ನಿವೃತ್ತಿಗೆ ವಾರ ಇರುವಾಗಲೇ ಸಮಾಜ ಕಲ್ಯಾಣ ಅಧಿಕಾರಿ ಆತ್ಮ*ತ್ಯೆ, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್

Published : Mar 21, 2026, 08:30 AM IST
Tumkur Officer tragic end

ಸಾರಾಂಶ

ನಿವೃತ್ತಿಗೆ ವಾರ ಇರುವಾಗಲೇ ಸಮಾಜ ಕಲ್ಯಾಣ ಅಧಿಕಾರಿ ಆತ್ಮ*ತ್ಯೆ, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್, ತನ್ನ ಸಾವಿಗೆ ಕಾರಣ ಏನು ಅನ್ನೋದು ಬಹಿರಂಗಪಡಿಸಿದ್ದಾರೆ. ಆದರೆ ಅಧಿಕಾರಿ ತಂದೆಯ ಸಾವು ಹಾಗೂ ಈಗಿನ ನಿರ್ಧಾರಗಳು ಕೆಲ ಅನುಮಾನಕ್ಕೆ ಕಾರಣವಾಗಿದೆ.

ತುಮಕೂರು (ಮಾ.21) ಕಚೇರಿಯಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದುರಂತ ಅಂತ್ಯ ಕಂಡ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ನಿನ್ನೆ (ಮಾ.20) ಕಚೇರಿಯಲ್ಲೇ ದುರಂತ ಅಂತ್ಯಕಂಡಿದ್ದಾರೆ. ಮೇಲಧಿಕಾರಿ ಕೃಷ್ಣಪ್ಪ ಕಿರುಕುಳ ತಾಳಲಾರದೇ ಈ ನಿರ್ಧಾರ ಮಾಡಿರುವುದಾಗಿ ಮಲ್ಲಿಕಾರ್ಜುನ ವಿಡಿಯೋ ಮೂಲಕ ಹೇಳಿದ್ದಾರೆ. ಸಾವಿಗೂ ಮುನ್ನ ಮಾಡಿರುವ ಕೊನೆಯ ವಿಡಿಯೋ ವನ್ನು ಸ್ವತಃ ಮಲ್ಲಿಕಾರ್ಜುನ ಇತರ ಸಹೋದ್ಯೋಗಿಗಳಿಗೆ ಕಳುಹಿಸಿದ್ದಾರೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ವಾರದಲ್ಲಿ ನಿವೃತ್ತಿ

ಕಳೆದ 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ , ಇನ್ನು ಒಂದೇ ವಾರದಲ್ಲಿ ಇವರ ಸೇವಾ ಅವಧಿ ಮುಕ್ತಾಯಗೊಳ್ಳಬೇಕಿತ್ತು. ನಿವೃತ್ತಿಗೆ ಒಂದು ವಾರ ಇರುವಾಗಲೇ ಮಲ್ಲಿಕಾರ್ಜುನ್ ದುರಂತ ಅಂತ್ಯಕಂಡಿದ್ದಾರೆ. ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕಳವೇ ಈ ನಿರ್ಧಾರಕ್ಕೆ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಸಾವಿಗೂ ಮುನ್ನ ವಿಡಿಯೋದಲ್ಲಿ ಅಧಿಕಾರಿ ಹೇಳಿದ್ದೇನು?

ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನ ಚೆನ್ನಾಗಿ ನೋಡಿಕೊಂಡಿದೆ, ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ, ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು ಆದ್ರೆ ಅದು ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆ ಇರುವುದರಿಂದ ನಮ್ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲಾ, ಅವನಿಗೆ ದೇವರು, ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ದುರಂತ ಸಾವಿನ ಹಿಂದೆ ಅನುಮಾನ

ಅಧಿಕಾರಿ ಮಲ್ಲಿಕಾರ್ಜುನ ನಿವೃತ್ತಿಗೆ ಒಂದು ವಾರ ಇರುವಾಗಲೇ ದುರಂತ ಅಂತ್ಯಕಂಡಿದ್ದಾರೆ. ಮಲ್ಲಿಕಾರ್ಜುನ ತಂದೆ ಕೂಡ ಸಮಾಜ ಕಲ್ಯಾಣ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ ತಂದೆ ನಿವೃತ್ತಿಗೆ ಕೆಲವೇ ತಿಂಗಳು ಇರುವಾಗ ಮೃತಪಟ್ಟಿದ್ದರು. ತಂದೆ ಸಾವಿನಿಂದ ಅನುಕಂಪದ ಆಧಾರದ ಮೇಲೆ ಮಲ್ಲಿಕಾರ್ಜುನಗೆ ಕೆಲಸ ಸಿಕ್ಕಿತ್ತು. ಮಲ್ಲಿಕಾರ್ಜನ ಕೂಡ ಸಮಾಜ ಕಲ್ಯಾಣ ಇಲಾಖೆಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದರು. ಇದೀಗ ಇದೀಗ ಮಲ್ಲಿಕಾರ್ಜುನ್ ಗೆ ನಿವೃತ್ತಿ ಕೇವಲ ಒಂದು ವಾರ ಇರುವಾಗ ದುರಂತ ಅಂತ್ಯಕಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಹೇಳಿರುವಂತೆ ಮೇಲಧಿಕಾರಿಗಳ ಕಿರುಕುಳಕ್ಕೆ ಈ ನಿರ್ಧಾರ ಮಾಡಿಕೊಂಡ್ರಾ, ಇಲ್ಲ ಮಕ್ಕಳಿಗೆ ಕೆಲಸ ಸಿಗಲಿ ಎಂದು ದುರಂತ ಅಂತ್ಯ ಕಂಡಿದ್ದಾರಾ ಅನ್ನೋ ಅನುಮಾನ ಕಾಡಕೊಡಗಿದೆ. ಸದ್ಯ ಪೊಲೀಸರು ಮಲ್ಲಿಕಾರ್ಜುನ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.

 

PREV
Read more Articles on
click me!

Recommended Stories

ಶೇ‌.50 ಮಹಿಳಾ ಮೀಸಲಾತಿ ಮಸೂದೆ ಅನುಮೋದಿಸಲಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ
ಪೊಲೀಸ್ ವಶದಲ್ಲಿದ್ದಾಗಲೇ ವ್ಯಕ್ತಿ ಸಾವು; ಹುಳಿಯಾರು ಠಾಣೆಗೆ ಗ್ರಾಮಸ್ಥರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ