Deepavali| ಕಾಫಿನಾಡಿನಲ್ಲಿ ಝಗಮಗಿಸುತ್ತಿವೆ ಬಗೆ ಬಗೆಯ ಕ್ಯಾಂಡಲ್‌ಗಳು..!
* ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ, ಎಲ್ಲೆಡೆ ದೀಪಗಳದ್ದೇ ದರ್ಬಾರ್
* ಸಾಂಪ್ರದಾಯಿಕ ಹಣತೆ ಜತೆಗೆ ಕ್ಯಾಂಡಲ್‍ಗಳಿಗೆ ಹೆಚ್ಚಿದ ಬೇಡಿಕೆ
* ಒಂದಕ್ಕಿಂದ ಒಂದು ಚಂದ, ನೀರಿನಲ್ಲಿ ತೇಲುವ ಫ್ಲವರ್ ಕ್ಯಾಂಡಲ್
ಕೊಡಗು(ನ.06): ದೀಪಾವಳಿ(Deepavali) ಹಬ್ಬ ಅಂದ್ರೆ ಅಲ್ಲಿ ದೀಪಗಳಿರಲೇ ಬೇಕು. ಇತ್ತೀಚಿನ ದಿನದಲ್ಲಿ ಸಾಂಪ್ರದಾಯಿಕ ಹಣತೆಗಳ ಜೊತೆಗೆ ಬಗೆ ಬಗೆಯ ದೀಪಾವಳಿ ಕ್ಯಾಂಡಲ್‍ಗಳು(Candle) ಸ್ಥಾನ ಪಡೆದುಕೊಳ್ಳುತ್ತಿದೆ. ಅತ್ಯಾಕರ್ಷಕ ಕ್ಯಾಂಡಲ್‍ಗಳಿಗೆ ಬೇಡಿಕೆ ಕೂಡಾ ಹೆಚ್ಚಾಗಿದ್ದು, ಕೊಡಗಿನಲ್ಲಿ(Kodagu) ಮನಸೂರೆಗೊಳ್ಳುತ್ತಿರುವ ಕ್ಯಾಂಡಲ್ ಕುರಿತ ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ.
ನೀರಿನಲ್ಲಿ ತೇಲುವ ಫ್ಲವರ್ ಕ್ಯಾಂಡಲ್, ಶಂಕದೊಳಗೆ ಉರಿಯುತ್ತಿರುವ ಲಿಕ್ವಿಡ್ ಕ್ಯಾಂಡಲ್, ಕಾಫಿಯ ಪರಿಮಳ ಸೂಸುವ ಕಾಫಿ ಕ್ಯಾಂಡಲ್, ಲ್ಯಾಟಿನ್-ಸ್ಟ್ರಾಬರಿ ಹೀಗೆ ನೋಡುತ್ತಾ ಹೋದರೆ ಒಂದಾ ಎರಡಾ. ಇವೆಲ್ಲಾ ಕಾಫಿ ನಾಡು ಕೊಡಗು ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಗಾಗಿ ಸಜ್ಜಾಗಿರುವ ಮೇಣದ ಬತ್ತಿಗಳ ಝಲಕ್. ಕತ್ತಲು ಮರೆಯಾಗಿ ಹೊಸ ಬೆಳಕು ಮೂಡಲಿ ಎಂದು ಬೇಡಿಕೊಂಡು ದೀಪ ಹಚ್ಚುತ್ತಾರೆ. ಅದಕ್ಕಾಗಿ ಹಣತೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವಂತೆ ಬಗೆಬಗೆಯ ದೀಪಾವಳಿ ಮೇಣದ ಬತ್ತಿಗಳು ಕೂಡ ಜನರನ್ನು ಆಕರ್ಷಣೆ ಮಾಡುತ್ತಿವೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೈಕೇರಿ ಗ್ರಾಮದಲ್ಲಿ ತಯಾರಾಗುತ್ತಿರುವ ಮೇಣದ ಬತ್ತಿಗಳು ವಿಭಿನ್ನ ಹಾಗೂ ವಿಶೇಷವಾಗಿವೆ. ಒಂದಕ್ಕಿಂದ ಒಂದು ಚಂದ ಎಂಬಂತೆ ವೆರೈಟಿ ವೆರೈಟಿ ಕ್ಯಾಂಡಲ್ಗಳು ಕಣ್ಮನ ಸೆಳೆಯುತ್ತಿವೆ. ಈ ಬಣ್ಣ ಬಣ್ಣದ ಮೇಣದಬತ್ತಿಗಳ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಬಣ್ಣದ ಕ್ಯಾಂಡಲ್ ಹಚ್ಚಿ ಹಬ್ಬ ಆಚರಿಸೋದಂದ್ರೆ ವಿಶೇಷ ವಿವರಣೆ ಬೇಕಾ...
ದೀಪಾವಳಿಯಂದು ಬಲೀಂದ್ರನನ್ನು ಯಾಕಾಗಿ ಸ್ವಾಗತಿಸಲಾಗುತ್ತದೆ.? ಏನಿದರ ಮಹತ್ವ.?