ನೋಬೆಲ್ ಪ್ರಶಸ್ತಿ ಗೆದ್ದ ಸಾಧಕಿಯನ್ನ ಅವಮಾನಿಸಿತಾ ವಿಕಿಪೀಡಿಯಾ?

By Web DeskFirst Published Oct 3, 2018, 7:43 PM IST
Highlights

ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಪಡೆದರೂ ಪಾಪ್ಯುಲಾರಿಟಿ ಇಲ್ಲ ಅನ್ನೋ ಕಾರಣಕ್ಕೆ ವಿಕಿಪೀಡಿಯಾ ವಿವರ ಪ್ರಕಟಿಸಲು ನಿರಾಕರಿಸಿದೆ. ಅಷ್ಟಕ್ಕೂ ನೋಬೆಲ್ ಪ್ರಶಸ್ತಿ ಪಡೆದ ಮಹಿಳಾ ಸಾಧಕಿಗೆ ಈ ರೀತಿ ಅವಮಾನ ಮಾಡಿದ್ದೇಕೆ? ಇಲ್ಲಿದೆ.

ಕೆನಡ(ಅ.03): ಅಲ್ಟ್ರಾಶಾಟ್ ಲೇಸರ್ ಸಂಶೋಧನೆಗೆ ವಾಟೆರ್ಲೋ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಉಪನ್ಯಾಸಕಿ ಡೋನಾ ಸ್ಟ್ರಿಕ್‌ಲೆಂಡ್  ನೋಬೆಲ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆದರೆ ಈ ಸಾಧಕಿ ಹೆಚ್ಚು ಪ್ರಸಿದ್ಧಿ ಹೊಂದಿಲ್ಲ ಎಂಬ ಕಾರಣಕ್ಕೆ ವಿಕಿಪೀಡಿಯಾ ಡೋನಾ ಅವರ ಪ್ರೊಫೈಲ್ ಪ್ರಕಟಿಸಲು ಹಿಂದೇಟು ಹಾಕಿತ್ತು.

ಪ್ರತಿಷ್ಠಿತ ನೋಬೆಲ್ ಪ್ರಶಸ್ತಿಗೆ ಡೋನಾ ಸ್ಟ್ರಿಕ್‌ಲೆಂಡ್ ಹೆಸರು ಪ್ರಕಟಗೊಳ್ಳುತ್ತಿದ್ದಂತೆ, ಈ ಸಾಧಕಿ ಕುರಿತು ವಿವರ ಪ್ರಕಟಿಸಲು ವಿಕಿಪಿಡಿಯಾ ನಿರಾಕರಿಸಿತ್ತು. ಇಷ್ಟೇ ಅಲ್ಲ, ಡೋನಾ ಹೆಸರು ಪ್ರಚಲಿತದಲ್ಲಿಲ್ಲ.  ಇವರಿಗೆ ಯಾವುದೇ ಪಾಪ್ಯುಲಾರಿಟಿ ಕೂಡ ಇಲ್ಲ ಹೀಗಾಗಿ ಇವರ ವಿವರವನ್ನ ವಿಕಿಪೀಡಿಯಾ ಪ್ರಕಟಿಸಲ್ಲ ಎಂದಿತ್ತು.

ವಿಶ್ವವಿದ್ಯಾನಿಲಯದಲ್ಲೂ ಡೋನಾ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರಲಿಲ್ಲ. ಆದರೆ ನೋಬೆಲ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ, ವಿಶ್ವವಿದ್ಯಾನಿಲಯ ಹಾಗೂ ವಿಕಿಪಿಡಿಯಾ ಡೋನಾ ಅವರ ವಿವರವನ್ನ ಪ್ರಕಟಿಸಿದೆ.

click me!