Kodagu: ಹೈಟೆನ್ಶನ್‌ ಯೋಜನೆಯಿಂದ ರೈತರಿಗೆ ಟೆನ್ಷನ್, ಪ್ರಶ್ನಿಸದ್ರೆ ಕಾನೂನು ಕ್ರಮ..!

May 11, 2022, 3:08 PM IST

ಕೊಡಗು (Kodagu) ಜಿಲ್ಲೆಯಲ್ಲಿ ಕೆಪಿಟಿಸಿಎಲ್ (KPTCL) ಮತ್ತು ಜನರ ಮಧ್ಯೆ ನೇರ ಸಂಘರ್ಷ ಏರ್ಪಟ್ಟಿದೆ. ಕೆಪಿಟಿಸಿಎಲ್ ವಿರಾಜಪೇಟೆ ತಾಲ್ಲೂಕಿನಿಂದ ಮಡಿಕೇರಿ ತಾಲ್ಲೂಕಿಗೆ 66 ಕಿಲೋವ್ಯಾಟ್ ಸಾಮರ್ಥ್ಯದ ಹೈಟೆನ್ಶ್ಯನ್ (High Tension Wire) ವಿದ್ಯುತ್ ಮಾರ್ಗ ಎಳೆಯಲು ಮುಂದಾಗಿದೆ. 

ಇದಕ್ಕೆ ಈಗಾಗಲೇ ವಿರಾಜಪೇಟೆಯಿಂದ ಮಡಿಕೇರಿವರೆಗೆ 200 ಬೃಹತ್ ಟವರ್‌ಗಳನ್ನು ಅಳವಡಿಸುವ ಕಾಮಗಾರಿ ಆರಂಭಿಸಿಬಿಟ್ಟಿದೆ. ಆದ್ರೆ ಬಹುತೇಕ ರೈತರಿಗೆ ಇದರ ಅರಿವೇ ಇಲ್ಲ. ರೈತರಿಗೆ ಅರಿವೇ ಇಲ್ಲದಂತೆ ಏಕಪಕ್ಷೀಯವಾಗಿ ಭೂ ಸ್ವಾಧೀನಕ್ಕೆ ಮುಂದಾಗಿದೆ. ತಮ್ಮ ಜಮೀನು ಕಳೆದುಕೊಳ್ಳುವ ರೈತರಿಗೆ ಏನು ಪರಿಹಾರ ಸಿಗಲಿದೆ ಎಂಬುದು ಕೂಡ ಗೊತ್ತಿಲ್ಲ.

3 ವರ್ಷವಾದರೂ ಈಡೇರದ ಭರವಸೆ, ಕೊಡಗಿಗೆ ಹೈಟೆಕ್ ಆಸ್ಪತ್ರೆ ಇನ್ನೂ ಮರೀಚಿಕೆ!

 ಒಂದು ಟವರ್ ಕೆಳಗೆ 18 ಮೀಟರ್ ಅಗಲದಲ್ಲಿ ಎಲ್ಲಾ ಗಿಡ ಮರಗಳನ್ನ ಕಡಿಯಲಾಗುತ್ತದೆ. ಒಂದು ಟವರ್ನಿಂದ ಮತ್ತೊಂದು ಟವರ್‌ವರೆಗೆ ಕನಿಷ್ಟ 100 ಮರಗಳು, 200ಕ್ಕೂ ಅಧಿಕ ಅಡಿಕೆ ಮೆಣಸು ಬಳ್ಳಿಗಳು ನಾಶವಾಗುತ್ತವೆ. ಇದು ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ. ಇನ್ನು ಈ ಮರಗಿಡಗಳಿಗೆ ಕೆಪಿಟಿಸಿಎಲ್ ಮಾತ್ರ ಚಿಕ್ಕಾಸಿನ ಪರಿಹಾರ ನೀಡುತ್ತದೆಯಂತೆ. ಅದೂ ಕೂಡ ಇನ್ನೂ ಘೋಷಣೆಯ ಹಂತದಲ್ಲಿದೆ. ಆ ಪರಿಹಾರ ಕೈಗೆ ಸಿಗುತ್ತೋ ಇಲ್ಲವೋ ಎಂಬುದು ಗ್ಯಾರೆಂಟಿ ಇಲ್ಲ. 

ಹೈಕೋರ್ಟ್ ತೀರ್ಪಿನ ಪ್ರಕಾರ ಇಂತಹ ಯೋಜನೆಯಲ್ಲಿ ಸ್ವಾಧಿನಪಡಿಸಿಕೊಳ್ಳುವ ರೈತರ ಜಮೀನಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕು. ಆದ್ರೆ ಕೆಪಿಟಿಸಿಎಲ್ ಮಾತ್ರ ಕೇವಲ ಶೇಕಡಾ 85 ರಷ್ಟು ಪರಿಹಾರ ನೀಡುವುದಾಗಿ ಹೇಳುತ್ತಿದೆಯಂತೆ.  ಇದು ಸ್ಥಳಿಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದೂ ಅಲ್ಲದೆ ತಮ್ಮ ಜಮೀನಿನಲ್ಲಿ ಹೀಗೆ ಕಾಫಿ, ಕಾಳು ಮೆಣಸು ಗಿಡಗಳು ಮರಗಳು ಸರ್ವ ನಾಶವಾಗ್ತಾ ಇದ್ರೂ ಅದನ್ನು ಪ್ರಶ್ನಿಸುವ ಹಾಗಿಲ್ಲ. ಯಾಕಂದ್ರೆ ಪ್ರಶ್ನಿಸಿದ್ರೆ ಕೆಪಿಟಿಸಿಎಲ್ ಅಧಿಕಾರಿಗಳು ಕಾನೂನು ಕ್ರಮದ ಬೆದರಿಕೆ ಹಾಕುತ್ತಿದ್ದಾರಂತೆ! ಅಲ್ಲದೆ, ತೋಟದೊಳಗೆ ಟವರ್ ಅಳವಡಿಕೆಗೆ ಬೇಕಾಬಿಟ್ಟಿ ಜೆಸಿಬಿ ಓಡಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

8 ವರ್ಷವಾದರೂ ಮುಗಿದಿಲ್ಲ ಕಾಮಗಾರಿ: ಸೋಮವಾರಪೇಟೆ ಹಾಕಿ ಕ್ರೀಡಾಂಗಣ ಈಗ ಪುಂಡರ ತಾಣ!

ಯೋಜನೆ ಕೆಪಿಟಿಸಿಎಲ್ ನದ್ದಾದರೂ ಭೂ ಸ್ವಾಧಿನ ಅಧಿಕಾರವಿರುವುದು ಜಿಲ್ಲಾಡಳಿತಕ್ಕೆ. ಹಾಗಾಗಿ ಜಿಲ್ಲಾಡಳಿತ ಇನ್ನಾದ್ರೂ ಜಿಲ್ಲೆಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸಿಲಿ, ಇಲ್ಲಾಂದ್ರೆ ಈ ಯೋಜನೆ ವಿರುದ್ಧ ರೈತರು ರೊಚ್ಚಿಗೇಳಬೇಕು ಅಂತ ಎಚ್ಚರಿಕೆ ನೀಡಿದ್ದಾರೆ.