
ತುಮಕೂರು (ಜು.21) ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚುಮಕೂರು ಎಎಸ್ಐ ಗಿರೀಶ್ ಮೃತಪಟ್ಟಿದ್ದಾರೆ. ಕಳೆದ ಶನಿವಾರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ 57 ವರ್ಷದ ಗಿರೀಶ್ ಅಪಾಘಾತದಲ್ಲಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ಪೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಗಿರೀಶ್ ಮೃತಪಟ್ಟಿದ್ದಾರೆ.
ತುಮಕೂರಿನ ಎಸ್ ಪಿ ಕಚೇರಿಯಲ್ಲಿ ರೈಟರ್ ಆಗಿದ್ದ ಗಿರೀಶ್, ಶನಿವಾರ ಸಂಜೆ ಬೈಕ್ ಮೂಲಕ ಮನೆಗೆ ವಾಪಾಸ್ಸಾಗುವ ವೇಳೆ ಘಟನೆ ನಡೆದಿತ್ತು. ತುಮಕೂರು ನಗರದ ಎಸ್ಐಟಿ ಮುಂಭಾಗದಲ್ಲಿ ಅಪಘಾತ ಸಂಭವಿಸಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಸುವೊಂದು ಅಡ್ಡಬಂದಿತ್ತು. ಹೀಗಾಗಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಅಪ್ಪಳಿಸಿ ಬಿದ್ದಿದ್ದದ್ದರು. ನಿಯಮಿತ ವೇಗದಲ್ಲಿದ್ದ ಗಿರೀಶ್ ರಸ್ತೆಗೆ ಅಪ್ಪಳಿಸಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದರು. ತಲೆಗೆ ಗಾಯವಾಗಿದ್ದ ಕಾರಣ ಪರಿಸ್ಥಿತಿ ಗಂಭೀರವಾಗಿತ್ತು.
ಗಾಯಗೊಂಡಿದ್ದ ಗಿರೀಶ್ ನನ್ನ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಮೃತಪಟ್ಟಿದ್ದರು.
ಮಹಿಳೆ ಮೇಲೆ ಹರಿದ ವಾಹನ
ತುಮಕೂರಿನಲ್ಲಿ ಇತ್ತೀಚೆಗೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇಂದು (ಜು.21) ತುಮಕೂರು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಬಳಿ ಅಪಘಾತ ಸಂಭವಿಸಿತ್ತು. ಮಹಿಳೆ ಮೇಲೆ ವಾಹನ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. 45 ವರ್ಷದ ರಾಜೇಶ್ವರಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಹಿಡ್ ಆಂಡ್ ರನ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೃತ ರಾಜೇಶ್ವರಿ ತುಮಕೂರು ನಗರದ ಗುಬ್ಬಿ ಗೇಟ್ ಸರ್ಕಲ್ ನಲ್ಲಿ ಹೊಟೆಲ್ ನಡೆಸುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆ ಹೊಟೆಲ್‌ಗೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತುಮಕೂರು ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾರಿಗೆ ಬಸ್ ಕಾರು ನಡುವೆ ಅಪಘಾತ
ವಿಜಯನಗರದ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನಹಳ್ಳಿ ಹಳ್ಳಿ ಪಟ್ಟಣದ ಬಳಿಕ ಸಾರಿಗೆ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಪುಟ್ಟ ಗಾಯಗಳು ಹೊರತುಪಡಿಸಿದ್ರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಮರಿಯಮ್ಮನಹಳ್ಳಿ ಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.