ದೂರ ದೂರದ ಊರಿಗೆ ಪ್ರಯಾಣಿಸಲು ಹಲವರು ರೈಲ್ವೇ ಪ್ರಯಾಣವನ್ನೇ ಅವಲಂಬಿಸುತ್ತಾರೆ. ಕೆಲವರು ಪ್ರತಿದಿನ ವಿದ್ಯಾಭ್ಯಾಸ, ಉದ್ಯೊಗದ ನಿಮಿತ್ತ ರೈಲಿನಲ್ಲೇ ಪ್ರಯಾಣಿಸುತ್ತಾರೆ (Train travel).ಆದ್ರೆ ಇವರಲ್ಲಿ ಹೆಚ್ಚಿನವರಿಗೂ ಭಾರತೀಯ ರೈಲ್ವೆಯ (Indian Railway) ಕೆಲವೊಂದು ನಿಯಮಗಳು (Rules) ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಇಲ್ಲಿದೆ.
169 ವರ್ಷಗಳ ಹಿಂದೆ ತನ್ನ ಸೇವೆಯನ್ನು ಪ್ರಾರಂಭಿಸಿದ ಭಾರತೀಯ ರೈಲ್ವೆ (Indian Railway), ದೇಶದ ಜನಸಾಮಾನ್ಯರ ಪಾಲಿಗೆ ಅತ್ಯುತ್ತಮ ಮತ್ತು ಉಪಯುಕ್ತವಾದ ಆರ್ಥಿಕ ಸಾರಿಗೆ ವಿಧಾನವೆಂದು ಪರಿಗಣಿಸಲಾಗಿದೆ. ಅದರ 1,15,000 ಕಿಮೀ ಉದ್ದದ ಹಳಿಯೊಂದಿಗೆ, ಇದು ಏಷ್ಯಾದ (Asia) ಅತಿದೊಡ್ಡ ರೈಲು ಜಾಲವಾಗಿದೆ. ಸುಮಾರು 23 ಮಿಲಿಯನ್ ಪ್ರಯಾಣಿಕರು (Passengers) ಪ್ರತಿದಿನ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ ಎಂಬುದು ಬಹಿರಂಗಗೊಂಡಿದೆ. ಇದು ಆಸ್ಟ್ರೇಲಿಯಾದ ಜನಸಂಖ್ಯೆಗೆ ಸಮಾನವಾಗಿದೆ. ಆದರೆ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಅದೆಷ್ಟೋ ಮಂದಿ ರೈಲಿನ ಕೆಲವೊಂದು ಪ್ರಮುಖ ನಿಯಮಗಳ ಬಗ್ಗೆ ಗೊತ್ತೇ ಇಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮಧ್ಯದ ಬರ್ತ್ ನಿವಾಸಿಗಳಿಗೆ ಮಲಗುವ ಸಮಯ: ಮಿಡಲ್ ಬರ್ತ್ ಸೀಟುಗಳನ್ನು ನಿಗದಿಪಡಿಸಿದ ಪ್ರಯಾಣಿಕರು ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಮಲಗುವ ಸಮಯವನ್ನು ಮೀರಿ ಬರ್ತ್‌ನಲ್ಲಿ ಹಾಗೆಯೇ ಮಲಗಲು ಸಾಧ್ಯವಿಲ್ಲ.ಮಲಗುವ ಸಮಯ ಮುಗಿದ ನಂತರ, ಸಹ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮಧ್ಯದ ಬರ್ತ್ ಅನ್ನು ಇಳಿಸಬೇಕು.
20 ರೂ. ಚಹಾಕ್ಕೆ 70 ರೂ. ಬಿಲ್ : ಸೇವಾ ಶುಲ್ಕ ಎಂದ ರೈಲ್ವೇ ಇಲಾಖೆ
ಮುಂದಿನ 2 ನಿಲ್ದಾಣಗಳಿಂದ ರೈಲನ್ನು ಹತ್ತಬಹುದು: ಪ್ರಯಾಣಿಕರು ಬೋರ್ಡಿಂಗ್ ಸ್ಟೇಷನ್‌ನಲ್ಲಿ ತಮ್ಮ ರೈಲನ್ನು ಮಿಸ್ ಮಾಡಿಕೊಂಡರೆ, ಅವರು ಕಾಯ್ದಿರಿಸಿದ ಸೀಟುಗಳನ್ನು ಪಡೆಯಲು ಇನ್ನೂ ಅವಕಾಶವಿದೆ. TTEಗೆ ಪ್ರಯಾಣಿಕರ ಆಸನವನ್ನು ಇತರರಿಗೆ ಕನಿಷ್ಠ ಒಂದು ಗಂಟೆಯವರೆಗೆ ಅಥವಾ ಮುಂದಿನ ಎರಡು ನಿಲ್ದಾಣಗಳನ್ನು ಹಾದು ಹೋಗುವವರೆಗೂ ಯಾರಿಗೂ ಕೊಡುವಂತಿಲ್ಲ. ಎರಡನೇ ನಿಲ್ದಾಣದ ಆಚೆಗೆ, ಯಾವುದೇ RAC/WL ಪ್ರಯಾಣಿಕರಿಗೆ ಆಸನಗಳನ್ನು ರೈಲ್ವೇ ಟಿಕೆಟ್ ವಿಚಾರಕರು ಕೊಡಬಹುದಾಗಿದೆ.
ಅಲ್ಪಾವಧಿಯ ಮಾರ್ಗಗಳಿಗೆ ಪೂರ್ಣ ಮರುಪಾವತಿ ಪಡೆಯಿರಿ: ನೈಸರ್ಗಿಕ ವಿಕೋಪಗಳು, ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ರೈಲು ಪ್ರಯಾಣವು ಅಲ್ಪಾವಧಿಗೆ ಕೊನೆಗೊಳ್ಳುತ್ತದೆ. ರೈಲ್ವೇಗಳು ಬ್ಯಾಕಪ್ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೆ, ಅವರು ನಿಮಗೆ ಸಂಪೂರ್ಣ ಶುಲ್ಕವನ್ನು ಮರುಪಾವತಿಸುತ್ತಾರೆ. ಆದರೆ, ನೀವು ಪರ್ಯಾಯ ರೈಲಿನಲ್ಲಿ ಹೋಗಲು ಸಿದ್ಧರಿಲ್ಲದಿದ್ದರೆ, ಪ್ರಯಾಣಿಸಿದ ವಿಭಾಗದ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಸ್ಟೇಷನ್ ಮಾಸ್ಟರ್‌ಗೆ ಟಿಕೆಟ್ ಹಸ್ತಾಂತರಿಸಿದ ನಂತರ ಉಳಿದ ಬಾಕಿಯನ್ನು ಮರುಪಾವತಿಸಲಾಗುತ್ತದೆ.
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ MRP: 1989ರ ರೈಲ್ವೇ ಕಾಯಿದೆಯ ಪ್ರಕಾರ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಅಧಿಕೃತ ಮಾರಾಟಗಾರರು ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳು, ಪಾನೀಯಗಳು ಅಥವಾ ನೀರಿನ ಬಾಟಲಿಗಳನ್ನು MRPಗಿಂತ ಹೆಚ್ಚಿನದನ್ನು ಮಾರಾಟ ಮಾಡುವಂತಿಲ್ಲ. ಹೀಗೆ ಮಾರಾಟ ಮಾಡಿದ್ದೇ ಆದಲ್ಲಿ ಅದು ಅಪರಾಧವಾಗಿದೆ. ಯಾರಾದರೂ ಹಾಗೆ ಮಾಡುತ್ತಿರುವುದನ್ನು ನೀವು ಕಂಡುಕೊಂಡರೆ, ತಕ್ಷಣವೇ ರೈಲ್ವೆಯ ಟೋಲ್-ಫ್ರೀ ಸಂಖ್ಯೆಗಳಾದ 139 ಅಥವಾ 1800111321 ಗೆ ದೂರು ದಾಖಲಿಸಬಹುದು. ಮಾರಾಟಗಾರನಿಗೆ ಭಾರೀ ದಂಡವನ್ನು ವಿಧಿಸಲಾಗುತ್ತದೆ ಮತ್ತು ಅವನ ಪರವಾನಗಿಯನ್ನು ರದ್ದುಗೊಳಿಸಬಹುದು.
ಕಿರುಚಾಟ ಕೇಳಿ ಬೆಚ್ಚಿ ಬಿದ್ದ ರೈಲು ಚಾಲಕ: ಇಂಜಿನ್ ಅಡಿಯೇ 190 ಕಿಮೀ ಚಲಿಸಿದ ಯುವಕ
ರಾತ್ರಿ 10 ಗಂಟೆಯ ನಂತರ ಟಿಟಿಇಗಳು ತೊಂದರೆ ನೀಡುವಂತಿಲ್ಲ: ಪ್ರಯಾಣದ ಸಮಯದಲ್ಲಿ, ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (TTE) ಟಿಕೆಟ್ ಪರಿಶೀಲಿಸಲು ಬರುತ್ತಾರೆ. ಆದರೆ ಅವರೂ ಸಹ ಯಾವಾಗ ಬೇಕಾದರೂ ಬಂದು ಹಾಗೆ ಟಿಕೆಟ್ ಚೆಕ್ ಮಾಡುವಂತಿಲ್ಲ. ಅಂದರೆ, ಕೆಲವೊಮ್ಮೆ ಟಿಟಿಇ ರಾತ್ರಿ ಪ್ರಯಾಣಿಕರು ಮಲಗಿದ ಮೇಲೆ ಬಂದು ಪ್ರಯಾಣಿಕರನ್ನು ಎಬ್ಬಿಸಿ ಟಿಕೆಟ್ ಮತ್ತು ಐಡಿಯನ್ನು ಪರಿಶೀಲಿಸುತ್ತಾರೆ. ಆದರೆ, ಭಾರತೀಯ ರೈಲ್ವೇ ಟಿಕೆಟ್ ತಪಾಸಣೆ ನಿಯಮಗಳ ಪ್ರಕಾರ ರಾತ್ರಿ 10ಗಂಟೆ ಬಳಿಕ ಟಿಟಿಇ ಬಂದು ನಿಮ್ಮ ಟಿಕೆಟ್ ಪರಿಶೀಲಿಸುವಂತಿಲ್ಲ. ಟಿಟಿಇ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಟಿಕೆಟ್‌ಗಳನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ರಾತ್ರಿ 10ಗಂಟೆ ನಂತರ ಪ್ರಯಾಣ ಆರಂಭಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ
ರೈಲಿನಲ್ಲಿರುವ ಕ್ಲೀನ್ ಇಲ್ಲದ ವಾಶ್‌ರೂಮ್‌ಗಳ ಬಗ್ಗೆ cleanmycoach.comನಲ್ಲಿ ದೂರು ನೀಡಬಹುದು. ನಿಮಗೆ ಸೇವೆ ಸಲ್ಲಿಸಲು ಮುಂದಿನ ನಿಲ್ದಾಣದಲ್ಲಿ ನಿರ್ವಹಣಾ ತಂಡ ಸಿದ್ಧವಾಗಿರುತ್ತದೆ.