Coronavirus Karnataka
Mar 31, 2020, 7:47 PM IST
ಮೈಸೂರು(ಮಾ.31): ಪೊಲೀಸ್ ಜೀಪ್‌ಗೆ ಡೀಸೆಲ್ ಇಲ್ಲ ಎಂದಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ನಂಜನಗೂಡು ಮಹಿಳಾ PSI ಯಾಸ್ಮೀನ್ ತಾಜ್ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೇಫ್ಟಿ ಡ್ರೆಸ್‌ನಲ್ಲಿ ಮೈಸೂರಿನಿಂದ ಕೊರೋನಾ ಬಗ್ಗೆ ಸಾಕ್ಷಾತ್ ವರದಿ
ಇದಷ್ಟೇ ಅಲ್ಲದೇ ಬಂಕ್‌ಗೆ ಬಂದ ಗ್ರಾಹಕರ ಮೇಲೂ ಮನಬಂದಂತೆ ಥಳಿಸಿದ್ದಾರೆ. ಒಂದು ವೇಳೆ ಯಾರಿಗಾದ್ರೂ ಪೆಟ್ರೋಲ್ ಕೊಟ್ರೆ ಬಂಕ್ ಸುಟ್ಟು ಹಾಕ್ತೇನೆ ಎಂದು ಆವಾಜ್ ಹಾಕಿದ್ದಾರೆ. ಆರಕ್ಷಕರ ಈ ನಡೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಲಾಕ್‌ಡೌನ್ ನಡುವೆಯೂ ಮದ್ಯ ಲಭ್ಯ! ಗುರುವೇ ಇದೆಂಥಾ ಐಡಿಯಾ
ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ನಂಜನಗೂಡಿನ ಪಿಎಸ್‌ಐ ಏನೆಲ್ಲಾ ಮಾಡಿದ್ರು ಅನ್ನೋದನ್ನು ನೀವೂ ಒಮ್ಮೆ ನೋಡಿ ಬಿಡಿ