ಮದುವೆಯಲ್ಲಿ ಸಿಕ್ಕ ₹10 ಲಕ್ಷ ಕ್ಯಾಶ್ ನೋಡಿ ವರ ಶಾಕ್! Income Tax ದಾಳಿ ಭಯದಲ್ಲಿ ಸರ್ಕಾರಿ ನೌಕರ ಕಂಗಾಲು

Published : Sep 29, 2026, 09:24 PM IST
Wedding Gift Tax

ಸಾರಾಂಶ

Viral News: ಮದುವೆಯಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರು ನೀಡಿದ ಹಣದ ಕವರ್’ನಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿ ಹಣ ಸಂಗ್ರಹವಾಗಿತ್ತು. ಆದರೆ ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದ್ದಕ್ಕೆ ಖುಷಿಪಡುವ ಬದಲು ಸರ್ಕಾರಿ ನೌಕರ ವರ ಕಂಗಾಲಾಗಿದ್ದಾನೆ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.

ಸರ್ಕಾರಿ ನೌಕರನ ಮದುವೆಗೆ ಸಿಕ್ಕಿದ್ದು ಬರೋಬ್ಬರಿ 10 ಲಕ್ಷ ರೂ.

ಮದುವೆ ಸಮಾರಂಭಗಳಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರು ವರ-ವಧುವಿಗೆ ಉಡುಗೊರೆಯ ರೂಪದಲ್ಲಿ ಹಣ ನೀಡುವುದು ಸಾಮಾನ್ಯ. ಕೆಲವರು 500 ರೂಪಾಯಿ ನೀಡಿದರೆ, ಇನ್ನು ಕೆಲವರು 2,000 ರೂಪಾಯಿ ನೀಡುತ್ತಾರೆ. ಆಪ್ತರು ಹಾಗೂ ಹತ್ತಿರದ ಕುಟುಂಬದವರು ಇನ್ನು ಹೆಚ್ಚಿನ ದುಡ್ಡು ಕೊಡುತ್ತಾರೆ. ಇದೇ ರೀತಿಯ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಪೂಜಾ ಎಂಬ X ಬಳಕೆದಾರರು ಹಂಚಿಕೊಂಡ ಪೋಸ್ಟ್‌ ಪ್ರಕಾರ, ಅವರ ಸಹೋದರ ಸರ್ಕಾರಿ ನೌಕರರಾಗಿದ್ದು, ಇತ್ತೀಚೆಗೆ ಅವರ ವಿವಾಹ ನಡೆದಿದೆ. ಮದುವೆಗೆ ಸುಮಾರು 110 ಮಂದಿ ಅತಿಥಿಗಳು ಆಗಮಿಸಿದ್ದರು. ಮುಂದೆ ಏನಾಯ್ತು ನೋಡಿ.

ಲಕೋಟೆ ತೆರೆದಾಗ ಶಾಕ್‌ ಕೊಟ್ಟ 10 ಲಕ್ಷ ರೂ.

ಮದುವೆ ಮುಗಿದು ಅತಿಥಿಗಳೆಲ್ಲರೂ ತೆರಳಿದ ಬಳಿಕ ಕುಟುಂಬದವರು ಸಿಕ್ಕಂತಹ ಹಣದ ಕವರ್ ತೆರೆದು ಹಣ ಎಣಿಸಲು ಆರಂಭಿಸಿದ್ದಾರೆ. ಒಂದೊಂದೇ ಲಕೋಟೆ ತೆರೆದಂತೆ ಹಣದ ಮೊತ್ತ ಹೆಚ್ಚಾಗುತ್ತಾ ಹೋಗಿದ್ದು, ಕೊನೆಗೆ ಒಟ್ಟು 10 ಲಕ್ಷ ರೂಪಾಯಿ ಕ್ಯಾಶ್‌ ಸಂಗ್ರಹವಾಗಿರುವುದು ಗೊತ್ತಾಗಿದೆ. ಸಾಮಾನ್ಯವಾಗಿ ಮದುವೆಯ ಉಡುಗೊರೆಯಾಗಿ ಆಗಿ ಇಷ್ಟು ಹಣ ಸಿಕ್ಕರೆ ಕುಟುಂಬಕ್ಕೆ ಸಂತೋಷವಾಗಬೇಕು. ಆದರೆ ಸರ್ಕಾರಿ ನೌಕರನಾಗಿರುವ ವರನಿಗೆ ಮಾತ್ರ ಬೇರೆ ರೀತಿಯ ಆತಂಕ ಶುರುವಾಗಿದೆ. ಈ ಹಣದ ಬಗ್ಗೆ ಮುಂದೆ ಇನ್ ಕಂ ಟ್ಯಾಕ್ಸ್ ಇಲಾಖೆಯಿಂದ ನೋಟಿಸ್‌ ಬರಬಹುದೇ? ತೆರಿಗೆ ಅಧಿಕಾರಿಗಳು ಹಣದ ಮೂಲವನ್ನು ಪ್ರಶ್ನಿಸಿದರೆ ಏನು ಮಾಡಬೇಕು? ಎಂಬ ಚಿಂತೆ ಕಾಡತೊಡಗಿದೆ.

ಮದುವೆ ಶಗುನ್‌ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕಾ?

ಮದುವೆಯ ಸಂದರ್ಭದಲ್ಲಿ ವರ ಅಥವಾ ವಧುವಿಗೆ ನೀಡುವ ಉಡುಗೊರೆಗಳ ಬಗ್ಗೆ ಆದಾಯ ತೆರಿಗೆ ಕಾನೂನಿನಲ್ಲಿ ವಿಶೇಷ ನಿಯಮಗಳಿವೆ. Income Tax Actನ Section 56 ಅಡಿಯಲ್ಲಿ ಮದುವೆಯ ಸಂದರ್ಭದಲ್ಲಿ ವರ-ವಧುವಿಗೆ ದೊರೆಯುವ ಕೆಲವು ಉಡುಗೊರೆಗಳು ತೆರಿಗೆ ವ್ಯಾಪ್ತಿಯಿಂದ ಹೊರಗಿರುತ್ತವೆ. ಅಂದರೆ, ಮದುವೆಯ ಸಂದರ್ಭದಲ್ಲಿ ಸಿಕ್ಕ ಉಡುಗೊರೆ ಹಣ, ಚಿನ್ನ ಅಥವಾ ಬೆಳ್ಳಿ ಸೇರಿದಂತೆ ಕೆಲವು ಉಡುಗೊರೆಗಳಿಗೆ ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ಇಲ್ಲಿ ಮತ್ತೊಂದು ಪ್ರಮುಖ ಅಂಶವಿದೆ. ಮದುವೆ ಉಡುಗೊರೆಗೆ ತೆರಿಗೆ ವಿನಾಯಿತಿ ಇದೆ ಎಂದ ಮಾತ್ರಕ್ಕೆ ದೊಡ್ಡ ಮೊತ್ತದ ನಗದು ವ್ಯವಹಾರಗಳ ಬಗ್ಗೆ ಯಾವುದೇ ನಿಯಮಗಳಿಲ್ಲ ಎಂದರ್ಥವಲ್ಲ.

ಒಂದೇ ವ್ಯಕ್ತಿಯಿಂದ 2 ಲಕ್ಷ ರೂ.ಗಿಂತ ಹೆಚ್ಚು ಕ್ಯಾಶ್‌ ಸಿಕ್ಕರೆ ತೆರಿಗೆ!

ತೆರಿಗೆ ನಿಯಮಗಳ ಪ್ರಕಾರ Section 269ST ಅಡಿಯಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ₹2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದು ಸ್ವೀಕರಿಸುವುದಕ್ಕೆ ನಿರ್ಬಂಧಗಳಿವೆ. ಹೀಗಾಗಿ ಮದುವೆಯ ಉಡುಗೊರೆಯ ಹಣವಾಗಿದ್ದರೂ, ದೊಡ್ಡ ಮೊತ್ತದ ನಗದು ಸ್ವೀಕರಿಸಿದ ಸಂದರ್ಭದಲ್ಲಿ ಹಣ ಯಾರಿಂದ ಬಂದಿದೆ ಮತ್ತು ಯಾವ ಸಂದರ್ಭದಲ್ಲಿದೆ ಎಂಬುದನ್ನು ದಾಖಲಿಸಿಕೊಂಡಿರುವುದು ಮುಖ್ಯ. ಇದರಿಂದ ಮದುವೆಯಲ್ಲಿ ಒಟ್ಟು 10 ಲಕ್ಷ ರೂಪಾಯಿ ಹಣ ಸಿಕ್ಕಿದೆ ಎಂದ ಮಾತ್ರಕ್ಕೆ ಆ ಸಂಪೂರ್ಣ ಮೊತ್ತಕ್ಕೆ ತೆರಿಗೆ ಕಟ್ಟಬೇಕು ಎಂದು ಅರ್ಥವಲ್ಲ. ಆದರೆ ನಗದು ವ್ಯವಹಾರದ ನಿಯಮಗಳನ್ನು ಪ್ರತ್ಯೇಕವಾಗಿ ಗಮನಿಸಬೇಕಾಗುತ್ತದೆ.

ಕವರ್ ಕೊಟ್ಟವರ ಲಿಸ್ಟ್‌ ಇಟ್ಟುಕೊಳ್ಳುವುದು ಉತ್ತಮ

ಇಂತಹ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆಯಾಗಿ ಮದುವೆಯಲ್ಲಿ ಹಣದ ಕವರ್ ನೀಡಿದವರ ವಿವರವನ್ನು ದಾಖಲಿಸಿಕೊಂಡು ಇಟ್ಟುಕೊಳ್ಳುವುದು ಉಪಯುಕ್ತ. ಯಾರಿಂದ ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ಸಾಧ್ಯವಾದಷ್ಟು ಸ್ಪಷ್ಟವಾದ ದಾಖಲೆಗಳನ್ನು ಇಟ್ಟುಕೊಂಡರೆ, ಮುಂದೆ ಯಾವುದೇ ತೆರಿಗೆ ವಿಚಾರಣೆ ಎದುರಾದರೂ ಹಣದ ಮೂಲವನ್ನು ವಿವರಿಸಲು ಸಹಾಯವಾಗಬಹುದು. ಅಂದರೆ, ಮದುವೆಗೆ ಸಿಕ್ಕ ಹಣವನ್ನು ಕೇವಲ ಎಣಿಸಿ ಇಟ್ಟುಕೊಳ್ಳುವುದಕ್ಕಿಂತ, ಯಾರಿಂದ ಎಷ್ಟು ಹಣ ಬಂದಿದೆ ಎಂಬುದರ ದಾಖಲೆ, ಮದುವೆಯ ಆಹ್ವಾನ ಪತ್ರಿಕೆ, ಕಾರ್ಯಕ್ರಮದ ವಿವರಗಳು ಮತ್ತು ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹೆಚ್ಚು ಸುರಕ್ಷಿತ ಕ್ರಮವಾಗಿದೆ.

PREV
Read more Articles on
click me!

Recommended Stories

ಜೀವಮಾನವಿಡೀ ಒಂದು ಹನಿ ನೀರು ಕುಡಿಯದೆ ಬದುಕುವ ಪ್ರಾಣಿ ಯಾವುದು ಗೊತ್ತಾ? ಇದು ಬೀದಿಯಲ್ಲಿರುವ ಮಾಮೂಲಿ ಇಲಿಯಲ್ಲ!
Viral; ಸೌದಿ ಅರೇಬಿಯಾದಲ್ಲಿ ಮರಣದಂಡನೆಗೊಳಗಾದ ಶವ ಕುಟುಂಬಕ್ಕೆ ನೀಡದಿರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ!