯಿಂದ ಎಚ್ಚೆತ್ತ ಮಹಿಳೆ ಮುಂಜಾಗ್ರತೆಗಾಗಿ ಏನು ಮಾಡಿದ್ದಾರೆ ನೋಡಿ. ಮಹಿಳೆಯ ನಿರ್ಧಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಪ್ರತಿ ಮಹಿಳೆಯರು ಓದುವುದು ಇಂದಿನ ಅಗತ್ಯ.

ಮಹಿಳೆ ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿದ್ದೇಕೆ?

ಬೆಂಗಳೂರು ನಿವಾಸಿಯಾಗಿರುವ ಈ ಮಹಿಳೆ ತನ್ನ ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿದ್ದಾರೆ. ಅದಕ್ಕೆ ಕಾರಣವೇನು ಎಂಬುದಕ್ಕೆ ತಮಗಾದ ಭಯಾನಕ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. ಮಹಿಳೆಯ ಹೆಲ್ಮೆಟ್‌ಗೆ ಹಾಕಿರುವ ಕ್ಯಾಮೆರಾ ಕೆಲವರಿಗೆ ಇದು ಗ್ಯಾಜೆಟ್ ಎನಿಸಬಹುದು. ಆದರೆ ಆ ಮಹಿಳೆ ಪಾಲಿಗೆ ಇದು ಸುರಕ್ಷಿತ ಸಾಧನವಾಗಿದೆ. ಕ್ಯಾಮೆರಾದಿಂದಾಗಿ ಆತಂಕದ ಘಟನೆಗಳು ಎದುರಾದಾಗ ದೃಶ್ಯಗಳು ಸೆರೆಹಿಡಿಯಲು ಸಹಾಯಕವಾಗಿದೆ.

ಕ್ಯಾಮೆರಾ ಖರೀದಿಸಲು ಕಾರಣವೇನು?

ವ್ಯಕ್ತಿಯೊಬ್ಬ ಮಹಿಳೆಯನ್ನ ಕೇಳ್ತಾನೆ, 'ನೀವ್ಯಾಕೆ ಕ್ಯಾಮೆರಾ ಖರೀದಿಸಿದ್ದೀರಿ? ಅದಕ್ಕೆ ಮಹಿಳೆ ಹೇಳ್ತಾರೆ, ನನ್ನನ್ನು ಅಪರಿಚಿತ ವ್ಯಕ್ತಿಯೊಬ್ಬ ಮನೆಯವರೆಗೂ ಹಿಂಬಾಲಿಸಿದ್ದ' ಎಂದು ಭಯಾನಕ ಅನುಭವ ಹೇಳುತ್ತಾ, 'ನಾನು ಮತ್ತೊಮ್ಮೆ ಇಂತ ತಪ್ಪು ಮರುಕಳಿಸಲು ಬಿಡಲ್ಲ' ಹೀಗಾಗಿ ಕ್ಯಾಮೆರಾ ಖರೀದಿಸಿದ್ದೇನೆ ಎಂದು ಹೇಳುತ್ತಾಳೆ. ‘throttle_d390’ ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅಕ್ಟೋಬರ್ 1ರಂದು ಹಾಕಲಾದ ಈ ಪೋಸ್ಟ್‌ಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ.

ವಿಡಿಯೋದಲ್ಲಿ ಮಹಿಳೆ ಹೇಳಿದ್ದೇನು?

ಒಬ್ಬ ವ್ಯಕ್ತಿ ನನ್ನನ್ನು ಮನೆವರೆಗೂ ಹಿಂಬಾಲಿಸಿದ್ದ. ಮತ್ತೆ ಅಂತಹ ಅಪಾಯ ತೆಗೆದುಕೊಳ್ಳಲು ನಾನು ಇಷ್ಟಪಡಲಿಲ್ಲ. ಆ ಭಯಾನಕ ಅನುಭವದ ಬಳಿಕವೇ ಕ್ಯಾಮೆರಾ ಬಳಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ

ಬೆಂಗಳೂರಿನಲ್ಲಿ ಮಹಿಳೆಯರು ನಿಜವಾಗಿಯೂ ಸುರಕ್ಷಿತರಾಗಿದ್ದಾರೆಯೇ? ಅಥವಾ ಎಲ್ಲವೂ ಸರಿಯಾಗಿದೆ ಎಂದು ನಾವು ಸುಮ್ಮನೆ ಭಾವಿಸುತ್ತಿದ್ದೇವೆಯೇ ಎಂದು ಪೋಸ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ನಂತರ ಚರ್ಚೆ ಕ್ಯಾಮೆರಾಗೆ ಮಾತ್ರ ಸೀಮಿತವಾಗದೆ ಮಹಿಳೆಯರು ಡ್ರೈವ್ ಮಾಡುವಾಗ ತಮ್ಮ ಪ್ರಯಾಣವನ್ನು ರೆಕಾರ್ಡ್ ಮಾಡಿಕೊಳ್ಳುವ ಅಗತ್ಯ ಏಕೆ ಎದುರಾಗುತ್ತಿದೆ ಎಂಬುದರತ್ತವೂ ತಿರುಗಿತು.

'ಬೆಂಗಳೂರಿನಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ಬೇಸರದ ಸಂಗತಿ. ನಮ್ಮ ನಗರ ಹಿಂದೆ ತುಂಬಾ ಸುರಕ್ಷಿತ ಮತ್ತು ಶಾಂತವಾಗಿತ್ತು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಸವಾರರು ಕ್ಯಾಮೆರಾ ಬಳಸುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು ಎಂದು ಹೇಳಿದ್ದಾರೆ. 'ಕೆಲವರು ಕಂಟೆಂಟ್ ಮಾಡಲು ಕ್ಯಾಮೆರಾ ಖರೀದಿಸುತ್ತಾರೆ. ಇನ್ನು ಕೆಲವರು ಸುರಕ್ಷತೆಗಾಗಿ ಬಳಸುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ' ಎಂದಿದ್ದಾರೆ.

ಸವಾರರಿಗೆ ಕ್ಯಾಮೆರಾ ಏಕೆ ಬೇಕು?

ಇಂತಹ ಘಟನೆಗಳು ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಪ್ರಪಂಚದ ವಿವಿಧ ಭಾಗಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 'ನೀವು ಯಾವ ಬೆಂಗಳೂರು ಬಗ್ಗೆ ಮಾತನಾಡುತ್ತಿದ್ದೀರಿ? ಬೆಂಗಳೂರಿನಲ್ಲಿ ಎಲ್ಲರೂ ಸಂತರೇನೂ ಅಲ್ಲ. ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತವೆ. ಬೆಂಗಳೂರೂ ಇದಕ್ಕೆ ಹೊರತಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ಗಡದ್ದಾಗಿ ನಿದ್ದೆ ಮಾಡುವ ಸ್ಪರ್ಧೆ: ಗೆದ್ದರೆ ಸಿಗತ್ತೆ 12 ಲಕ್ಷ ರೂ! ಏನೇನು ಷರತ್ತು ಇವೆ ನೋಡಿ
Space Toys: ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಆಟಿಕೆ ಸಾಮಾನುಗಳನ್ನು ಒಯ್ಯುವುದು ಯಾಕೆ? ಭಾರೀ ಸೀಕ್ರೆಟ್ ಇದರಲ್ಲಿದೆ!