ಮದ್ಯದಂಗಡಿಗೆ ದೇವರ ಹೆಸರು ಬೇಡ, ಕಾರಣ ಕೊಟ್ಟ ಪೂಜಾರಿ!

By Web Desk  |  First Published Nov 9, 2019, 7:40 PM IST

ಉಡುಪಿಯಲ್ಲಿ ಮಾತನಾಡಿದ ಮುಜರಾಯಿ ಸಚಿವ/ ಅಯೋಧ್ಯೆ ತೀರ್ಪಿನ ಬಗ್ಗೆ ಪ್ರತಿಕ್ರಿಯೆ/ ಜನಾರ್ದನ ಪೂಜಾರಿ ಹಿರಿಯರು, ಅವರ ಮಾತನ್ನು ಗೌರವಿಸುತ್ತೇನೆ/ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲಾರೆ


ಉಡುಪಿ [ನ. 09]  ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಜನರ ಭಾವನೆಗೆ ಸಿಕ್ಕ ಗೌರವ. ಶತಮಾನದ ಕಾನೂನಾತ್ಮಕ  ಹೋರಾಟಕ್ಕೆ ಅಂತಿಮ ತರೆ ಬಿದ್ದಿದೆ. ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಈ ತೀರ್ಪನ್ನು ಮುಕ್ತ ಕಂಠದಿಂದ ಸ್ಚಾಗತಿಸಿದೆ ಎಂದು ಮುಜರಾಯಿ ಕೋಟ ಶ್ರೀನಿವಾಸ ಪೂಜಾರಿಗೆ ಹೇಳಿದ್ದಾರೆ.

ಈ ತೀರ್ಪಿನಲ್ಲಿ ಸೋಲು ಮತ್ತು ಸೋಲಿನ ಲೆಕ್ಕಾಚಾರ ಅನಗತ್ಯ . ನ್ಯಾಯ ಮಂಥನದಿಂದ ಬಂದ ಸಾತ್ವಿಕ ಸಂವಿಧಾನದ ಸರ್ವೋಚ್ಛ ನಿರ್ಣಯ. ಈ ತೀರ್ಪನ್ನು ಸಮಸ್ತ ಭಾರತೀಯರು ಗೌರವಿಸಬೇಕು. ಇಡೀ ದೇಶ ಒಂದು ಅನ್ನೋ ಭಾವನೆ ಮೂಡಿದೆ ಎಂದು ಪೂಜಾರಿ ಹೇಳಿದ್ದಾರೆ.

Latest Videos

undefined

ಕರ್ನಾಟಕದಲ್ಲಿ ಮದ್ಯ ನಿಷೇಧವಾಗುತ್ತಾ?

ಮದ್ಯದಂಗಡಿಗೆ ದೇವರ ಹೆಸರು ಕೈಬಿಡುವ ವಿಚಾರಕ್ಕೆ ಹೊಗಳಿಕೆ ಜನಾರ್ದನ ಪೂಜಾರಿ ನನ್ನನ್ನು ಹೊಗಳಿದ್ದಾರೆ.  ಜನಾರ್ದನ ಪೂಜಾರಿ ರಾಜಕಾರಣದ ಹಿರಿಯ ವ್ಯಕ್ತಿ. ಕಾಲಕಾಲಕ್ಕೆ ತನ್ನ ಅಭಿಪ್ರಾಯ ಹೇಳುತ್ತಾ ಬಂದಿದ್ದಾರೆ. ಮದ್ಯದಂಗಡಿಗೆ ದೇವರ ಹೆಸರು ಬೇಡ ಅನ್ನೋದನ್ನು ಸ್ವಾಗತಿಸಿದ್ದಾರೆ. ಅವರು ಹಿರಿಯರು ಅವರ ಮಾತನ್ನು ಗೌರವಿಸುತ್ತೇನೆ ಎಂದರು.

ದೇವರ ಹೆಸರು ತೆಗೆಸುವ ಬಗ್ಗೆ ನಾನು‌ ಕೇವಲ ಟಿಪ್ಪಣಿ ಕೊಟ್ಟಿದ್ದೇನೆ ಅಷ್ಟೇ. ಈ ಮೂಲಕ ಜನರ ಭಾವನೆಗೆ ಬೆಲೆ ಕೊಟ್ಟಿದ್ದೇನೆ. ಅಬಕಾರಿ, ಕಾನೂನು ಇಲಾಖೆ ಏನು ಹೇಳುತ್ತೆ ನೋಡೋಣ.  ಯಾರಿಗೂ ಗಾಬರಿ ಬೇಡ ಎಂದು ಹೇಳಿದರು.

ಅನರ್ಹರ ಕ್ಷೇತ್ರ ನಮ್ಮ ರಾಜ್ಯದಲ್ಲೇ ಇದೆ. ಕಡಿಮೆ ಅನುದಾನ ದೊರಕಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ‌ ಕೊಟ್ರೆ ತಪ್ಪೇನು? ಅಲ್ಲಿನ ಜನರಿಗೆ ಶಾಸಕರಿಲ್ಲ ಎಂಬ ಭಾವನೆ ಬರಬಾರ್ದು. ಹೆಚ್ಚಿನ ಒತ್ತು‌ ಕೊಡೋದು ಸರ್ಕಾರದ ಜವಾಬ್ದಾರಿ. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ಅನರ್ಹರ ವಿಚಾರ ನಿರ್ಧಾರ ಆಗುತ್ತೆ ಕಾದುನೋಡೋಣ ಎಂದರು.

ದೇವೇಗೌಡರು ಆಯಾ ಕಾಲಕ್ಕೆ ಸೂಕ್ತ ರಾಜಕೀಯ ನಿಲುವು ತೆಗೆದುಕೊಳ್ಳುವ ಅನುಭವಿ. ಅವರ ಮಾತಿಗೆ ಪ್ರತಿಕ್ರಿಯೆ ಕೊಡಲಾರೆ. ಯಡ್ಯೂರಪ್ಪ ಸಿಎಂ ಆಗಿ ಮುಂದುವರಿಲಿ ಅಂದಿದ್ದಾರೆ. ಅವರ ಈ ಭಾವನೆ  ನಮಗೆ ತೃಪ್ತಿ ತಂದಿದೆ ಎಂದರು.

click me!