ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಪೆಂಟಗನ್ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕಾರಣ, ಅವರಿಗೆ ಕೇಳಿದ ಪ್ರಶ್ನೆಗಳ ಕುರಿತು ನೋವನ್ನು ತೋಡಿಕೊಂಡದ್ದು ಹೀಗೆ...
ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಇದಾಗಲೇ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಬಿಗ್ಬಾಸ್ನಿಂದ ಸಕತ್ ಫೇಮಸ್ ಆದವರು. ಆದರೆ ಇವರು ಬಹಳ ಸದ್ದು ಮಾಡಿದ್ದು ‘ಪೆಂಟಗನ್’ ಚಿತ್ರದ ಮೂಲಕ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ತನಿಷಾ ಬಹಳ ಸದ್ದು ಮಾಡಲು ಕಾರಣ, ಅವರು ಇದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕಾರಣ. ಚಿತ್ರ ಬಿಡುಗಡೆಗೂ ಮುನ್ನ, ಬ್ಯಾಕ್‌ಲೆಸ್ ಆಗಿರುವ ತನಿಷಾ ಕುಪ್ಪಂಡ ಲಿಪ್ ಲಾಕ್ ಕೂಡ ಮಾಡಿರುವ ಹಾಡು ರಿಲೀಸ್ ಆಗುತ್ತಿದ್ದಂತೆಯೇ ಹಲ್ಚಲ್ ಸೃಷ್ಟಿಸಿತ್ತು. ಆದರೆ ಈ ಹಾಡು ರಿಲೀಸ್ ಆದ ಬಳಿಕ ಹಾಗೂ ಚಿತ್ರವನ್ನು ನೋಡಿದ ಬಳಿಕ ಕೆಲವರು ತಮಗೆ ಮಾಡಿದ ನೋವು ಹಾಗೂ ಆದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ ತನಿಷಾ.
ರೇಡಿಯೋ ಸಿಟಿ ಕನ್ನಡದಲ್ಲಿ ನೀಡಿರುವ ಸಂದರ್ಶನದಲ್ಲಿ ನಟಿ, ಮೊದಲು ತಾವು ಈ ಚಿತ್ರಕ್ಕೆ ಒಪ್ಪಿಕೊಂಡದ್ದು ಏಕೆ ಎನ್ನುವುದನ್ನು ತಿಳಿಸಿದ್ದಾರೆ. ನಿರ್ದೇಶಕರು ಬಂದು ಈ ಚಿತ್ರದ ಬಗ್ಗೆ ವಿವರಿಸಿದರು. ಇದರಲ್ಲಿ ಇರುವ ಬೋಲ್ಡ್, ಇಂಟಿಮೇಟ್ ದೃಶ್ಯಗಳ ಕುರಿತು ಹೇಳಿದರು. ಲಿಪ್ಲಾಕ್ ಎಷ್ಟು ಹೊತ್ತು ಇರುತ್ತೆ, ಬೋಲ್ಡ್ ಸೀನ್ ಎಷ್ಟು ಹೊತ್ತು ಇರುತ್ತೆ ಎಂದು ಕೇಳಿದೆ. ಇದನ್ನು ಕೇಳಿ ನಿರ್ದೇಶಕರಿಗೆ ಖುಷಿಯಾಯಿತು. ಎಲ್ಲಾ ಸಂಪೂರ್ಣವಾಗಿ ವಿವರಿಸಿದರು. ಚಿತ್ರಕ್ಕೆ ಅಗತ್ಯ ಬಿದ್ದರೆ ಈ ದೃಶ್ಯಗಳನ್ನು ಮಾಡಲು ನಾನು ಸಿದ್ಧ ಎಂದೆ. ನಂತರ ಅವರು ಚಿತ್ರದ ಬಗ್ಗೆ ವಿವರಿಸಿದಾಗ ಓಕೆ ಎಂದು ಹೇಳಿದೆ. ಏನೇ ದೃಶ್ಯವಿದ್ದರೂ ನಾನು ಮಾಡಲು ರೆಡಿ. ಆದರೆ ಮೊದಲೇ ಹೇಳಬೇಕು ಎಂದೆ. ಆಮೇಲೆ ಅದನ್ನು ಮಾಡು, ಇದನ್ನು ಮಾಡು ಎಂದ್ರೆ ನಾನು ಮಾಡಲ್ಲ. ಮೊದಲೇ ಹೇಳಿದ್ರೆ ಎಷ್ಟು ಟೇಕ್ ಇದ್ರೂ ಮಾಡುತ್ತೇನೆ ಎಂದೆ. ಅದನ್ನು ಕೇಳಿ ಅವರು ಒಪ್ಪಿದರು. ಅದರಂತೆಯೇ ನಡೆದುಕೊಂಡರು ಎಂದರು.
ನನ್ನ ಸೈಜ್ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!
ಪೆಂಟಗನ್ ಚಿತ್ರದಲ್ಲಿ ಇಂಟಿಮೇಟ್ ಸೀನ್ ಮಾಡುವಾಗ ತುಂಬಾ ಕನ್ಫರ್ಟ್ ಇತ್ತು. ಎಲ್ಲರನ್ನೂ ನಿರ್ದೇಶಕರು ಹೊರಕ್ಕೆ ಕಳಿಸಿದ್ದರು. ನನಗೆ ಈಜಿ ಫೀಲ್ ಮಾಡಿದರು. ಕ್ಯಾಮೆರಾಮೆನ್, ನಿರ್ದೇಶಕರು ಮತ್ತು ನಾವು ನಟರು ಅಷ್ಟೇ ಇದ್ವಿ. ಆದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ಚಿತ್ರದ ಮೊದಲ ಹಾಡು ಬಿಡುಗಡೆಯಾದಾಗ ತುಂಬಾ ಮಂದಿ ನೆಗೆಟಿವ್ ಆಗಿಯೂ ಕಮೆಂಟ್ ಮಾಡಿದ್ರು. ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಎಂದ್ರು. ಇದು ನನಗೆ ನೋವಾಯಿತು. ಅಸಲಿಗೆ ಆ ಹಾಡಿನಲ್ಲಿ ಸಕತ್ ಬೋಲ್ಡ್ ಸೀನ್ ಇತ್ತು ಬಿಟ್ಟರೆ, ಚಿತ್ರ ನೋಡಿದಾಗ ಇಷ್ಟೇನಾ ಎನ್ನುವ ಹಾಗಿದೆ ಎಂದಿದ್ದಾರೆ.
ಇದೇ ವೇಳೆ ಯೂಟ್ಯೂಬರ್ ಒಬ್ಬರು ಬ್ಯಾಕ್‌ಲೆಸ್ ಮಾಡಿದ್ದೀರಿ, ನ್ಯೂಡ್ ಚಿತ್ರ ಮಾಡುತ್ತೀರಾ ಎಂದುಪ್ರಶ್ನಿಸಿದ ಕಹಿ ಘಟನೆಯನ್ನು ನಟಿ ನೆನಪಿಸಿಕೊಂಡಿದ್ದಾರೆ. ಆ ಯುಟ್ಯೂಬರ್ನನ್ನು ಹೊಡೆಯದೇ ಬಿಟ್ಟಿದ್ದೇ ದೊಡ್ಡದು. ತೀರಾ ಅಸಭ್ಯ ಪ್ರಶ್ನೆ ಕೇಳಿದ. ಅದಕ್ಕೂ ಮುನ್ನ ಇನ್ನೊಂದು ಚಿತ್ರದ ಸಂದರ್ಭದಲ್ಲಿ ಸಂದರ್ಶನ ಮಾಡಿದ್ದ. ಆ ಸಂದರ್ಶನ ಮಿಲಿಯನ್ಗಟ್ಟಲೆ ಓಡಿತ್ತಂತೆ. ನಿಮ್ಮಿಂದ ನಾನು ಉದ್ಧಾರ ಆದೆ ಎನ್ನುತ್ತಲೇ ಈಗ ಇಂಥ ಪ್ರಶ್ನೆ ಕೇಳಿದ. ಇದು ತುಂಬಾ ನೋವಾಯಿತು. ಕೊನೆಗೆ ಅವನಿಗೆ ವಾರ್ನ್ ಮಾಡಿ ಬಿಟ್ಟಾಯಿತು ಎಂದು ನಡೆದ ಘಟನೆಗಳನ್ನು ತನಿಷಾ ಕುಪ್ಪಂಡ ವಿವರಿಸಿದ್ದಾರೆ.
ಪಾರ್ಕ್ನಲ್ಲಿ ಪೊಲೀಸಪ್ಪನ ಕೈಲಿ ಸಿಕ್ಕಾಕ್ಕೊಂಡಿದ್ವಿ! ಬೈಯೋಕೆ ಬಂದ ಆತ ಅಪರ್ಣಾಳನ್ನು ನೋಡಿ...