
ಲಂಡನ್(ಸೆ.18): ಲಕ್ಸುರಿ ರೋಲ್ಸ್ ರಾಯ್ ಇದೇ ಮೊದಲ ಬಾರಿಗೆ ಬಿಡುಗಡೆಗೊಳಿಸಿರುವ SUV ಕಾರು ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನೂತನ ಕಾರಿಗೆ ಕಲಿನಿಯನ್ ಎಂದು ಹೆಸರಿಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿರುವ ವಿಶ್ವದ ಅತೀ ದೊಡ್ಡಕಲಿನಿಯನ್ ಡೈಮಂಡ್ ಗಣಿ ಹೆಸರನ್ನೇ ಈ ಕಾರಿಗೆ ಇಡಲಾಗಿದೆ.
ಇತರ ಕಾರುಗಳಿಗೆ ಹೋಲಿಸಿದರೆ ರೋಲ್ಸ್ ರಾಯ್ಸ್ ಕಾರಿನ ತಂತ್ರಜ್ಞಾನಕ್ಕೆ ಮನಸೋಲುವುದದು ಖಚಿತ. ಜಗತ್ತಿನ ಇತರ ಐಷಾರಾಮಿ ಕಾರುಗಳಿಗಿಂತ ರೋಲ್ಸ್ ರಾಯ್ಸ್ ಕಲಿನಿಯರ್ ಕಾರು ಮುಂದಿದೆ.
ನೂತನ ಕಾರಿನ ಪ್ರತಿ ಬಿಡಿಭಾಗಗಳಲ್ಲಿ ಒಂದೊಂದು ವಿಶೇಷತೆ ಇದೆ. ಹೊರ ಹಾಗೂ ಒಳವಿನ್ಯಾಸ ಆಕರ್ಷಕವಾಗಿದೆ. ಈ ಕಾರಿನ ಬೆಲೆ 8 ಕೋಟಿ(ಎಕ್ಸ್ ಶೋ ರೂಂ). ಈ ದುಬಾರಿ ಕಾರು ಜನಸಾಮಾನ್ಯರಿಗೆ ಕನಸಿನ ಮಾತು.