ದೊಡ್ಡ ಬಿಲ್ಡಿಂಗ್ ಏರಿ ನಿಂತ ಡೊಗೇಶ್ ಭಾಯ್‌! ಮುಂದೇನಾಯ್ತು? ವಿಡಿಯೋ ನೋಡಿದ್ರೆ ನಡುಕ ಹುಟ್ಟಿಸುತ್ತೆ!

Published : Sep 05, 2026, 11:29 AM IST
Dogesh Bhai video viral

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, 'ಡೋಗೇಶ್ ಭಾಯ್' ಎಂದು ಕರೆಯಲ್ಪಡುವ ನಾಯಿಯೊಂದು ಬಹುಮಹಡಿ ಕಟ್ಟಡದ ತುದಿಯಲ್ಲಿ ಅಪಾಯಕಾರಿಯಾಗಿ ನಿಂತಿತ್ತು. ನೆಟ್ಟಿಗರು ಇದನ್ನು ತಮಾಷೆಯಾಗಿ ನೋಡಿದರೂ, ರಕ್ಷಣಾ ಕಾರ್ಯಕರ್ತರು ಧೈರ್ಯದಿಂದ ನಾಯಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಏನಾದರೊಂದು ಘಟನೆ ವೈರಲ್ ಆಗುತ್ತಲೇ ಇರುತ್ತದೆ. ರೀಲ್ಸ್, ಟ್ವಿಟರ್, ಇನ್‌ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು ವೈರಲ್ ಸುದ್ದಿ, ವಿಡಿಯೋಗಳೇ ಸಿಗುತ್ತವೆ. ಅದರಲ್ಲೂ ಡೋಗೇಶ್ ಭಾಯ್ ವಿಡಿಯೋಗಳೆಂದರೆ ಒಂದೊಂದು ಅಚ್ಚರಿ ಮೂಡಿಸುವಂತಿರುತ್ತವೆ. ಅಂಥದ್ದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅತಿ ಎತ್ತರದ ಬಿಲ್ಡಿಂಗ್ ಹತ್ತಿದ ಡೋಗೇಶ್ ಭಾಯ್!

ಇತ್ತೀಚೆಗೆ, ಘರ್ ಕೆ ಕಲೇಶ್ ಎಂಬ ಎಕ್ಸ್‌ ಅಕೌಂಟ್‌ನಲ್ಲಿ ಒಂದು ವಿಡಿಯ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನಾಯಿಯೊಂದು ಬಹು ಅಂತಸ್ತಿನ ಬಿಲ್ದಿಂಗ್ ಹತ್ತಿ, ಬಿಲ್ಡಿಂಗ್‌ ಕೊನೆಯಲ್ಲಿ ನಿಂತು ಸಿಟಿ ನೋಡುತ್ತಿದೆಯೋ, ಇಳಿಯಲು ದಾರಿ ಕಾಣಲು ಪರದಾಡುತ್ತಿದೆಯೋ ಎಂಬಂತೆ ನಿಂತಿದೆ. ನಾಯಿ ನಿಂತಿರುವ ಜಾಗ ನೋಡಿದ್ರೆ ಮೈ ಜುಮ್ಮೆನಿಸುತ್ತೆ. ಆದರೆ ನೆಟಿಜನ್‌ಗಳು ನಾಯಿಗಳೆಂದರೆ ಇನ್ನಿಲ್ಲದ ಕಾಮಿಡಿ ಮಾಡುತ್ತಾರೆ. ಈ ವಿಡಿಯೋಗೂ ಕೂಡ 'ಡೋಗೇಶ್ ಭಾಯ್'ಕ್ರಿಶ್ ಸ್ಟೈಲ್‌ನಲ್ಲಿ ಸಿಟಿ ರಕ್ಷಣೆ ಮಾಡ್ತಿದ್ದಾನೆ ಅಂತಾ ತಮಾಷೆ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಲು ಭಯಂಕರವಾಗಿದೆ. ಹತ್ತಾರು ಅಂತಸ್ತಿನ ಮಹಡಿ ಹತ್ತಿ ಬಾಲ್ಕನಿಯಲ್ಲಿ ನಾಯಿ ನಿಂತಿದೆ. ಅದು ಕೊನೆಯ ಹಂಚಿನಲ್ಲಿ ನಿಂತಿರೋದ್ರಿದ ಆಘಾತಕಾರಿಯಾಗಿ ಕಾಣುತ್ತೆ. ಬಿಲ್ಡಿಂಗ್‌ನ ಎತ್ತರ ನೋಡಿದ್ರೆ ಯಾರಿಗಾದರೂ ನಡುಕು ಹುಟ್ಟಿಸುತ್ತದೆ. ಡೋಗೇಶ್ ಭಾಯ್ ನಿಂತಿರೋ ಜಾಗ ಹೇಗಿದೆ ಎಂದರೆ ಸ್ವಲ್ಪ ಯಾಮಾರಿದರು ಅಷ್ಟು ಎತ್ತರದ ಬಿಲ್ಡಿಂಗ್‌ನಿಂದ ಬಿಳುವ ಅಪಾಯ ಹೆಚ್ಚಿದೆ.

ಡೋಗೇಶ್ ಭಾಯ್‌ನ ರಕ್ಷಿಸಿದರು

ವಿಡಿಯೋ ನೋಡಿದಾಗ ಒಂದು ಕಡೆ ಡೋಗೇಶ್ ಅಲ್ಲಿವರೆಗೆ ಹೇಗೆ ಹತ್ತಿದ ಎಂಬ ಅಚ್ಚರಿ ಹುಟ್ಟಿಸಿದರೂ ಇನ್ನೊಂದೆಡೆ ಏನೂ ತಿಳಿಯದ ಮೂಕಪ್ರಾಣಿ ಅಪಾಯದಲ್ಲಿದೆ. ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಂಡು ರಕ್ಷಣಾ ಕಾರ್ಯಕರ್ತರು ತುಂಬಾ ಧೈರ್ಯ ಮಾಡಿ ಬಿಲ್ಡಿಂಗ್ ಹತ್ತಿದ್ದಾರೆ. ನಾಯಿ ಬಳಿ ಹೋದಾಗ ಕಾರ್ಯಕರ್ತರನ್ನ ಕಂಡು ಸ್ವಲ್ಪ ಓಡಾಡಿದರೂ ಕೆಳಗೆ ಬೀಳುವ ಅಪಾಯ. ನಿಧಾನಕ್ಕೆ ಡೋಗೇಶ್ ಭಾಯ್ ವಿಶ್ವಾಸಗಳಿಸಿ ನಾಯಿಯನ್ನ ಸುರಕ್ಷಿತವಾಗಿ ಅಪಾಯಕಾರಿ ಸ್ಥಳದಿಂದ ಹೊರತಂದಿದ್ದಾರೆ. ವಿಡಿಯೋದಲ್ಲಿ ಕೊನೆಗೆ ಡೋಗೇಶ್ ಭಾಯ್‌ ರಕ್ಷಿಸಿದಾಗಲೇ ನಿಟ್ಟುಸಿರುವ ಬಿಡುವಂತಾಗುತ್ತೆ.

ಆದರೆ ನೆಟಿಜನ್ಸ್ ಡೋಗೇಶ್ ಭಾಯ್ ನ ನೋಡುವುದು ಬೇರೆ. ಯಾವಾಗಲೂ ನಾಯಿಯ ತರಲೇ, ಕೀಟಲೆಗಳ ವಿಡಿಯೋಗಳನ್ನ ನೆಟಿಜನ್ಸ್ ಎಂಜಾಯ್ ಮಾಡ್ತಾರೆ. ಅದಕ್ಕಾಗಿಯೇ 'ಡೋಗೇಶ್ ಭಾಯ್' ಎಂದೇ ಜನಪ್ರಿಯತೆ ಬಂದಿದೆ. ಈ ವಿಡಿಯೋಗೂ ತಮಾಷೆಯಾಗಿ ಕಾಮೆಂಟ್ಸ್ ಮಾಡಿದ್ದಾರೆ. ಒಬ್ಬರು, 'ಡೋಗೇಶ್ ಭಾಯ್ ನಿಜವಾಗಲೂ ಅಲ್ಲಿ ಸಿಕ್ಕಿಹಾಕೊಂಡಿಲ್ಲ. ಪೆಂಟ್‌ಹೌಸ್ ಖರೀದಿಸುವ ಮೊದಲು ಸುತ್ತಲು ನೋಡಿ ಪರಿಶೀಲಿಸುತ್ತಿದ್ದಾನ' ಎಂದು ತಮಾಷೆ ಮಾಡಿದ್ದಾರೆ, ಇನ್ನೊಬ್ಬರು, ಡೋಗೇಶ್ ಭಾಯ್‌ನ ಈ ಕಿಡಿಗೇಡಿತನ ಎಲ್ಲೆಡೆ ಹೆಚ್ಚಾಗ್ತಿದೆ' ಎಂದಿದ್ದಾರೆ. ಮತ್ತೊಬ್ಬ 'ಡೋಗೇಶ್ ಭಾಯ್ ಮಾನವೀಯತೆಯ ಅಸ್ತಿತ್ವವನ್ನೇ ಪರೀಕ್ಷಿಸಿದ್ದಾರೆ ಹೇಳಿದ್ರೆ ಮಗದೊಬ್ಬರು, ಅವನು ಕ್ರಿಶ್ ರೀತಿ ಸಿಟಿ ರಕ್ಷಣೆ ಮಾಡುತ್ತಿದ್ದಾನೆ' ಎಂದು ತಮಾಷೆ ಮಾಡಿದ್ದಾರೆ.

PREV
Read more Articles on
click me!

Recommended Stories

Viral Video: ಕುಲ್ಫಿ ಮಾರುವ ಈ ಅಂಕಲ್‌ಗೆ ನೆಟಿಜನ್ ಫಿದಾ..! 'ನಿಮ್ಮ ಜೇಬು ಎಂದಿಗೂ ಖಾಲಿಯಾಗದಿರಲಿ' ಎಂದು ಹಾರೈಕೆ!
ಸಂತ್ರಸ್ತೆಯ ರಕ್ಷಣೆಗೆ ಧಾವಿಸಿದ 'ಶ್ವಾನ ಪಡೆ': ಸಿಸಿಟಿವಿಯಲ್ಲಿ ಸೆರೆಯಾಯ್ತು ಮೈ ನವಿರೇಳಿಸುವ ದೃಶ್ಯ!