ತುಮಕೂರು: ಹಳ್ಳ ಹಿಡಿದ ಎಮರ್ಜೆನ್ಸಿ ಕಾಲ್‌ ಬಾಕ್ಸ್‌, ಬಹುತೇಕರಿಗೆ ಮಾಹಿತಿಯೇ ಇಲ್ಲ!

May 22, 2022, 3:06 PM IST

ತುಮಕೂರು ಸ್ಮಾರ್ಟ್‌ ಸಿಟಿ (Tumakuru Smart City) ನಿರ್ಮಿಸಿರುವ ಎಮರ್ಜೆನ್ಸಿ ಕಾಲ್‌ ಬಾಕ್ಸ್‌ (Emergency Call Box) ಯೋಜನೆ ಹಳ್ಳ ಹಿಡಿದೆ. ಸಾರ್ವಜನಿಕರಿಗೆ ಹಾಗೂ ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಶುರುವಾದ ಈ ಯೋಜನೆಗೆ ಜನರ ಸ್ಪಂದನೆ ಇಲ್ಲದಂತಾಗಿದೆ. ನಗರದ ತುಂಬ ಎಮರ್ಜೆನ್ಸಿ ಕಾಲ್‌ ಬಾಕ್ಸ್‌ ಆಳವಡಿಸಿದ್ರು. ಜನರು ಬಳಕೆ ಮಾಡದೆ ನಿರಾಸಕ್ತಿ ತೋರಿಸಿದ್ದಾರೆ.

ತುಮಕೂರು ನಗರದ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರ ವ್ಯಾಪ್ತಿಯ 41 ಪ್ರದೇಶಗಳಲ್ಲಿ ಪಬ್ಲಿಕ್ ಅನೌನ್ಸ್‌ಮೆಂಟ್‌ ಮತ್ತು ಎಮರ್ಜೆನ್ಸಿ ಕಾಲ್ ಬಾಕ್ಸ್ ಅಳವಡಿಸಲಾಗಿದ್ದರೂ ನಿರುಪಯುಕ್ತ ಎನಿಸಿದೆ . ಸಾರಿಗೆ, ಅಗ್ನಿಶಾಮಕ , ಜಲಮಂಡಳಿ , ಪೊಲೀಸ್ , ಇ - ಆಡಳಿತ ಸೇರಿ ವಿವಿಧ ಕ್ರಿಯಾತ್ಮಕ ಇಲಾಖೆಗಳನ್ನೊಳಗೊಂಡಂತೆ ಏಕೈಕ ವೇದಿಕೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವುದು ಈ ತುರ್ತು ಸಹಾಯವಾಣಿ ಉದ್ದೇಶವಾಗಿದೆ . ಸಾರ್ವಜನಿಕರು ಅಪಘಾತ , ಆಂಬುಲೆನ್ಸ್ ಸೇವೆ , ಪೊಲೀಸ್ 112 ಸೇವೆ , ಕಳವು , ಆರೋಗ್ಯ ಸೇವೆ , ಸಂಚಾರಿ ನಿಯಮ ಉಲ್ಲಂಘನೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ  ಕಾಲ್ ಬಾಕ್ಸ್ ಉಪಯೋಗಿಸಬಹುದು .

ಕೆನಡಾ ಸಂಸತ್ತಲ್ಲಿ ಸಂಸದ ಚಂದ್ರ ಕನ್ನಡ ಭಾಷಣ: ವಿದೇಶದ ಸಂಸತ್ತಿನಲ್ಲಿ ಕನ್ನಡ ಭಾಷಣ ಇದೇ ಮೊದಲು

ರಸ್ತೆ ಅಪಘಾತ ಸೇರಿ ಮತ್ತಿತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಮೂಲಕ ಜೀವವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ ಅಗತ್ಯ ನೆರವು ದೊರೆಯದೆ ಗಾಯಾಳುಗಳು ಸಾವನ್ನಪ್ಪಿರುವ ಎಷ್ಟೋ ನಿದರ್ಶನಗಳಿವೆ . ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಆಂಬುಲೆನ್ಸ್ ಸೇವೆ , ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯುವ ಮೂಲಕ ಜೀವನ್ಮರಣದ ನಡುವೆ ಹೋರಾಡುತ್ತಿರುವವರಿಗೆ ಮರು ಜೀವ ನೀಡಲು ಸಾಧ್ಯ ಮಾಡಬಹುದು . ಆದರೆ ಇಂತಹ ಮಹತ್ವದ ಯೋಜನೆ ಹಳ್ಳ ಹಿಡಿದಿದೆ.  ತುಮಕೂರು ವಿಧಾನ ಪರಿಷತ್‌ ಸದಸ್ಯ ಆರ್.ರಾಜೇಂದ್ರ  ಈ ಎಮರ್ಜೆನ್ಸಿ ಕಾಲ್ಸ್‌ ಬಾಕ್ಸ್‌ ನಾ ರಿಯಾಲಿಟಿ ಚೆಕ್‌ ನಡೆಸಿದ್ರು. 

ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಸುವ ವಿಧಾನ, ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್‌ನಲ್ಲಿರುವ ಕೆಂಪು ಗುಂಡಿ ಒತ್ತಿ ಕರೆ ಮಾಡಬೇಕು . ತುರ್ತು ಸಹಾಯವಾಣಿಯಲ್ಲಿ  ಕ್ಯಾಮರಾ ಅಳವಡಿಸಲಾಗಿದ್ದು , ಕೆಂಪು ಗುಂಡಿ ಒತ್ತಿದ ಕೂಡಲೇ ಸ್ಮಾರ್ಟ್ ಸಿಟಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ವೀಡಿಯೋ ಕರೆ ಬರುತ್ತದೆ . ನಂತರ ಕಮ್ಯಾಂಡ್ ಸೆಂಟರ್ ಆಪರೇಟರ್‌ಗಳು ಸ್ವೀಕೃತ ಕರೆ ಆಧರಿಸಿ ನಕಲಿ ಕರೆಯೋ ಅಥವಾ ಅಸಲೀ ಕರೆಯೋ ಎಂದು ತಿಳಿದು ಅಗತ್ಯ ಸೇವೆ ನೀಡಲಿದ್ದಾರೆ.

ತುಮಕೂರು: ಬದುಕಿದ್ದವರನ್ನೇ ಸಾಯಿಸಿ 4,12 ಎಕರೆ ಜಮೀನು ಗುಳುಂ, ಯೋಧನಿಗೆ ದೋಖಾ

ತುಮಕೂರು ನಗರದಲ್ಲಿ 2020 ರಲ್ಲಿ ಎಮರ್ಜೆನ್ಸಿ ಕಾಲ್ ಬಾಕ್ಸ್  ಅಳವಡಿಸಲಾಗಿದ್ದರೂ ಈವರೆಗೂ 300 ಕರೆ ಮಾತ್ರ ಸ್ವೀಕರಿಸಿರುವುದು ಯೋಜನೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ . ದಿನಪೂರ್ತಿ ಕಾರ್ಯನಿರ್ವಹಿಸುವ ಕಮಾಂಡ್ ಅಂಡ್ ಕಂಟ್ರೋಲ್‌ ಸೆಂಟರ್‌ನಲ್ಲಿ ಮಹಾನಗರ ಪಾಲಿಕೆ , ಪೊಲೀಸ್ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ 38 ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ . ಬಹಳಷ್ಟು ಜನರಿಗೆ ಎಮರ್ಜೆನ್ಸಿ ಕಾಲ್ ಬಾಕ್ಸ್ ಬಳಕೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಯೋಜನೆ ಹಳ್ಳಹಿಡಿಯಲು ಕಾರಣವಾಗಿದೆ .