ತುಮಕೂರು: ಬದುಕಿದ್ದವರನ್ನೇ ಸಾಯಿಸಿ 4.12 ಎಕರೆ ಜಮೀನು ಗುಳುಂ, ಯೋಧನಿಗೆ ದೋಖಾ
- ಸಂಬಂಧಿಯೊಬ್ಬರಿಂದ ಯೋಧರ ಕುಟುಂಬಕ್ಕೆ ದೋಖಾ
- ಬದುಕಿದ್ದವರನ್ನೇ ಸಾಯಿಸಿ 4.12 ಎಕರೆ ಜಮೀನು ಗುಳುಂ
- ನ್ಯಾಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪ್ರಯೋಜನ ಇಲ್ಲ!
- ಮಾಜಿ ಸೈನಿಕರ ಕುಟುಂಬಕ್ಕೆ ನಿವೃತ್ತ ಯೋಧರ ಸಂಘ ಸಾಥ್
ದೇಶ ಕಾಯೋ ಯೋಧರು (Soldier) ಅಂದ್ರೆ ಅವರಿಗೆ ಆದ ಘನತೆ ಗೌರವ ಇದೆ. ಆದ್ರೆ ಆ ಯೋಧರ ಕುಟುಂಬ ಈಗ ತಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಕುಣಿಗಲ್ (Kunigal)ನಿವಾಸಿಯಾದ ಚಿಕ್ಕಣ್ಣ ಮಾಜಿ ಸೈನಿಕರಾಗಿದ್ದು, ಇನ್ನು ಚಿಕ್ಕಣ್ಣನವರ ಪತ್ನಿ ಲೋಲಾಕ್ಷಮ್ಮಗೆ ಕುಣಿಗಲ್ ತಾಲ್ಲೂಕಿನ ಕೂತಾರಹಳ್ಳಿ ಸರ್ವೇ ನಂ.40/1 ರಲ್ಲಿ 4.5 ಎಕರೆ ಪಿತ್ರಾರ್ಜಿತ ಜಮೀನು ದಾನವಾಗಿ ಬಂದಿತ್ತು. ಸಂಬಂಧಿಕನೊಬ್ಬ ಆ ಜಮೀನಿನ ದಾಖಲೆಗಳನ್ನ ನಕಲಿ ದಾಖಲೆ ಸೃಷ್ಟಿಸಿ ರಾಜಕಾರಣಿಯೊಬ್ಬರ ಸಂಬಂಧಿಗೆ ಆಸ್ತಿಯನ್ನ ಮಾರಾಟ ಮಾಡಿದ್ದಾನೆ.
Tumakuru ತಾಯಿ ಓದಿದ ಶಾಲೆಗೆ ಉದ್ಯಮಿ ಕಟ್ಟಿಸಿದ ಕಟ್ಟಡ ಲೋಕಾರ್ಪಣೆ
ಇನ್ನು ಮಾಜಿ ಸೈನಿಕ ಚಿಕ್ಕಣ್ಣಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗ ಪ್ರಕಾಶ್, ಎರಡನೇ ಮಗ ಧನಂಜಯ ಹಾಲಿ ಇಬ್ಬರು ಮಕ್ಕಳು ಸೈನಿಕರಾಗಿ ಕೆಲಸ ಮಾಡ್ತಿದ್ದಾರೆ. ಅವರು ಬದುಕಿರುವಾಗಲೇ ಚಿಕ್ಕಣ್ಣನ ಸಂಬಂಧಿ ಶಿವರಾಮ್ ಎಂಬಾತ ಚಿಕ್ಕಣ್ಣನ ಕುಟುಂಬ ಸಾವನ್ನಪ್ಪಿದ್ದಾರೆ ಅಂತ ನಕಲಿ ದಾಖಲೆ ಸೃಷ್ಟಿಸಿ ಶಾಸಕರ ಸಂಬಂಧಿಯೊಬ್ಬರಿಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನನ್ನ ಮಾರಾಟ ಮಾಡಿ ಹಣ ಲಪಾಟಯಿಸಿದ್ದಾನೆ.
ಚಾಮರಾಜನಗರ: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಆಪರೇಷನ್ ಸ್ಟಾಪ್!
ಇನ್ನು ಈ ಸಂಬಂಧ ಮಾಜಿ ಸೈನಿಕ ಕುಟುಂಬ ನಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಲವು ಬಾರಿ ಸರ್ಕಾರಿ ಕಛೇರಿಗಳಿಗೆ ಅಲೆದು ತಮಗೆ ನ್ಯಾಯ ಕೊಡಿಸಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಅಧಿಕಾರಿಗಳಿಂದ ಆ ಯೋಧರ ಕುಟುಂಬಕ್ಕೆ ನ್ಯಾಯ ಸೀಗದೇ ಅಂತಂತ್ರರಾಗಿದ್ದಾರೆ. ಇದರಿಂದ ಬೇಸತ್ತ ಮಾಜಿ ಸೈನಿಕರ ಕುಟುಂಬಕ್ಕೆ ನಿವೃತ್ತ ಯೋಧರ ಸಂಘ ಸಾಥ್ ಕೊಟ್ಟಿದ್ದು ನೊಂದ ಆ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಮಾಡಿದ್ದಾರೆ.