ಕೊಡಗಿನಲ್ಲಿ ಜೀಪ್ ರ‍್ಯಾಲಿ ಫನ್: ಗೆದ್ದರೆ ಸಾಲದು, ಸ್ಪೆಷಲ್ ಟಾಸ್ಕ್ ಕೂಡಾ ಇದೆ

Nov 9, 2021, 10:48 AM IST

ಕೊಡಗು(ನ.09): ಹಚ್ಚ ಹಸುರಿನ ಪ್ರಕೃತಿ ಸೌಂದರ್ಯ. ಅದರಲ್ಲಿ ಗುರಿಮುಟ್ಟಲು ಮುನ್ನುತ್ತಿರೋ ಸ್ಪರ್ಧಿಗಳು. ಅದರಲ್ಲೂ ಗದ್ದೆ, ತೋಟದ ಮಧ್ಯೆ ನಿಂತು ಸೆಲ್ಪೀ ಕ್ಲಿಕ್ಕಿಸೋ ಕೆಲಸ. ಇದೇನು ಜೀಪ್ ರ‍್ಯಾಲಿ(Jeep Rally) ಸೆಲ್ಫಿ ಯಾಕೆ ಎನ್ನುವ ಡೌಟ್ ಇದೆಯಾ ? ಇದು ಕೊಡಗಿನ (Kodagu) ಪೊನ್ನಂಪೇಟೆಯಲ್ಲಿ ಆಯೋಜನೆಯಾದ ರ‍್ಯಾಲಿ ವಿಭಿನ್ನ ರ‍್ಯಾಲಿ. ಜಾಲಿಯಾಗಿ ಜೀಪ್ ಓಡಿಸಿದ್ರೆ ಸಾಲದು, ಸ್ಪರ್ಧಿಗಳಿಗೆ ಕೊಟ್ಟ ಟಾಸ್ಕ್ ಕೂಡಾ ಕಂಪ್ಲೀಟ್ ಮಾಡಬೇಕಿತ್ತು.

Deepavali| ಕಾಫಿನಾಡಿನಲ್ಲಿ ಝಗಮಗಿಸುತ್ತಿವೆ ಬಗೆ ಬಗೆಯ ಕ್ಯಾಂಡಲ್‌ಗಳು..!

ರೋಡ್ ಮಧ್ಯೆ ಕರೆಂಟ್ ಕಂಬ, ಗದ್ದೆ, ತೋಟ ಹೀಗೆ ಕೆಲವು ನಿರ್ದೇಶಿಕ ಜಾಗದಲ್ಲಿ ಟಾಸ್ಕ್‌ನಲ್ಲಿ ಕೊಟ್ಟ ಹಾಗೆಯೇ ಸೆಲ್ಫಿ(Selfie) ಕ್ಲಿಕ್ಕಿಸಬೇಕು. ಸಮಯವನ್ನು ನೋಡಿಕೊಂಡು, ಕೊಟ್ಟ ಟಾಸ್ಕ್‌ಗಳನ್ನು ಕಡಿಮೆ ಅವಧಿಯಲ್ಲಿ ಮುಗಿಸಿಕೊಂಡು ಬಂದವರು ವಿಜೇತರು. ಬಹಳಷ್ಟು ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಹುಮಾನಕ್ಕಿಂತ ಹೆಚ್ಚಾಗಿ ಸ್ಪರ್ಧಿಗಳು ಇದನ್ನು ಎಂಜಾಯ್ ಮಾಡಿದ್ದಾರೆ.