ಸುಜುಕಿ ಬರ್ಗಮನ್ ಸ್ಕೂಟರ್ ಬಿಡುಗಡೆ-ಆಕ್ಟೀವಾಗೆ ತೀವ್ರ ಪೈಪೋಟಿ!

By Suvarna NewsFirst Published Jul 19, 2018, 7:44 PM IST
Highlights

ಸುಜುಕಿ ಮೋಟಾರ್ ಸಂಸ್ಥೆಯ ಬರ್ಗಮನ್ ಸ್ಟ್ರೀಟ್ ಬಿಡುಗೆಯಾಗಿದೆ. ಬರ್ಗಮನ್ ಸ್ಟ್ರೀಟ್ ಬಿಡುಗಡೆಯಿಂದ ಹೊಂಡಾ ಆಕ್ಟೀವಾಗೆ ಪೈಪೋಟಿ ಎದುರಾಗಿದೆ.ಈ ಸ್ಕೂಟರ್ ಬೆಲೆ ಎಷ್ಟು? ಇದರ ವಿಶೇಷತೆ ಏನು?  

ಬೆಂಗಳೂರು(ಜು.19): ಸುಜುಕಿ ಮೋಟಾರ್ ಸಂಸ್ಥೆಯ ನೂತನ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬಿಡುಗಡಯಾಗಿದೆ. ಭಾರತದ ಜನಪ್ರೀಯ ಹೊಂಡಾ ಆಕ್ಟೀವಾಗಿ ಪೈಪೋಟಿ ನೀಡಲು ಇದೀಗ ಸುಜುಕಿ ಬರ್ಗಮನ್ ಸ್ಟ್ರೀಟ್ ರೋಡಿಗಳಿದಿದೆ.

ಸ್ಪೋರ್ಟ್ ಲುಕ್‌ ಹಾಗೂ ಅತ್ಯಾಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆಯಾಗಿರುವ ಬರ್ಗಮನ್ ಸ್ಟ್ರೀಟ್ ಯುವ ಬೈಕ್ ಪ್ರೀಯರನ್ನ ಮೋಡಿ ಮಾಡಲಿದೆ. ಡಿಜಿಟಲ್ ಮೀಟರ್ ಹಾಗೂ ಎಲ್ಇಡಿ ಹೆಡ್‌ಲೈಟ್ಸ್ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ವಿಶೇಷತೆ.

125 ಸಿಸಿ ಇಂಜಿನ್, 7.8ಪಿಎಸ್ ನೊಂದಿಗೆ 7000 ಆರ್‌ಪಿಎಂ ಹೊಂದಿದೆ. ಇದರ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ 53 ಕೀಲೋಮೀಟರ್. ಮುಂದಿನ ಚಕ್ರ 12 ಇಂಚು ಅಲೋಯ್ ವೀಲ್ಸ್ ಹಾಗೂ ಹಿಂದಿನ ಚಕ್ರ 10 ಇಂಚು ಅಲೋಯ್ ವಿಲ್ಸ್ ಬರ್ಗಮನ್ ಸ್ಟ್ರೀಟ್ ವಿಶೇಷ.

ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿರೋ ಬರ್ಗಮನ್ ಸ್ಟ್ರೀಟ್, ಭಾರತದ ಮಾರುಕಟ್ಟೆಯಲ್ಲಿ ಕಂಬೈನಡ್ ಬ್ರೇಕಿಂಗ್ ಸಿಸ್ಟಮ್(ಸಿಬಿಎಸ್) ಹೊಂದಿರೋ ಏಕೈಕ ಸ್ಕೂಟರ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

 

click me!