ಸುಮಾರು 500 ವರ್ಷ ಹಳೇ ಗುಡಿಗೆ 1 ಕೋಟಿ ವೆಚ್ಚದಲ್ಲಿ 2 ಕೆಜಿ ಚಿನ್ನದಲ್ಲಿ ಚಾವಣಿ| ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು, ಇದೀಗ ಅಲ್ಲಿನ ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಮಾಡನ್ನು ನಿರ್ಮಿಸಿ ಸಮರ್ಪಿಸುವ ಅಪೂರ್ವ ಯೋಜನೆ ಕೈಗೆತ್ತಿಕೊಂಡಿದ್ದಾರೆ| ಈ ಯೋಜನೆಗೆ ಸುಮಾರು 1 ಕೋಟಿ ವೆಚ್ಚವಾಗಲಿದೆ|
ಕೃಷ್ಣನ ಗರ್ಭಗುಡಿ ಮುಂಭಾಗದಲ್ಲಿ ಬಲಪಾಶ್ರ್ವದಲ್ಲಿರುವ ಈ ಮುಖ್ಯಪ್ರಾಣ ದೇವರ ಗುಡಿಯ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿದೆ| ಅದರ ನವೀಕರಣ ಕಾರ್ಯವನ್ನು ನಡೆಸಲಾಗಿದೆ|
ಉಡುಪಿ(ಅ.10): ಉಡುಪಿ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋಟಿ ವೆಚ್ಚದಲ್ಲಿ ಚಿನ್ನದ ಮಾಡು ನಿರ್ಮಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು, ಇದೀಗ ಅಲ್ಲಿನ ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಮಾಡನ್ನು ನಿರ್ಮಿಸಿ ಸಮರ್ಪಿಸುವ ಅಪೂರ್ವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಗೆ ಸುಮಾರು 1 ಕೋಟಿ ವೆಚ್ಚವಾಗಲಿದೆ.
ಕೃಷ್ಣನ ಗರ್ಭಗುಡಿ ಮುಂಭಾಗದಲ್ಲಿ ಬಲಪಾಶ್ರ್ವದಲ್ಲಿರುವ ಈ ಮುಖ್ಯಪ್ರಾಣ ದೇವರ ಗುಡಿಯ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅದರ ನವೀಕರಣ ಕಾರ್ಯವನ್ನು ನಡೆಸಲಾಗಿದೆ. ಈವರೆಗೆ ಗುಡಿಯ ಮಣ್ಣಿನ ಗೋಡೆ ಮೇಲೆ ಮರದ ಹಲಗೆಗಳನ್ನು ಅಳವಡಿಸಲಾಗಿತ್ತು. ಅದನ್ನು ತೆಗೆದು ಶಿಲೆಕಲ್ಲಿನ ಗೋಡೆ ನಿರ್ಮಿಸಿ ಅದಕ್ಕೆ ಮರದ ದಳಿಗಳನ್ನು ಅಳವಡಿಸಲಾಗಿದೆ. ಇದಕ್ಕೆ ಸುಮಾರು 10 ಲಕ್ಷ ವೆಚ್ಚವಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾರ್ಕಳದಲ್ಲಿ ಶಿಲೆಕಲ್ಲುಗಳ ಕೆತ್ತನೆ ನಡೆಸಲಾಗಿದ್ದು, ಹಗಲಿನಲ್ಲಿ ಭಕ್ತರ ದರ್ಶನಕ್ಕೆ ತೊಂದರೆಯಾಗದಂತೆ, 10 ಜನ ಶಿಲ್ಪಿಗಳು ರಾತ್ರಿ ಹೊತ್ತಿನಲ್ಲಿ ಗೋಡೆಗೆ ಕಲ್ಲಿನ ಜೋಡಣೆ ಮುಗಿಸಿದ್ದಾರೆ. ಈವರೆಗೆ ಗುಡಿಯೊಳಗೆ ಸ್ಥಳವಾಕಾಶವೂ ಕಡಿಮೆ ಇದ್ದು, ಶ್ರೀಗಳಿಗೆ ನಿತ್ಯ ಪೂಜೆಗೆ ಕಷ್ಟವಾಗುತ್ತಿತ್ತು. ಇದೀಗ ನವೀಕರಣದಿಂದ ಒಳಾವರಣ ವಿಶಾಲವಾಗಿದೆ.
ಮುಂದಿನ ಹಂತವಾಗಿ ಭಕ್ತರ ಮನವಿಯಂತೆ ಶ್ರೀಗಳು ಮರದ 60 ಚದರಡಿ ವಿಸ್ತೀರ್ಣದ ಮೇಲ್ಛಾವಣಿಗೆ ಬಂಗಾರದ ಹೊದಿಕೆ ನಿರ್ಮಿಸುವುದಕ್ಕೆ ಶ್ರೀಗಳು ಸಂಕಲ್ಪಿಸಿದ್ದಾರೆ. ಅದಕ್ಕೆ 2 ಕೆಜಿ ಚಿನ್ನದ ಅವಶ್ಯಕತೆ ಇದ್ದು, 1 ಕೋಟಿ ರು. ತಗಲುತ್ತದೆ ಎಂದು ಅಂದಾಜಿಸಲಾಗಿದೆ.