
ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿದಿನವೂ ಒಂದಲ್ಲೊಂದು ವೈರಲ್ ಆಗುವಂತಹ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ವೈರಲ್ ಆಗಿದೆ.. ಆನಾರೋಗ್ಯದಲ್ಲೂ ಆಫೀಸ್ ಕೆಲಸ ಮಾಡಿದ್ದ ಮಹಿಳೆ. ಗೆಳತಿಯ ಬರ್ತಡೇಗೆ ಹೋಗಲು ಸಿಕ್ ಲಿವ್ ತೆಗೆದುಕೊಂಡಿದ್ದಾರೆ. ಆ ವಿಚಾರ ಇನ್‌ಸ್ಟಾಗ್ರಾಂ ಹಂಚಿಕೊಂಡಿರುವ ಮಹಿಳೆ ಏನು ಹೇಳಿದ್ದಾರೆ ನೋಡೋಣ.
ಮುಸ್ಕಾನ್ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸಕ್ಕೆ ಹೋಗಿದ್ದ ಅವರು ಬಳಿಕ ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಲು ಸಿಕ್ ಲೀವ್ ತೆಗೆದುಕೊಂಡಿದ್ದಾರೆ. ಮುಸ್ಕಾನ್ ಹೇಳುವಂತೆ, ' ಸಿಕ್ ಲೀವ್ ಅನ್ನು ಅನಾರೋಗ್ಯವಾದಾಗಲೆಲ್ಲ ತೆಗೆದುಕೊಳ್ಳುವುದಕ್ಕಿಂತ ಉಳಿಸಿಕೊಳ್ಳಬೇಕು ಮತ್ತು ಅದನ್ನ ಯಾವಾಗ ಬಳಸಿಕೊಳ್ಳಬೇಕು ಎಂಬ ರೀತಿಯಲ್ಲಿ ಯೋಚಿಸುವುದಾಗಿ ತಿಳಿಸಿದ್ದಾರೆ.
ನನ್ನ ಮೆದುಳಿನಲ್ಲಿ ಏನೋ ಸಮಸ್ಯೆ ಇದೆ ಅನ್ನಿಸುತ್ತೆ. ಸಿಕ್ ಲೀವ್ ವಿಚಾರದಲ್ಲಿ ನಾನು ಯೋಚಿಸುವ ರೀತಿಯೇ ವಿಚಿತ್ರವಾಗಿದೆ. ಇತ್ತೀಚೆಗೆ ನನಗೆ ತುಂಬಾ ಅನಾರೋಗ್ಯವಾಗಿತ್ತು. ತಲೆನೋವು, ಸುಸ್ತು, ಹಾಸಿಗೆಯಿಂದ ಎದ್ದೇಳಲೂ ಆಗದಷ್ಟು ಕಷ್ಟವಾಗಿತ್ತು. ಇಂಥ ಸಂದರ್ಭದಲ್ಲಿ ಯಾರೂ ತಾನೇ ಆಫೀಸ್‌ಗೆ ಹೋಗಿ ಕೆಲಸ ಮಾಡ್ತಾರೆ? ಆಫೀಸ್‌ಗೆ ಫೋನ್ ಮಾಡಿ ‘ನನಗೆ ಹುಷಾರಿಲ್ಲ, ಬರಲು ಆಗುವುದಿಲ್ಲ’ ಅಂತಾ ಹೇಳಿ ಸಿಕ್ ಲಿವ್ ತಗೊಳ್ತಾರೆ ತಾನೇ? ಆದ್ರೆ ನಾನು ಮಾಡಿದೆ ಗೊತ್ತಾ? ಸಿಕ್ ಲೀವ್ ತೆಗೆದುಕೊಳ್ಳಲಿಲ್ಲ! ಸೀದಾ ಎದ್ದು ಅನಾರೋಗ್ಯವಿದ್ರೂ ಆಫೀಸ್‌ಗೆ ರೆಡಿಯಾಗಿ ಕೆಲಸಕ್ಕೆ ಹೊರಟೆ. ಎರಡು ನ್ಯೂರೋಫೆನ್ ಮಾತ್ರೆ ತೆಗೆದುಕೊಂಡೆ, ಅಷ್ಟೇ. ಏಕೆಂದರೆ ನನ್ನ ಪ್ರಕಾರ ಸಿಕ್ ಲೀವ್ ಅನ್ನೋದು ಕೇವಲ ಅನಾರೋಗ್ಯವಾದಾಗ ಬಳಸುವುದಕ್ಕಲ್ಲ. ನನ್ನ ಮನಸ್ಸಿನಲ್ಲಿ ಸಿಕ್ ಲೀವ್ ಅನ್ನೋದು ಉಳಿಸಿಕೊಳ್ಳಬೇಕಾದ ಒಂದು ರೀತಿಯ ಹೂಡಿಕೆ. ಅದನ್ನು ನಾನು ಉಳಿಸಿಕೊಂಡೆ ಎಂದು ಮುಸ್ಕಾನ್ ಹೇಳಿದ್ದಾರೆ.
ಆದರೆ ಸೋಮವಾರ ಅನಾರೋಗ್ಯದಲ್ಲೂ ಕೆಲಸ ಮಾಡಿದ್ದ ಮುಸ್ಕಾನ್, ಅದೇ ವಾರದ ಶುಕ್ರವಾರ ಬೇರೆಯದೇ ಕಾರಣಕ್ಕೆ ಸಿಕ್ ಲೀವ್ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.
ನಾನು ಅದಕ್ಕೆ ಹೇಳಿದ್ದು, ನನ್ನ ಮೆದುಳಲ್ಲಿ ಏನೋ ಸಮಸ್ಯೆ ಇದೆ ಅಂತಾ. ನನಗೆ ಆರೋಗ್ಯ ಸರಿಯಿಲ್ಲದಾಗ ಆಫೀಸ್‌ನಲ್ಲಿ ಕೆಲಸ ಮಾಡಿ. ಇದೀಗ ನನ್ನ ಗೆಳತಿ ಹುಟ್ಟುಹಬ್ಬಕ್ಕೆ ನಾನು ಆರಾಮಾಗಿದ್ದರೂ ಸಿಕ್ ಲಿವ್ ತೆಗೆದುಕೊಂಡೆ. ಈ ದಿನ ರಜೆ ಸಿಕ್ಕಿದ್ದು ನನಗೆ ತುಂಬಾ ಖುಷಿಯಾಗಿತ್ತು. ವಿಶೇಷವೆಂದರೆ ಅದೇ ದಿನವೇ ನನ್ನ ಅಕೌಂಟ್‌ಗೆ ಸಂಬಳವೂ ಬಂದಿತ್ತು. ಗೆಳತಿಯ ಬರ್ತಡೇ ಪಾರ್ಟಿಯನ್ನು ಎಂಜಾಯ್ ಮಾಡುತ್ತಿದ್ದ ನನಗೆ ತುಂಬಾ ಖುಷಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.'
ಆದರೆ ಈಗ ಅದನ್ನೆಲ್ಲ ಯೋಚಿಸಿದರೆ ನಾನು ತಪ್ಪು ಮಾಡಿದ್ದೇನೆ ಅನ್ನಿಸುತ್ತಿದೆ. ಏಕೆಂದರೆ ನನ್ನ ತಲೆನೋವು ಎರಡು ದಿನಗಳಾದರೂ ಕಡಿಮೆಯಾಗಲಿಲ್ಲ. ಆದರೆ ಅಂದು ನಾನು ಮನೆಯಲ್ಲೇ ಇದ್ದಿದ್ದರೂ ಏನು ಮಾಡುತ್ತಿದ್ದೆ? ಅಷ್ಟೇ ಬಿಡಿ, ಎಲ್ಲವೂ ಚೆನ್ನಾಗಿತ್ತು..' ಎಂದು ಮುಸ್ಕಾನ್ ಹೇಳಿದ್ದಾರೆ.
ಈ ವಿಡಿಯೋ ಹಂಚಿಕೊಳ್ಳುವಾಗ ಅವರು, 'ನನಗೆ ಹುಷಾರಿಲ್ಲದಾಗ ಬಳಸಲು ಸಿಕ್ ಲೀವ್ ಉಳಿಸುತ್ತಿಲ್ಲ... ಕೆಲಸದಿಂದ ಬೇಸತ್ತಾಗ ಬಳಸಲು ಉಳಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮುಸ್ಕಾನ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವರು ಸಿಕ್ ಲೀವ್ ಬಗ್ಗೆ ಅವರ ಆಲೋಚನೆ ತಮ್ಮ ಅನುಭವಕ್ಕೂ ಹೋಲುತ್ತದೆ ಎಂದು ಹೇಳಿದ್ದಾರೆ. 'ಇದು ತುಂಬಾ ನನ್ನ ಜೀವನಕ್ಕೂ ಹೋಲುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಇದನ್ನು ನೋಡಿ ತುಂಬಾ ನಕ್ಕೆ' ಎಂದಿದ್ದಾರೆ. ಇನ್ನೊಬ್ಬರು, 'ಒಂದು ವಿಡಿಯೋದಲ್ಲಿ ಕಾರ್ಪೊರೇಟ್ ಜೀವನದ ಕಥೆ' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಸಿಕ್ ಲೀವ್ ಅನ್ನು ಹೂಡಿಕೆಯಂತೆ ಉಳಿಸಿಕೊಳ್ಳುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.
ಸೂಚನೆ: ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದೆ. ಈ ಹೇಳಿಕೆಗಳನ್ನ ಏಷಿಯಾನೆಟ್ ಸುವರ್ಣ ನ್ಯೂಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ ಮತ್ತು ಅವುಗಳನ್ನು ಬೆಂಬಲಿಸುವುದಿಲ್ಲ.