ಬರುತ್ತಿದೆ ಯಮಹಾ ಎಲೆಕ್ಟ್ರಿಕಲ್ ಸ್ಪೋರ್ಟ್ಸ್ ಬೈಕ್-ಬೆಲೆ ಏಷ್ಟು?

By Web DeskFirst Published Sep 17, 2018, 3:56 PM IST
Highlights

ಭಾರತದ ಬೈಕ್ ಹಾಗೂ ಸ್ಕೂಟರ್ ಮಾರುಕಟ್ಟೆಯನ್ನ ಶೀಘ್ರದಲ್ಲೇ ಎಲೆಕ್ಟ್ರಿಕಲ್ ಬೈಕ್‌ಗಳು ಆಕ್ರಮಿಸಿಕೊಳ್ಳಲಿದೆ. ಇದೀಗ ಯಮಹಾ ಮೋಟಾರು ಕೂಡ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಬೆಂಗಳೂರು(ಸೆ.17): ತೈಲ ಬೆಲೆ ಏರಿಕೆಯಿಂದಾಗಿ ಇದೀಗ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದೀಗ ಹಲವು ಕಂಪೆನಿಗಳು ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಯಮಹಾ ಕೂಡ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಭಾರತದಲ್ಲಿ ಯಮಹಾ ಬೈಕ್‌ಗಳು ಹೆಚ್ಚು ಜನರನ್ನ ಮೋಡಿ ಮಾಡಿದೆ. ಯುವಕರ ನೆಚ್ಚಿನ ಬೈಕ್ ಆಗಿರುವ ಯಮಹಾ ಇದೀಗ ಎಲೆಕ್ಟ್ರಿಕಲ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ.

ಜಪಾನ್ ಹಾಗೂ ಭಾರತದ 100 ಇಂಜಿನಿಯರ್‌ಗಳು ಈಗಾಗಲೇ ಯಮಹಾ ಎಲೆಕ್ಟ್ರಿಕಲ್ ಬೈಕ್ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಜಪಾನ್ ಹಾಗೂ ತೈವಾನ್ ದೇಶಗಲ್ಲಿ ಈಗಾಗಲೇ ಯಮಹಾ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ ಮಾಡಿದೆ. ಆದರೆ ಕಡಿಮೆ ಬೆಲೆ ಹಾಗೂ ಗರಿಷ್ಠ ಕೀಮಿ ಪ್ರಯಾಣ ನೀಡುವ ಆಧುನಿಕ ತಂತ್ರಜ್ಞಾನ ಬಳಸಿ ಎಲೆಕ್ಟ್ರಿಕಲ್ ಬೈಕ್ ತಯಾರಿಸಲು ಯಮಹಾ ಮುಂದಾಗಿದೆ.

2022ರ ವೇಳೆ ಯಮಹಾ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಭಾರತದ ರಸ್ತೆ, ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕಲ್ ಬೈಕ್ ತಯಾರಿಸಲು ಯಮಹಾ ಮುಂದಾಗಿದೆ. 

ಎಲೆಕ್ಟ್ರಿಕಲ್ ಬೈಕ್ ಕುರಿತ ಹೆಚ್ಚಿನ ಮಾಹಿತಿಗಳನ್ನ ಯಮಹಾ ಬಹಿರಂಗ ಪಡಿಸಿಲ್ಲ. ಬೆಲೆ, ಕೀಮಿ ಹಾಗೂ ಬ್ಯಾಟರಿ ಚಾರ್ಜ್ ಮಾಹಿತಿಗಳನ್ನ ಯಮಹಾ ಶೀಘ್ರದಲ್ಲೇ ಪ್ರಕಟಿಸಲಿದೆ.
 

click me!