₹1.2 ಕೋಟಿ ಮನೆ ಖರೀದಿ vs ₹44,000 ಬಾಡಿಗೆ: ಯಾವ ನಿರ್ಧಾರ ಸರಿ? ಬೆಂಗಳೂರು ಟೆಕ್ಕಿಯ ಪ್ರಶ್ನೆಗೆ ಆನ್‌ಲೈನ್‌ನಲ್ಲಿ ಭಾರೀ ಚರ್ಚೆ!

Published : Aug 05, 2026, 01:53 PM IST
Bengaluru Techie Dilemma Buy 1.2 Crore Flat or Pay 44000 Rent Sparks Viral Debate

ಸಾರಾಂಶ

ವರ್ಷಕ್ಕೆ 70 ಲಕ್ಷ ರೂಪಾಯಿ ಸಂಬಳ ಪಡೆಯುವ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು, 1.2 ಕೋಟಿ ರೂಪಾಯಿ ಕೊಟ್ಟು ಫ್ಲ್ಯಾಟ್ ಖರೀದಿಸಬೇಕೇ ಅಥವಾ ತಿಂಗಳಿಗೆ 44,000 ರೂಪಾಯಿ ಬಾಡಿಗೆ ಮನೆಯಲ್ಲೇ ಮುಂದುವರಿಯಬೇಕೇ ಎಂಬ ಗೊಂದಲವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ.

ಸಿಲಿಕಾನ್ ಸಿಟಿಯಲ್ಲಿ ಸ್ವಂತ ಮನೆ ಖರೀದಿಸೋದು ಒಳ್ಳೆಯದಾ? ಅಥವಾ ಬಾಡಿಗೆ ಮನೆಯಲ್ಲಿರೋದೇ ಉತ್ತಮವೇ? ಈ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಹೊಸದಲ್ಲ. ಆದರೆ ಬೆಂಗಳೂರಿನ ಟೆಕ್ಕಿಯೊಬ್ಬರು ಇದೇ ಪ್ರಶ್ನೆಯನ್ನ Reddit ನಲ್ಲಿ ಕೇಳಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ.

ವರ್ಷಕ್ಕೆ 70 ಲಕ್ಷ ರೂಪಾಯಿ ಸಂಬಳ ಗಳಿಸುವ ಈ ಟೆಕ್ಕಿ '1.2 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್ ಖರೀದಿಸಬೇಕೇ ಅಥವಾ ತಿಂಗಳಿಗೆ 44,000 ರೂಪಾಯಿ ಬಾಡಿಗೆ ಕಟ್ಟಿಕೊಂಡು ಇರುವುದೇ ಬುದ್ಧಿವಂತಿಕೆ ನಿರ್ಧಾರವೇ?' ಎಂದು ನೆಟ್ಟಿಗರ ಸಲಹೆ ಕೇಳಿದ್ದಾರೆ.

ಟೆಕ್ಕಿಯ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಈ ವ್ಯಕ್ತಿ ತಮ್ಮ ಸಂಪೂರ್ಣ ಹಣಕಾಸಿನ ವಿವರವನ್ನು ನೀಡಿದ್ದಾರೆ. ತಮಗೆ 30ರ ಆಸುಪಾಸಿನ ವಯಸ್ಸು, ವರ್ಷಕ್ಕೆ ಸುಮಾರು 70 ಲಕ್ಷ ರೂಪಾಯಿ ಸ್ಥಿರ ಆದಾಯವಿದೆ ಮತ್ತು ಸುಮಾರು 1.2 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸುವ ಪ್ಲಾನ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಸದ್ಯಕ್ಕೆ ಬಾಡಿಗೆ ಕಡಿಮೆ ಇರುವಾಗ ದೀರ್ಘಾವಧಿಯ ಹೋಮ್ ಲೋನ್ ಮಾಡುವುದು ಆರ್ಥಿಕವಾಗಿ ಸರಿ ಎನಿಸುತ್ತಿಲ್ಲ ಎಂದ ಗೊಂದಲವನ್ನೂ ಒಪ್ಪಿಕೊಂಡಿದ್ದಾರೆ.

ರೆಡ್ಡಿಟ್ ಪೋಸ್ಟ್‌ನಲ್ಲಿ ಟೆಕ್ಕಿ ಬರೆದುಕೊಂಡಂತೆ, 'ನಾನು 1.2 ಕೋಟಿ ರೂಪಾಯಿ ಫ್ಲ್ಯಾಟ್ ಖರೀದಿಸಬೇಕಾ ಅಥವಾ 44,000 ರೂಪಾಯಿ ಬಾಡಿಗೆ ಕಟ್ಟುವುದನ್ನು ಮುಂದುವರಿಸಬೇಕಾ?' ಎಂದು ಅವರು ಪ್ರಶ್ನಿಸಿದ್ದಾರೆ. ಸ್ವಂತ ಮನೆ ಖರೀದಿಸಿದರೆ ಬಾಡಿಗೆ ಇರೋದಿಲ್ಲ. ಅಲ್ಲದೆ ಆ ಮನೆಯೂ ನಮ್ಮದೆಂಬ ಖುಷಿ ಇರುತ್ತದೆ. ಆದರೆ ಮನೆ ಖರೀದಿಸಲು ದೊಡ್ಡ ಮೊತ್ತದ ಹೋಮ್ ಲೋನ್ ಮಾಡಬೇಕಾಗುತ್ತೆ ಅದು ಒಂದು ರೀತಿ ನಷ್ಟವಾಗುತ್ತೆ' ಹಾಗಾದರೆ ನಾನು ಯಾವ ನಿರ್ಧಾರ ಮಾಡುವುದ ಸರಿ ಎಂದು ಪ್ರಶ್ನಸಿದ್ದಾರೆ.

ವೈರಲ್ ಪೋಸ್ಟ್ ಅನ್ನು ಇಲ್ಲಿ ನೋಡಿ: 

ಟೆಕ್ಕಿ ಈ ಪೋಸ್ಟ್ ಪಬ್ಲಿಶ್ ಮಾಡಿದ ಕೆಲವೇ ಗಂಟೆಗಳಲ್ಲಿ ನೂರಾರು ಕಾಮೆಂಟ್ಸ್ ಬಂದಿವೆ. ರೆಡ್ಡಿಟ್ ಬಳಕೆದಾರರ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮಾಸಿಕ ಇಎಂಐಗಿಂತ ಬಾಡಿಗೆ ತುಂಬಾ ಕಡಿಮೆ ಇದ್ದರೆ ಬಾಡಿಗೆ ಮನೆಯಲ್ಲೇ ಇದ್ದು ಉಳಿತಾಯದ ಹಣವನ್ನು ಇಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ದೀರ್ಘಾವಧಿಯಲ್ಲಿ ಉತ್ತಮ ಆದಾಯ ನೀಡಬಲ್ಲದು ಎಂದು ಹಲವರು ವಾದಿಸಿದ್ದಾರೆ. ಇನ್ನು ಕೆಲವರು, ಸ್ವಂತ ಮನೆ ಆರ್ಥಿಕ ಭದ್ರತೆ ನೀಡುತ್ತದೆ, ವರ್ಷ ವರ್ಷವೂ ಹೆಚ್ಚುತ್ತಿರುವ ಬಾಡಿಗೆ ಹಣ ಕೊಡುವ ಬದಲು ಒಂದು ಸಾಲ ಲೋನ್ ಮಾಡಿ ಮನೆ ಖರೀದಿಸುವುದೇ ಒಳ್ಳೆಯದು, ಸ್ವಂತ ಮನೆ ಇದ್ರೆ ಶಾಶ್ವತವಾಗಿ ಬಾಡಿಗೆ ಕಟ್ಟುವ ತಾಪತ್ರಯವೇ ಇರೋಲ್ಲ, ಅಲ್ಲದೆ ಸ್ವಂತ ಮನೆಯಿಂದ ಭಾವನಾತ್ಮಕವಾಗಿಯೂ ನೆಮ್ಮದಿ ಸಿಗುತ್ತದೆ ಎಂದು ಪ್ರತಿಪಾದಿಸಿದ್ದಾರೆ

ಒಬ್ಬ ರೆಡ್ಡಿಟ್ ಬಳಕೆದಾರ, 'ಮನೆ ಅನ್ನೋದು ಬರೀ ಹಣಕಾಸಿನ ಹೂಡಿಕೆಯಲ್ಲ, ಅದೊಂದು ಜೀವನಶೈಲಿಯ ನಿರ್ಧಾರ ಕೂಡ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನಿಮ್ಮ ಬಾಡಿಗೆ ಕೇವಲ 44,000 ರೂಪಾಯಿ ಆಗಿದ್ದು, ಆ ಮನೆಯಲ್ಲಿ ನೀವು ಖುಷಿಯಾಗಿದ್ದರೆ ಬಾಡಿಗೆ ಮನೆಯಲ್ಲೇ ಇದ್ದು ನಿಮ್ಮ ಇನ್ವೆಸ್ಟ್ ಮೆಂಟ್ ಬೆಳೆಸಿ ಎಂದು ಬರೆದಿದ್ದಾರೆ. ಈ ಟೆಕ್ಕಿ ಬೆಂಗಳೂರಿನಲ್ಲಿ ಎಷ್ಟು ವರ್ಷ ಇರಲು ಯೋಜಿಸಿದ್ದಾರೆ ಎಂಬುದರ ಮೇಲೆ ನಿರ್ಧಾರ ಅವಲಂಬಿತವಾಗಿದೆ. ದೀರ್ಘಕಾಲ ಒಂದೇ ನಗರದಲ್ಲಿ ನೆಲೆಸುವವರಿಗೆ ಮನೆ ಖರೀದಿ ಉತ್ತಮ ಆಯ್ಕೆ ಎಂದು ಮೂರನೇ ಬಳಕೆದಾರರು ಸಲಹೆ ನೀಡಿದ್ದಾರೆ.

ಈ ಚರ್ಚೆಯಲ್ಲಿ ಆಸ್ತಿ ಮೌಲ್ಯದ ಏರಿಕೆ, ನಿರ್ವಹಣಾ ವೆಚ್ಚ, ಸಾಲದ ಬಡ್ಡಿ, ತೆರಿಗೆ, ಹಣದ ಲಭ್ಯತೆ (ಲಿಕ್ವಿಡಿಟಿ) ಮತ್ತು ಕೆರೀರ್ ಫ್ಲೆಕ್ಸಿಬಿಲಿಟಿ (career flexibility) ಮುಂತಾದ ಅಂಶಗಳ ಬಗ್ಗೆಯೂ ಪ್ರಸ್ತಾಪವಾಯಿತು. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿರೀಕ್ಷಿತ ಗೃಹಸಾಲದ ಇಎಂಐ ಮತ್ತು ಹೂಡಿಕೆಯಿಂದ ಬರಬಹುದಾದ ಸಂಭಾವ್ಯ ಆದಾಯವನ್ನು ಹೋಲಿಕೆ ಮಾಡಿ ನೋಡುವಂತೆ ಹಲವರು ಟೆಕ್ಕಿಗೆ ಸಲಹೆ ನೀಡಿದ್ದಾರೆ.

ಭಾರತದ ಟೆಕ್ ವಲಯದಲ್ಲಿ ಗಗನಕ್ಕೇರುತ್ತಿರುವ ಸಂಬಳ ಮತ್ತು ಆಸ್ತಿ ಬೆಲೆಗಳ ನಡುವೆ, ಇದೇ ರೀತಿಯ ಗೊಂದಲದಲ್ಲಿರುವ ಅನೇಕ ನಗರವಾಸಿ ವೃತ್ತಿಪರರಿಗೆ ಈ ವೈರಲ್ ಪೋಸ್ಟ್ ತಮ್ಮದೇ ಕಥೆಯಂತೆ ಭಾಸವಾಗಿದೆ. ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಏರುತ್ತಲೇ ಇರುವುದರಿಂದ ಬಾಡಿಗೆ ಮತ್ತು ಖರೀದಿ ನಡುವಿನ ಈ ಚರ್ಚೆ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಮತ್ತು ಇದಕ್ಕೆ ಎಲ್ಲರಿಗೂ ಅನ್ವಯವಾಗುವ ಒಂದೇ ಉತ್ತರವಿಲ್ಲ.

PREV
Read more Articles on
click me!

Recommended Stories

Costume Controversy: 'ರಾಮಾಯಣ' ಕಾಸ್ಟ್ಯೂಮ್‌ ಬಗ್ಗೆ ಭಾರೀ ಟ್ರೋಲ್; ನೆಟ್ಟಿಗರಿಗೆ ಖಡಕ್‌ ಡೋಸ್ ಕೊಟ್ಟ ವಸ್ತ್ರ-ವಿನ್ಯಾಸಕರು!
ಬಟ್ಟೆ ಹೊಲೆಯುತ್ತಿದ್ದ ಕೈಗಳಿಂದ ಬೃಹತ್ ಸಾಮ್ರಾಜ್ಯದ ಪ್ರೆಸ್ಟೀಜ್ ಕಟ್ಟಿದ ಇರ್ಫಾನ್ ರಜಾಕ್