Jun 18, 2020, 4:24 PM IST
ಬಳ್ಳಾರಿ(ಜೂ.18): ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಪ್ರಸಿದ್ಧ ಘೋಷವಾಖ್ಯೆವನ್ನು ಬಳ್ಳಾರಿ ರೈತರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಲಡಾಖ್ ಗಡಿಯಲ್ಲಿ ಮಣಿದ ವೀರ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ನೆತ್ತರು ಹರಿದಿದೆ. ಜೂನ್ 15ರ ತಡರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಕೊನೆಯುಸಿರೆಳೆದಿದ್ದರು. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸೈನಿಕರಿಗೆ ಸ್ಥೈರ್ಯ ತುಂಬುವ ಕೆಲಸ ರೈತರಿಂದಾಗಿದೆ.
ಪೆಸಿಫಿಕ್ ಮಹಾಸಾಗರಕ್ಕೆ 3 ಅಣ್ವಸ್ತ್ರ ಯುದ್ಧ ಹಡಗು ಕಳುಹಿಸಿದ ಅಮೆರಿಕ..!
ಹೌದು, ಬಳ್ಳಾರಿಯ ರೈತರು ಹೊಲದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದರು. ಈ ವೇಳೆ ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ರೈತರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಸೈನಿಕರು ಗಡಿಯಲ್ಲಿ ನಾವು ಹೊಲದಲ್ಲಿ ದುಡಿಯುತ್ತೇವೆ. ನಮಗಾಗಿ ಮೃತಪಟ್ಟ ಯೋಧರಿಗೊಂದು ನಮನ ಎಂದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.